Skip to main content
ವಿಡಿಯೋ
general

ಜಿಬಿಎ ಎಲೆಕ್ಷನ್‌ - ಮತದಾನ ವಿಧಾನ ಯಾವುದು - ಬ್ಯಾಲೆಟ್‌ ಪೇಪರ್‌ vs ಇವಿಎಂ!?

By Shravanthi R
ಜಿಬಿಎ ಎಲೆಕ್ಷನ್‌ - ಮತದಾನ ವಿಧಾನ ಯಾವುದು - ಬ್ಯಾಲೆಟ್‌ ಪೇಪರ್‌ vs ಇವಿಎಂ!?

ಬಹಳ ನಿರೀಕ್ಷೆ ಹುಟ್ಟಿಸಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯು ಸುದ್ದಿ ಮುನ್ನಲೆ ಪಡೆದಿದೆ. ಇದೀಗ ಚುನಾವಣೆಗೆ ಮತದಾನವು ಯಾವ ವಿಧದಲ್ಲಿ ಜರುಗಲಿದೆ ಎಂಬ ಕುತೂಹಲವನ್ನು ಮತದಾರರಲ್ಲಿ ಮೂಡಿಸಿದೆ. ಚುನಾವಣೆಗೆ ಮತಯಂತ್ರ(ಇವಿಎಂ ಮಷಿನ್‌) ಇಲ್ಲವೇ ಬ್ಯಾಲೆಟ್‌ ಪೇಪರ್‌(ಮತಪತ್ರ) ಬಳಕೆ ಮಾಡಲಾಗುವುದೇ ಎನ್ನುವ ಗೊಂದಲ ಮನೆಮಾಡಿದೆ ಎನ್ನಲಾಗಿದೆ.

ಬಹಳ ನಿರೀಕ್ಷೆ ಹುಟ್ಟಿಸಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಯು ಸುದ್ದಿ ಮುನ್ನಲೆ ಪಡೆದಿದೆ. ಇದೀಗ ಚುನಾವಣೆಗೆ ಮತದಾನವು ಯಾವ ವಿಧದಲ್ಲಿ ಜರುಗಲಿದೆ ಎಂಬ ಕುತೂಹಲವನ್ನು ಮತದಾರರಲ್ಲಿ ಮೂಡಿಸಿದೆ. ಚುನಾವಣೆಗೆ ಮತಯಂತ್ರ(ಇವಿಎಂ ಮಷಿನ್‌) ಇಲ್ಲವೇ ಬ್ಯಾಲೆಟ್‌ ಪೇಪರ್‌(ಮತಪತ್ರ) ಬಳಕೆ ಮಾಡಲಾಗುವುದೇ ಎನ್ನುವ ಗೊಂದಲ ಮನೆಮಾಡಿದೆ ಎನ್ನಲಾಗಿದೆ. 

ಒಂದಿಲ್ಲೊಂದು ಕಾರಣಗಳಿಂದಾಗಿ ವಿಳಂಬಗೊಂಡಿದ್ದ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣಾ ಪ್ರಕ್ರಿಯೆಗೆ ಇದೀಗ ಸುಪ್ರೀಂಕೋರ್ಟ್‌ ಗಡುವು ಸೂಚಿಸಿದೆ. ಜೂನ್‌ ಮಾಸಾಂತ್ಯದೊಳಗೆ ನಡೆಸಬೇಕಿರುವ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರ ಸೂಕ್ತವೋ ಅಥವಾ ಸಾಂಪ್ರಾದಾಯಿಕ ಬ್ಯಾಲೆಟ್‌ ಪೇಪರ್‌(ಮತಪತ್ರ) ಒಳಿತೋ ಎನ್ನುವ ಅಂಶವನ್ನು ರಾಜ್ಯ ಚುನಾವಣಾ ಆಯೋಗವು(ಎಸ್‌ಇಸಿ) ಈವರೆಗೂ ಸ್ಪಷ್ಟಪಡಿಸಿಲ್ಲ.

ಈ ಬಗ್ಗೆ ರಾಜ್ಯ ಚುನಾವಣಾ ಆಯೋಗವು ಕೈಗೊಳ್ಳುವ ನಿರ್ಧಾರವನ್ನು ನಿರೀಕ್ಷಿಸಲಾಗಿದೆ. ಕೆಲ ತಿಂಗಳ ಹಿಂದೆ, ರಾಜ್ಯ ಸರ್ಕಾರವು ಸ್ಥಳೀಯ ಚುನಾವಣೆಗಳಿಗೆ ಇವಿಎಂ ಬದಲಿಗೆ ಬ್ಯಾಲೆಟ್‌ ಪೇಪರ್‌ ಬಳಸಿ ಹಾಲಿ ಕಾನೂನಿನ ತಿದ್ದುಪಡಿ ಮಾಡಿತ್ತು ಎನ್ನಲಾಗಿದೆ. ಇವಿಎಂ, ಮತಗಳ್ಳತನದ ಆರೋಪದ ಹಿನ್ನಲೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ರಾಷ್ಟ್ರವ್ಯಾಪ್ತಿ ಅಭಿಯಾನವನ್ನು ನಡೆಸಲಾಗುತ್ತಿದೆ. 

