ರಾಜ್ಯ ಸರ್ಕಾರವು ಮುಂಬರಲಿರುವ ಸ್ಥಳೀಯ ಚುನಾವಣೆಗೆ ʼಮೂರು ಸ್ತರ: ಒಂದು ಗ್ರಾಮ - ಒಂದು ಚುನಾವಣೆʼ ಸೂತ್ರ ಸಿದ್ದಪಡಿಸಿದೆ. ಈ ನಿಟ್ಟಿನಲ್ಲಿ, ರಾಜ್ಯದ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳ ಎಲೆಕ್ಷನ್‌ನ್ನು ಒಟ್ಟಿಗೆ ನಡೆಸಲು ಮುಂದಾಗಿದೆ ಎಂದು ವರದಿಯಾಗಿದೆ.
ಏಪ್ರಿಲ್ 2026ರೊಳಗೆ, ಮೂರು ಸ್ತರದ ಪಂಚಾಯಿತಿಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಅಗತ್ಯ ಸಿದ್ದತೆ ಮಾಡಿಕೊಂಡು, ರಾಜ್ಯ ಚುನಾವಣಾ ಆಯೋಗಕ್ಕೆ ಸಹಕಾರ ನೀಡಲು ತಿಳಿಸಿದೆ. ಗ್ರಾಮೀಣ ಭಾಗದ ಜನರು, ಮತಗಟ್ಟೆಗೆ ತೆರಳಿ, ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಏಕಕಾಲಕ್ಕೆ ಪ್ರತ್ಯೇಕ ಮೂರು ಮತದಾನವನ್ನು ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.
2020-21 ರಲ್ಲಿ ರಾಜ್ಯದ ಬಹುತೇಕ (90%) ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗಿತ್ತು. ಅವುಗಳ ಅವಧಿಯು, ಇನ್ನೆರಡು ತಿಂಗಳೊಳಗೆ, ಮುಕ್ತಾಯಗೊಳ್ಳಲಿದೆ ಎನ್ನಲಾಗಿದೆ. ಈ ಚುನಾವಣೆಗಳಿಗೆ ಇವಿಎಂ ಬದಲಾಗಿ, ಬ್ಯಾಲೆಟ್ ಪೇಪರ್ ಬಳಕೆ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ವಿಳಂಬ ಪ್ರಕ್ರಿಯೆ ಹಿನ್ನೆಲೆಯಿಂದ ಚುನಾವಣೆಯಿಲ್ಲದೇ, ಜನಪ್ರತಿನಿಧಿಗಳಿಲ್ಲದೇ ಅನೇಕ ವ್ಯಾಜ್ಯಗಳು ಉಂಟಾಗಿದೆ ಎನ್ನಲಾಗಿರುವ ಮಧ್ಯೆ, ರಾಜ್ಯ ಸರ್ಕಾರದ ಈ ನಿರ್ಧಾರವು ಯಾವ ರೀತಿ ಪರಿಣಮಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. Canon EOS R8 Smartchoice Full-Frame 24.2 MP Mirrorless Camera Body | 4K Full HD Video Recording | (Black)
ಈ ನಡುವೆ ಚುನಾವಣೆಗೆ ಅನೇಕ ಒತ್ತಡಗಳು ಹಾಗೂ ಒತ್ತಾಯಗಳು ಕಂಡುಬಂದಿದ್ದವು. ಇದೀಗ ರಾಜ್ಯ ಸರ್ಕಾರವು ಒಂದೇ ಬಾರಿ ಚುನಾವಣೆ ನಡೆಸುವ ಮೂಲಕ ಸಮಯ, ಶ್ರಮ ಹಾಗೂ ಚುನಾವಣಾ ವೆಚ್ಚವನ್ನು ಕಡಿಮೆಗೊಳಿಸಲಿದೆ ಎಂದು ತಿಳಿಸಲಾಗಿದೆ. ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ 5, 948 ಗ್ರಾಮ ಪಂಚಾಯಿತಿಗಳಿದ್ದು, 95,000 ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿದ್ದು; 31 ಜಿಲ್ಲಾ ಪಂಚಾಯಿತಿಗಳು, 240 ತಾಲೂಕು ಪಂಚಾಯಿತಿಗಳಿವೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ನುಗ್ಗುತ್ತಿದ್ದಾರೆಯೇ ಅಕ್ರಮ ವಲಸಿಗರು? ರೈಲ್ವೆ ಇಲಾಖೆಯ ಜಾಗೃತಿಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ..!