Skip to main content
ವಿಡಿಯೋ
metro

ಬೆಂಗಳೂರಿಗರೇ ಎಚ್ಚರ: ಮುಂದಿನ ವಾರದಿಂದ ಹೊಸ 'ಪೇ ಪಾರ್ಕಿಂಗ್' ಮತ್ತು 'ಟೋಯಿಂಗ್' ಶಿಕ್ಷೆ! ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

By Bhavana Gowda
ಬೆಂಗಳೂರಿಗರೇ ಎಚ್ಚರ: ಮುಂದಿನ ವಾರದಿಂದ ಹೊಸ 'ಪೇ ಪಾರ್ಕಿಂಗ್' ಮತ್ತು 'ಟೋಯಿಂಗ್' ಶಿಕ್ಷೆ! ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

ಸಿಲಿಕಾನ್ ಸಿಟಿಯ ವಾಹನ ಸವಾರರೇ ಗಮನಿಸಿ! ನೀವು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಿಮ್ಮ ಕಾರು ಅಥವಾ ಬೈಕ್ ನಿಲ್ಲಿಸುವ ಅಭ್ಯಾಸ ಹೊಂದಿದ್ದರೆ ಇಂದೇ ಬದಲಿಸಿಕೊಳ್ಳಿ.

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರೇ ಗಮನಿಸಿ! ನೀವು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಿಮ್ಮ ಕಾರು ಅಥವಾ ಬೈಕ್ ನಿಲ್ಲಿಸುವ ಅಭ್ಯಾಸ ಹೊಂದಿದ್ದರೆ ಇಂದೇ ಬದಲಿಸಿಕೊಳ್ಳಿ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ (BBMP) ಈಗ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಪಡಿಸಲು ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಮುಂದಿನ ವಾರದಿಂದ ಬೆಂಗಳೂರಿನಲ್ಲಿ ಅಧಿಕೃತವಾಗಿ 'ಪೇ ಅಂಡ್ ಪಾರ್ಕ್' (Pay and Park) ನಿಯಮ ಜಾರಿಗೆ ಬರಲಿದ್ದು, ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದರೆ ಭಾರಿ ದಂಡ ತೆರಬೇಕಾಗುತ್ತದೆ.

ಏನಿದು ಹೊಸ ಪಾರ್ಕಿಂಗ್ ವ್ಯವಸ್ಥೆ?

ನಗರದ ಸಂಚಾರ ದಟ್ಟಣೆ ನಿಯಂತ್ರಿಸಲು ಪಾಲಿಕೆಯು ಆಯ್ದ ರಸ್ತೆಗಳನ್ನು ಪಾರ್ಕಿಂಗ್‌ಗಾಗಿ ಗುರುತಿಸಿದೆ. ಈ ಗುರುತಿಸಲಾದ ಜಾಗದಲ್ಲಿ ವಾಹನ ನಿಲ್ಲಿಸಿದರೆ ನೀವು ಗಂಟೆ ಆಧಾರದ ಮೇಲೆ ಹಣ ಪಾವತಿಸಬೇಕು.

ಪಾರ್ಕಿಂಗ್ ದರ ಪಟ್ಟಿ:

ಕಾರುಗಳು: ಗಂಟೆಗೆ 30 ರೂಪಾಯಿ.

ಬೈಕ್‌ಗಳು: ಗಂಟೆಗೆ 15 ರೂಪಾಯಿ.

ಟೋಯಿಂಗ್ ಭೀತಿ: ದಂಡ ಎಷ್ಟು?

ಪಾಲಿಕೆ ಗುರುತು ಮಾಡದ ರಸ್ತೆಗಳಲ್ಲಿ ಅಥವಾ ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದರೆ, ಪಾಲಿಕೆಯ ಟೋಯಿಂಗ್ ವಾಹನಗಳು ನಿಮ್ಮ ಗಾಡಿಯನ್ನು ಎತ್ತಿಕೊಂಡು ಹೋಗಲಿವೆ. ಈ ಬಾರಿ ದಂಡದ ಪ್ರಮಾಣ ದುಪ್ಪಟ್ಟಾಗುವ ಸಾಧ್ಯತೆ ಇದೆ.

ಕಾರ್ ಟೋಯಿಂಗ್: 1,000 ರೂಪಾಯಿ ಟೋಯಿಂಗ್ ದಂಡ + ಟ್ರಾಫಿಕ್ ಪೊಲೀಸರ ದಂಡ (ಪ್ರತ್ಯೇಕ).

ಬೈಕ್ ಟೋಯಿಂಗ್: 500 ರೂಪಾಯಿ ಟೋಯಿಂಗ್ ದಂಡ + ಟ್ರಾಫಿಕ್ ಪೊಲೀಸರ ದಂಡ (ಪ್ರತ್ಯೇಕ).

ಗಮನಿಸಿ: ಟೋಯಿಂಗ್ ದಂಡದ ಜೊತೆಗೆ ಸಂಚಾರಿ ಪೊಲೀಸರು ವಿಧಿಸುವ ದಂಡವನ್ನೂ ಪಾವತಿಸುವುದು ಕಡ್ಡಾಯ. ಅಂದರೆ ಒಟ್ಟಾರೆ ದಂಡದ ಮೊತ್ತ ನಿಮ್ಮ ಜೇಬಿಗೆ ದೊಡ್ಡ ಹೊರೆಯಾಗಲಿದೆ.

ಯಾವಾಗ ಜಾರಿ? ಎಲ್ಲಿ ಜಾರಿ?

ಮೊದಲ ಹಂತ: ಮುಂದಿನ ವಾರದಿಂದ ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ.

ಪೂರ್ಣ ಜಾರಿ: ಜನವರಿ ತಿಂಗಳ ಅಂತ್ಯದ ವೇಳೆಗೆ ಇಡೀ ಬೆಂಗಳೂರಿನಾದ್ಯಂತ ಈ ಹೊಸ ಪೇ-ಪಾರ್ಕಿಂಗ್ ವ್ಯವಸ್ಥೆ ಅಸ್ತಿತ್ವಕ್ಕೆ ಬರಲಿದೆ.

ಈಗಾಗಲೇ ಪಂಚ ಪಾಲಿಕೆಗಳು ಪಾರ್ಕಿಂಗ್‌ಗೆ ಯೋಗ್ಯವಾದ ರಸ್ತೆಗಳನ್ನು ಗುರುತಿಸುವ ಕಾರ್ಯ ಮುಗಿಸಿವೆ. ಇನ್ನು ಮುಂದೆ ರಸ್ತೆ ಬದಿ ಉಚಿತವಾಗಿ ವಾಹನ ನಿಲ್ಲಿಸುವ ಕಾಲ ಮುಗಿದಿದ್ದು, ಬೆಂಗಳೂರಿಗರು ಪಾರ್ಕಿಂಗ್ ಶಿಸ್ತು ಪಾಲಿಸದಿದ್ದರೆ ದಂಡದ 'ಗ್ಯಾರೆಂಟಿ' ಭಾಗ್ಯ ಸಿಗಲಿದೆ!