ವೋಟ್‌ ಚೋರಿ ಪ್ರಕರಣ ಪರಿಣಾಮ, ಇವಿಎಂ ಸೇಫೋ ಇಲ್ಲವೋ ಎನ್ನುವ ಚರ್ಚೆ ಹಬ್ಬಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗವು ತಿಳಿಸಲಿರುವ ಅಂತಿಮ ತೀರ್ಮಾನದ ಬಗ್ಗೆ ಮತದಾರರು ಕಾತುರರಾಗಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ಹೊರಡಿಸಿದ ಗ್ರೇಟರ್‌ ಬೆಂಗಳೂರು ಗವರ್ನೆನ್ಸ್‌ ಆಕ್ಟ್‌ -2024 ರ ಪ್ರಕಾರ, ಚುನಾವಣೆಗಳನ್ನು ಬ್ಯಾಲೆಟ್‌ ಅಥವಾ ಇವಿಎಂ ಬಳಕೆ ಮಾಡಲು ಅವಕಾಶವಿದೆ.  Redmi 13 5G Prime Edition, Hawaiian Blue, 8GB+128GB | India Debut SD 4 Gen 2 AE | 108MP Pro Grade Camera | 6.79in Largest Display in Segment

ಇನ್ನೂ ಈ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗದ ಸಲಹೆ ಪಡೆಯುವ ಅಗತ್ಯವಿಲ್ಲವೆಂದು ತಿಳಿಸಲಾಗಿದೆ. ರಾಜ್ಯ ಚುನಾವಣಾ ಆಯೋಗವು ಅದರಷ್ಟೇ ಅಧಿಕಾರವನ್ನು ಹೊಂದಿದೆ ಎನ್ನುವ ಹಿನ್ನಲೆಯಲ್ಲಿ ಸಮರ್ಥನೆ ತೋರಿದೆ. ಚುನಾವಣ ಬಣಗಳು ಈ ಬಗ್ಗೆ ಪರ-ವಿರೋಧವನ್ನು ವ್ಯಕ್ತಪಡಿಸಿದ್ದು, ಬಿಜೆಪಿ ಮತಪತ್ರ ಬಳಕೆಗೆ ಒಲ್ಲೆ ಎನ್ನುತ್ತಿದ್ದರೆ, ಕಾಂಗ್ರೆಸ್‌ ಇದಕ್ಕೆ ಕಾನೂನಿನಲ್ಲೇ ಅವಕಾಶವಿದೆ ಎಂದು ಹೇಳಿದೆ. 

ಬ್ಯಾಲೆಟ್‌ ಪೇಪರ್‌ ಬಳಕೆಗೆ ಒಲವು - 

ಜಿಬಿಎ ವ್ಯಾಪ್ತಿಯಲ್ಲಿ ಬ್ಯಾಲೆಟ್‌ ಪೇಪರ್‌ ಬಳಕೆಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದ್ದು, ಈ ಬಗ್ಗೆ ಅನುವು ಮಾಡಿಕೊಡಲು ಹಲವು ತಿದ್ದುಪಡಿ ಮಸೂದೆ 2025 ಗಳನ್ನು ರೂಪಿಸಲಾಗಿತ್ತೆನ್ನಲಾಗಿದೆ. ಈ ಹೊಸ ಕಾನೂನಿಗೆ ಒಪ್ಪಿಗೆ ಸಿಕ್ಕಿದರೆ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೂ ಬ್ಯಾಲೆಟ್‌ ಪೇಪರ್‌ ಮೂಲಕ ಮತದಾನ ಆಗಲಿದೆ ಎಂದು ಆಶಿಸಲಾಗಿದೆ. ಇದನ್ನೂ ಓದಿ: ಜಿಬಿಎ ಮತ್ತು ಪಂಚಾಯತ್ ಚುನಾವಣೆ: ಕಾಂಗ್ರೆಸ್ VS ಬಿಜೆಪಿ - ಯಾರಿಗೆ ಜಯದ ಮಾಲೆ?