Skip to main content
ವಿಡಿಯೋ
general

ಜಿಬಿಎ ಚುನಾವಣೆಗೂ ಮುನ್ನ ಎಸ್ಐಆರ್ ಪ್ರಕ್ರಿಯೆ - ಪರಿಣಾಮವೇನು!?

By Shravanthi R
ಜಿಬಿಎ ಚುನಾವಣೆಗೂ ಮುನ್ನ ಎಸ್ಐಆರ್ ಪ್ರಕ್ರಿಯೆ - ಪರಿಣಾಮವೇನು!?

ದೇಶದೆಲ್ಲೆಡೆ ವಿವಾದದಲೆ ಸೃಷ್ಟಿಸಿರುವ ಎಸ್ಐಆರ್ - ಸ್ಪೆಷಲ್ ಇನ್‌ಟೆನ್‌ಸಿವ್‌ ರಿಪೋರ್ಟ್ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯು, ರಾಜ್ಯದಲ್ಲೂ ಕಾಲಿಡಲಿದೆ ಎಂದು ತಿಳಿಸಲಾಗಿದೆ. ಸದ್ಯ, ಸುದ್ದಿಯಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಹಾಗೂ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ, ಈ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.

ಈ ಹಿನ್ನಲೆಯಾಗಿ, ಈಗಾಗಲೇ ಪ್ರಕಟಗೊಂಡಿರುವ ಮತದಾರರ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗುವ ಸಂಭವವಿದೆ ಎಂದು ವರದಿಯೊಂದರಲ್ಲಿ ತಿಳಿಸಲಾಗಿದೆ. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆ ನಡೆಸಲು ಪೂರ್ವ ಸಿದ್ಧತೆ ನಡೆಸಲಾಗಿ ರಾಜ್ಯ ಮುಖ್ಯ ಚುನಾವಣಾ ಆಯೋಗ ತೊಡಗಿಕೊಂಡಿದೆ ಎಂದು ಹೇಳಲಾಗಿದೆ. 

ಮತದಾರರ ಹಕ್ಕನ್ನು ರಕ್ಷಿಸುವ ಹಾಗೂ ಮತದಾರರ ಅನಧಿಕೃತ ಮಾಹಿತಿ ಮತ್ತು ಅಕ್ರಮ ಮತದಾರ ಗುರುತಿನ ಚೀಟಿ ಹೊಂದಿರುವವರ ಹೆಸರನ್ನು ಪತ್ತೆಹಚ್ಚಿ, ಅವರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ನಿರೀಕ್ಷಿಸಲಾಗಿದ್ದು, ನಗರದಲ್ಲಿ ಕೈಗೊಳ್ಳುವ ಚುನಾವಣೆಗೂ ಮುನ್ನ ಇದು ಯಾವ ರೀತಿ ಪರಿಣಮಿಸಲಿದೆ ಎಂದು ಕಾಯ್ದಿರಿಸಲಾಗಿದೆ. realme NARZO 80 Lite 5G (Crystal Purple, 6GB+128GB) | 6000mAh Long-Lasting Battery | MediaTek Dimensity 6300 5G | AI Assist | IP64 Rated Water & Dust Resistance | Military-Grade Durability

ಯಾಕಾಗಿ ರಾಜ್ಯದಲ್ಲಿ ಎಸ್‌ಐಆರ್‌ - 

ಇತ್ತೀಚಿಗೆ ವರದಿಯಾಗಿರುವಂತೆ, ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರು ಪ್ರತಿಪಾದಿಸಿರುವ ʻವೋಟ್ ಚೋರಿʼ ಪ್ರಕರಣ ಕರ್ನಾಟಕದಲ್ಲಿ ಸದ್ದು ಮಾಡಿತ್ತು. ನಕಲಿ ಮತದಾನಗಳು ನಡೆದಿವೆ ಎನ್ನಲಾಗಿ, ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿತ್ತು. ಕರ್ನಾಟಕದ ಆಳಂದ ಹಾಗೂ ಮಹಾದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಳ್ಳತನದ ಆರೋಪವನ್ನು ಬಯಲು ಮಾಡಲಾಗಿತ್ತು. ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಮುಂದಾಗಿದೆ. 

ಮಾಹಿತಿ ಪ್ರಕಾರ, ರಾಜ್ಯ ಸರ್ಕಾರವು ಏಪ್ರಿಲ್ ಮೇ ತಿಂಗಳ ಮಧ್ಯಭಾಗದಲ್ಲಿ ವಿವಿಧ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಮಟ್ಟದ ಚುನಾವಣೆಯನ್ನು, ಮಹಾನಗರ ಪಾಲಿಕೆ ಚುನಾವಣೆಯನ್ನು ಏಕಕಾಲಕ್ಕೆ ನಡೆಸಲು ತೀರ್ಮಾನಿಸಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಾಲಾ ಹಂತದ ಪರೀಕ್ಷೆಗಳು ನಡೆಯುವ ಹಿನ್ನೆಲೆಯಲ್ಲಿ, ಜೂನ್ ತಿಂಗಳಲ್ಲಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಗಡುವು ನೀಡಿದೆ. ಇದನ್ನೂ ಓದಿ: ಹತ್ತು ವರ್ಷಗಳಿಂದ ಚುನಾವಣೆ ನಡೆಯದಿರಲು ಪ್ರಮುಖ ಕಾರಣಗಳು ಇಲ್ಲಿವೆ