ಕನ್ನಡ ನಾಡಿನ ಶ್ರೇಷ್ಠ ರಾಜರಾದ ಇಮ್ಮಡಿ ಪುಲಿಕೇಶಿ ಅವರ ಜೀವನವನ್ನು ಆಧರಿಸಿದ ಹೊಸ ಕನ್ನಡ ಸಿನಿಮಾ ಘೋಷಣೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಮಿಯಲ್ಲಿ ಅದ್ಧೂರಿಯಾಗಿ ನಡೆದ ಚಾಲುಕ್ಯ ಉತ್ಸವದ ಸಮಾರೋಪ ಸಮಾರಂಭದಲ್ಲಿ ಈ ಐತಿಹಾಸಿಕ ಚಿತ್ರದ ಮಾಹಿತಿ ಬಹಿರಂಗವಾಯಿತು. ಕನ್ನಡ ಇತಿಹಾಸವನ್ನು ದೊಡ್ಡ ಪರದೆಯ ಮೇಲೆ ತರಬೇಕೆಂಬ ಉದ್ದೇಶದಿಂದ ಈ ಸಿನಿಮಾ ನಿರ್ಮಾಣವಾಗುತ್ತಿದೆ.Arayna Women's Cotton Printed Floral Straight Kurta with Palazzo Pants and Dupatta
ಈ ಚಿತ್ರವನ್ನು ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿದ್ದು, ಎಸ್‌ಆರ್‌ಕೆ ಪ್ರೋಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ. ಇಮ್ಮಡಿ ಪುಲಿಕೇಶಿ ಪಾತ್ರದಲ್ಲಿ ನಟ ಡಾಲಿ ಧನಂಜಯ್ ಅವರು ಅಭಿನಯಿಸಲಿದ್ದು, ಈ ಪಾತ್ರಕ್ಕೆ ಅವರು ಹೊಸ ಜೀವ ತುಂಬಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.ಇದನ್ನು ಓದಿ:ಅಮಿತಾಭ್ ಬಚ್ಚನ್ ಮನೆಯಲ್ಲಿ ಚಿನ್ನದ ಶೌಚಾಲಯ..? ವೈರಲ್ ಫೋಟೋ ಹಿಂದಿನ ಸತ್ಯ ಏನು..?
ಇಮ್ಮಡಿ ಪುಲಿಕೇಶಿ ಅವರು ಕನ್ನಡನಾಡು ಕಂಡ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬರಾಗಿದ್ದು, ಅವರ ಶೌರ್ಯ, ಆಡಳಿತ ಹಾಗೂ ಸಂಸ್ಕೃತಿಯ ಮೇಲಿನ ಪ್ರೀತಿ ಇಂದಿಗೂ ಜನರಿಗೆ ಪ್ರೇರಣೆಯಾಗಿದೆ. ಈ ಹಿಂದೆ 1966ರಲ್ಲಿ ಡಾ. ರಾಜ್‌ಕುಮಾರ್ ಅವರು ಇದೇ ಪಾತ್ರದಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ್ದರು. ಇದೀಗ ಆ ಐತಿಹಾಸಿಕ ಪಾತ್ರವನ್ನು ಹೊಸ ತಲೆಮಾರಿನ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನವಾಗಿ ಈ ಸಿನಿಮಾ ಮೂಡಿಬರಲಿದೆ.