Skip to main content
ವಿಡಿಯೋ
cinema

ಮದ್ದೂರಿಗೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ಆಗಮನ – ಕಿತ್ತಳೆ ಹಾರ ಹಾಕಿ ಅದ್ದೂರಿ ಸ್ವಾಗತ

By Ram Chethan
ಮದ್ದೂರಿಗೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ಆಗಮನ – ಕಿತ್ತಳೆ ಹಾರ ಹಾಕಿ ಅದ್ದೂರಿ ಸ್ವಾಗತ

ಬಿಗ್ ಬಾಸ್ 12 ವಿನ್ನರ್ ಗಿಲ್ಲಿಗೆ ಮದ್ದೂರಿನಲ್ಲಿ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರಕಿತು.ತವರು ಜನರ ಪ್ರೀತಿ ಕಂಡು ಗಿಲ್ಲಿ ಪುಳಕಿತರಾಗಿದ್ದು, ಮದ್ದೂರಿನಿಂದ ಮಳವಳ್ಳಿ ಕಡೆಗೆ ಜೈಕಾರದ ನಡುವೆ ಪ್ರಯಾಣ ಮುಂದುವರಿಸಿದರು.

ಮಂಡ್ಯ ಜಿಲ್ಲೆಯ ಮದ್ದೂರಿಗೆ ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ಆಗಮಿಸಿದ್ದು, ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರಕಿತು. ಮದ್ದೂರಿನ ರಸ್ತೆಗಳಲ್ಲೇ ಸಾವಿರಾರು ಅಭಿಮಾನಿಗಳು ಸೇರಿ, ಕಿತ್ತಳೆ ಹಣ್ಣಿನಿಂದ ದೊಡ್ಡ ಹಾರ ಹಾಕಿ ಗಿಲ್ಲಿಯನ್ನು ಗೌರವಿಸಿದರು. ತಮ್ಮ ತವರು ಊರಿನ ಜನರಿಂದ ಸಿಕ್ಕ ಪ್ರೀತಿಯನ್ನು ಕಂಡು ಗಿಲ್ಲಿ ತುಂಬಾ ಸಂತಸ ವ್ಯಕ್ತಪಡಿಸಿದರು.Arayna Women's Cotton Printed Floral Straight Kurta with Palazzo Pants and Dupatta

ಗಿಲ್ಲಿ ಪರ ಜೈಕಾರ ಕೂಗಿ ಅಭಿಮಾನಿಗಳು ಸಂಭ್ರಮಿಸಿದರು. ಎಲ್ಲರತ್ತ ಕೈಬೀಸಿ ನಮಸ್ಕರಿಸಿದ ಗಿಲ್ಲಿ, ಈ ಪ್ರೀತಿಯೇ ನನ್ನ ದೊಡ್ಡ ಗೆಲುವು ಎಂದು ಹೇಳಿದರು. ಮದ್ದೂರಿನಿಂದ ಮಳವಳ್ಳಿ ಕಡೆಗೆ ಪ್ರಯಾಣ ಮುಂದುವರೆಸಿದ ಗಿಲ್ಲಿ, ದಾರಿಯಲ್ಲೂ ಅಭಿಮಾನಿಗಳ ಬೆಂಬಲ ಮತ್ತು ಉತ್ಸಾಹವನ್ನು ಅನುಭವಿಸಿದರು.