ಗಿಚ್ಚಿ ಗಿಲಿಗಿಲಿ ಮೂಲಕ ಮನೆಮಾತಾಗಿದ್ದ ಹಾಸ್ಯ ಕಲಾವಿದ ಚಂದ್ರಪ್ರಭ ಇಂದು ಕೃಷಿಯಲ್ಲಿ ಹೊಸ ಗುರುತನ್ನು ಕಟ್ಟಿಕೊಂಡಿದ್ದಾರೆ. ಟಿವಿ ಶೋಗಳ ಮೂಲಕ ಜನರನ್ನು ನಗಿಸಿದ್ದ ಚಂದ್ರಪ್ರಭ, ಈಗ ಶ್ರೀರಂಗಪಟ್ಟಣದ ತಮ್ಮ ಹೊಲದಲ್ಲಿ ರೈತನಾಗಿ ಬೆವರು ಸುರಿಸುತ್ತಿದ್ದಾರೆ. ನಟನೆ ಮಾತ್ರವಲ್ಲ, ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಅವರು ಜೀವಂತ ಉದಾಹರಣೆ.Arayna Women's Cotton Printed Floral Straight Kurta with Palazzo Pants and Dupatta
ಚಂದ್ರಪ್ರಭ ಅವರು ನಾಟಿಕೋಳಿ ಸಾಕಾಣಿಕೆ ಹಾಗೂ ತೋಟಗಾರಿಕೆಯನ್ನು ಪ್ರಮುಖ ವೃತ್ತಿಯಾಗಿಸಿಕೊಂಡಿದ್ದಾರೆ. ವೈಜ್ಞಾನಿಕ ವಿಧಾನದಲ್ಲಿ ನಾಟಿಕೋಳಿಗಳನ್ನು ಸಾಕುತ್ತಾ, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಜೊತೆಗೆ ವಿವಿಧ ತರಹದ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಿದ್ದಾರೆ. ಹೊಲದಲ್ಲೇ ಸ್ವತಃ ಕೆಲಸ ಮಾಡುವ ಅವರು, ಕೃಷಿಯ ಮಹತ್ವವನ್ನು ಅನುಭವದಿಂದ ತಿಳಿದುಕೊಂಡಿದ್ದಾರೆ.ಇದನ್ನು ಓದಿ:ಜನವರಿ 18ರ ರಾತ್ರಿ ಇತಿಹಾಸ ಸೃಷ್ಟಿಸಿದ ಗಿಲ್ಲಿ: ಅದ್ದೂರಿ ವೇದಿಕೆಯಲ್ಲಿ ವಿನ್ನರ್ ಘೋಷಿಸಿದ ಕಿಚ್ಚ ಸುದೀಪ್..!
ಹಳ್ಳಿ ಬದುಕು, ಮಣ್ಣಿನ ಸಂಪರ್ಕ ಮತ್ತು ಸ್ವಾವಲಂಬಿ ಜೀವನವೇ ತಮ್ಮ ಯಶಸ್ಸಿನ ರಹಸ್ಯ ಎಂದು ಚಂದ್ರಪ್ರಭ ಹೇಳುತ್ತಾರೆ. ಅವರ ಈ ಪ್ರಯತ್ನವನ್ನು ನೋಡಿದ ಹಲವಾರು ಯುವಕರು ಕೃಷಿಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ಹಾಸ್ಯ ಕಲಾವಿದನಿಂದ ಮಾದರಿ ರೈತನಾಗಿರುವ ಚಂದ್ರಪ್ರಭ, “ನಟನೆಗೂ ಸೈ, ಕೃಷಿಗೂ ಸೈ” ಎಂದು ಸಾಬೀತುಪಡಿಸಿದ್ದಾರೆ.