ಜೆಡಿಎಸ್ ನಾಯಕ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯಕ್ಕೆ ತಾವು ಮರಳುವುದರ ಕುರಿತ ಸೂಚನೆ ನೀಡಿದ್ದಾರೆ. ಇನ್ನು, ʻಮೈತ್ರಿʼ ತಂತ್ರವು ಮುಂದುವರೆಯಲಿದ್ದು, ಇದೀಗ ಮತ್ತೆ ಅವರ ಎಂಟ್ರಿ ಯಾವಾಗ ಎಂಬ ಬಗ್ಗೆ ರಾಜಕೀಯ ಚರ್ಚೆ ಮುನ್ನಲೆಗೆ ಬಂದಿದೆ ಎನ್ನಲಾಗುತ್ತಿದೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದ ʻಟಾಕ್ಸಿಕ್ʼ ಸಿನಿಮಾದ ಟೀಸರ್ ಅನುಕರಣೆ ಎಐ ವಿಡಿಯೋ, “ಡ್ಯಾಡಿʼಸ್ ಹೋಮ್ - ಕಮ್ಬ್ಯಾಕ್” ವೈರಲ್ ಆಗಿತ್ತು. ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಹೆಚ್ಡಿಕೆ ಅವರ ಈ ವಿಡಿಯೋದ ಬೆನ್ನಲ್ಲೇ, ಸಂಕ್ರಾಂತಿ ಹಬ್ಬ ಸಂದರ್ಭ