ಮುಂಬೈನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರು ಅಪಘಾತಕ್ಕೀಡಾಗಿದೆ. ವಿದೇಶ ಪ್ರವಾಸ ಮುಗಿಸಿ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಅವರೊಂದಿಗೆ ವಿಮಾನ ನಿಲ್ದಾಣದಿಂದ ಜುಹುವಿನಲ್ಲಿರುವ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅವರ ವಾಹನಗಳ ಮುಂದೆ ಸಾಗುತ್ತಿದ್ದ ಮರ್ಸಿಡಿಸ್ ಕಾರು ಚಾಲಕನ ನಿಯಂತ್ರಣ ತಪ್ಪಿ ಮೊದಲು ಒಂದು ಆಟೋಗೆ ಡಿಕ್ಕಿ ಹೊಡೆದಿದೆ. ಬಳಿಕ ಅದೇ ಕಾರು ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರಿಗೆ ತಾಗಿದ್ದು, ಕಾರು ಪಲ್ಟಿಯಾಗಿದೆ.Arayna Women's Cotton Printed Floral Straight Kurta with Palazzo Pants and Dupatta
ಅಪಘಾತದ ದೃಶ್ಯ ಭೀಕರವಾಗಿದ್ದರೂ ಅಕ್ಷಯ್ ಕುಮಾರ್ ತಕ್ಷಣ ಮಾನವೀಯತೆ ತೋರಿದ್ದಾರೆ. ಅವರು ತಮ್ಮ ಭದ್ರತಾ ಸಿಬ್ಬಂದಿಗೆ ಆಟೋ ಚಾಲಕನಿಗೆ ಸಹಾಯ ಮಾಡುವಂತೆ ಸೂಚಿಸಿದ್ದು, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ಜನಸಂದಣಿ ಕೂಡ ಜಮಾಯಿಸಿತ್ತು.₹200 ಏಕರೂಪ ಸಿನಿಮಾ ಟಿಕೆಟ್ ದರ ನಿಯಮ: ರಾಜ್ಯ ಸರ್ಕಾರದ ಮೇಲ್ಮನವಿ ವಿಚಾರಣೆಗೆ ಹೈಕೋರ್ಟ್ ಸಜ್ಜು
ಅಕ್ಷಯ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ಭದ್ರತಾ ಸಿಬ್ಬಂದಿಯ ಕಾರಿಗೆ ಹಾನಿಯಾಗಿದೆ. ಅಪಘಾತದ ನಂತರ ಅಕ್ಷಯ್ ಕುಮಾರ್ ಸ್ಥಳದಿಂದ ಹೊರಟರೆ, ಅವರ ತಂಡವು ಅಲ್ಲೇ ಉಳಿದು ಸಹಾಯ ಕಾರ್ಯದಲ್ಲಿ ಭಾಗವಹಿಸಿತು. ಪ್ರಸ್ತುತ ಆಟೋ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಘಾತದ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.