ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಹೊರಹೊಮ್ಮಿದ ಗಿಲ್ಲಿ, ತಮ್ಮ ಬಿಗ್ ಬಾಸ್ ಮನೆಯ ಅನುಭವಗಳ ಜೊತೆಗೆ ಚಿತ್ರರಂಗದ ಹಿರಿಯ ನಟರ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ನಂತರ ಮಾತನಾಡಿದ ಗಿಲ್ಲಿ, ನಟ ದರ್ಶನ್ ಅವರೊಂದಿಗೆ ನಡೆದ ವಿಶೇಷ ಘಟನೆಯನ್ನು ಹಂಚಿಕೊಂಡಿದ್ದಾರೆ. ‘ಡೆವಿಲ್’ ಸಿನಿಮಾದ ಚಿತ್ರೀಕರಣದ ವೇಳೆ ದರ್ಶನ್ ಅವರು ನನ್ನನ್ನು ಕರೆದು ನನ್ನ ಹಾಸ್ಯ ಶೈಲಿಯನ್ನು ಮೆಚ್ಚಿದರು. ನೀವು ಕಾಮಿಡಿ ತುಂಬಾ ಚೆನ್ನಾಗಿ ಮಾಡ್ತೀರಾ ಎಂದು ಹೇಳಿದ್ದು ನನಗೆ ದೊಡ್ಡ ಸಂತೋಷ ನೀಡಿತು ಎಂದು ಗಿಲ್ಲಿ ಹೇಳಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta
ದರ್ಶನ್ ಅವರೊಂದಿಗೆ ಒಂದೇ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಅದೃಷ್ಟ ಎಂದು ಗಿಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ವಿನ್ನರ್ ಆದ ನಂತರ ನಟ ಶಿವರಾಜ್‌ಕುಮಾರ್ ಅವರು ಕರೆ ಮಾಡಿ ಶುಭಾಶಯ ತಿಳಿಸಿದ್ದು ನನಗೆ ಮರೆಯಲಾಗದ ಕ್ಷಣವಾಗಿದೆ ಎಂದಿದ್ದಾರೆ. ಜನರಿಂದ ಸಿಕ್ಕ ಪ್ರೀತಿ ಮತ್ತು ಹಿರಿಯ ನಟರಿಂದ ದೊರೆತ ಮೆಚ್ಚುಗೆ ನನ್ನ ಮುಂದಿನ ಜೀವನಕ್ಕೆ ದೊಡ್ಡ ಪ್ರೇರಣೆ ಎಂದು ಗಿಲ್ಲಿ ಭಾವೋದ್ವೇಗದಿಂದ ಹೇಳಿದ್ದಾರೆ.