ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಪಯಣಕ್ಕೆ ತೆರೆ ಎಳೆದಿರುವುದಾಗಿ ತಿಳಿದುಬಂದಿದೆ. ಅವರು ನಾಸಾದಿಂದ ನಿವೃತ್ತರಾಗಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಅಂತರೀಕ್ಷ ಮಿಷನ್ ಮೂಲಕ ಗಮನ ಸೆಳೆದ ಅವರು, ತಮ್ಮ 27 ವರ್ಷದ ವೃತ್ತಿಜೀವನದ ನಿವೃತ್ತಿಯನ್ನು ತಿಳಿಸಿರುವುದಾಗಿ ವರದಿಯಾಗಿದೆ.
1998 ರಲ್ಲಿ ನಾಸಾಕ್ಕೆ ಗಗನಯಾನಿಯಾಗಿ ಸುನಿತಾ ವಿಲಿಯಮ್ಸ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅಂದಿನಿಂದ ಅವರು ತಮ್ಮ ಮೂರು ಅಂತರೀಕ್ಷ ಪ್ರಯಾಣದಲ್ಲಿ(ಬಾಹ್ಯಾಕಾಶ ಯಾತ್ರೆ) 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಇದು ಅತಿಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆದ ಎರಡನೇ ದಾಖಲೆಯನ್ನು ಸೇರಿದೆ. ಅವರ ಸೇವೆ ಮುಂದಿನ ಪೀಳಿಗೆಗೆ ಮಾದರಿಯಾಗಲಿದೆ. ನಾಸಾ ಹಾಗೂ ನಮ್ಮ ರಾಷ್ಟ್ರಕ್ಕೆ ಸಲ್ಲಿಸಿದ ಅವರ ಸೇವೆಗೆ ಧನ್ಯವಾದಗಳು ಎಂದು ನಾಸಾದ ಆಡಳಿತಾಧಿಕಾರಿ ಜಾರೆಡ್ ಐಸಾಕ್‌ಮ್ಯಾನ್ ಹೇಳಿದ್ದಾರೆ. OnePlus Nord Buds 3r TWS Earbuds up to 54 Hours Playback, 2-mic Clear Calls, 3D Spatial Audio, AI Translation, 12.4mm Drivers, Dual-Device Connectivity, 47ms Low Latency - Aura Blue
ಗುಜರಾತ್ ಮೂಲದವರಾದ ಅವರು, ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ತೋರಿರುವ ಸಾಧನೆ ಅಪಾರವಾದುದು. ಅವರು 9 ಬಾಹ್ಯಾಕಾಶ ನಡಿಗೆ ಪೂರ್ಣಗೊಳಿಸಿದ್ದಾರೆ. ಅಂತರೀಕ್ಷ ಅನ್ವೇಷಣೆಗೆ ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ನಾಸಾದ ಅತ್ಯಂತ ಅನುಭವಿ ಅಂತರೀಕ್ಷಯಾನಿಗಳಲ್ಲಿ ಒಬ್ಬರಾದ ಅವರು ಡಿಸೆಂಬರ್ 27 (2025) ರಿಂದ ನಿವೃತ್ತಿ ಘೋಷಣೆ ಮಾಡಲಾಗಿದ್ದು, ಅವರ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಇದನ್ನೂ ಓದಿ: ಜಿಬಿಎ ಚುನಾವಣೆ - ಉಸ್ತುವಾರಿಯಾಗಿ ರಾಮ್ ಮಾಧವ್ ನೇಮಿಸಿದ ಬಿಜೆಪಿ