ಕಾಂಗ್ರೆಸ್‌ಗೆ ಅಗ್ನಿಪರೀಕ್ಷೆ 2023ರಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಇದು ಎರಡನೇ ವರ್ಷದ ಸಂಭ್ರಮ ಹಾಗೂ ಪರೀಕ್ಷೆಯ ಕಾಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಾಯಕತ್ವದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಶಪಥ ಮಾಡಿರುವ ಕಾಂಗ್ರೆಸ್, 2026ರಲ್ಲಿ ಬಾಕಿ ಉಳಿದಿರುವ ಬಿಬಿಎಂಪಿ (GBA) ಸೇರಿದಂತೆ ಒಟ್ಟು 8 ಪ್ರಮುಖ ಚುನಾವಣೆಗಳನ್ನು ಎದುರಿಸಲಿದೆ.
ಕರ್ನಾಟಕದಲ್ಲಿ ನಡೆಯುವ ಚುನಾವಣೆಗಳ ಪಟ್ಟಿ:
ಗ್ರಾಮ ಪಂಚಾಯತಿ ಚುನಾವಣೆ
ಜಿಲ್ಲಾ ಪಂಚಾಯತಿ ಚುನಾವಣೆ
ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ ಚುನಾವಣೆ
ಜಿಬಿಎ ಪಾಲಿಕೆ ಚುನಾವಣೆ
ಮಹಾ ನಗರ ಪಾಲಿಕೆ ಚುನಾವಣೆ
ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ
ವಿಧಾನ ಪರಿಷತ್ ಚುನಾವಣೆSALVE Clover Anti Tarnish Bracelet for Women Stylish | Stainless Steel Bracelet for Woman | Fashion Jewellery for Women Aesthetic Accessories for Girls Chain Bracelet Gold
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ:
ಕೇರಳ: ಆಡಳಿತಾರೂಢ ಎಲ್‌ಡಿಎಫ್ (LDF) ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಆದರೆ ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ನೇತೃತ್ವದ ಯುಡಿಎಫ್ (UDF) ಮುನ್ನಡೆ ಸಾಧಿಸಿರುವುದು ಎಲ್‌ಡಿಎಫ್‌ಗೆ ಆತಂಕ ತಂದಿದೆ.
ತಮಿಳುನಾಡು: ಇಲ್ಲಿನ ರಾಜಕೀಯ ಇತಿಹಾಸವೇ ಬದಲಾಗುವ ಮುನ್ಸೂಚನೆ ಸಿಗುತ್ತಿದೆ. ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಸಾಂಪ್ರದಾಯಿಕ ಹೋರಾಟಕ್ಕೆ ನಟ ವಿಜಯ್ ಅವರ ರಾಜಕೀಯ ಪ್ರವೇಶವು ಹೊಸ ಆಯಾಮ ನೀಡಿದ್ದು, ತ್ರಿಕೋನ ಸ್ಪರ್ಧೆ ನಿರೀಕ್ಷಿತವಾಗಿದೆ.ಇದನ್ನು ಓದಿ: ಚುನಾವಣೆಗೆ ಸುಪ್ರೀಂ ಗಡುವು - ರಾಜ್ಯ ಸರ್ಕಾರಕ್ಕೆ ಎದುರಾಗಲಿದೆಯೇ ಸತ್ವಪರೀಕ್ಷೆ!?
ಪಶ್ಚಿಮ ಬಂಗಾಳ: 2011ರಿಂದ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯ ವಿಷಯಗಳಲ್ಲಿ ಬಿಜೆಪಿ ಪ್ರಬಲ ಸವಾಲು ಒಡ್ಡುತ್ತಿದೆ. ಇದು ಈ ವರ್ಷದ ಅತ್ಯಂತ ಹೈ-ವೋಲ್ಟೇಜ್ ಕಣವಾಗಲಿದೆ.
ಅಸ್ಸಾಂ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಧಿಕಾರ ಉಳಿಸಿಕೊಳ್ಳುವ ತಂತ್ರ ಹಣೆದಿದ್ದರೆ, ಗೌರವ್ ಗೊಗೊಯ್ ಕಾಂಗ್ರೆಸ್‌ನ ಭರವಸೆಯಾಗಿದ್ದಾರೆ.ಇದನ್ನು ಓದಿ: ಕರ್ನಾಟಕ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ - ಕ್ಷೇತ್ರ ಮರುವಿಂಗಡಣೆ, ಮೀಸಲಾತಿ ಹಂಚಿಕೆ ಪ್ರಕಟಕ್ಕೆ ವೇಗ!?
ಪುದುಚೇರಿ: ಜೂನ್ 15ಕ್ಕೆ ವಿಧಾನಸಭೆಯ ಅವಧಿ ಮುಗಿಯಲಿದ್ದು, ಎನ್‌ಡಿಎ ಮತ್ತು ಎಸ್‌ಪಿಎ ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ.ಇದನ್ನು ಓದಿ: 369 ವಾರ್ಡ್‌ಗಳ ಮಹಾಸಮರ: ಐದು ಪಾಲಿಕೆಗಳ ಮೇಲೆ ಕಾಂಗ್ರೆಸ್ ಕಣ್ಣು..!