ಸ್ವಿಡ್ಜರ್ಲ್ಯಾಂಡ್ನ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಮಾವೇಶವು ಜನವರಿ 19 ರಿಂದ ಆರಂಭವಾಗಿ, ಶುಕ್ರವಾರ(ಜನವರಿ 23)ಕ್ಕೆ ಕೊನೆಗೊಂಡಿದೆ. ಭಾರತದ ಪ್ರತಿನಿಧಿಯಾಗಿ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದ್ದಾರೆ. ಡಬ್ಲೂಇಎಫ್ ಕುರಿತಾಗಿ - ವಿಶ್ವದಲ್ಲಿ ನಡೆಯುತ್ತಿರುವ ಬಹು ವಿದ್ಯಮಾನಗಳ ಕುರಿತು ಜಾಗತಿಕ ನಾಯಕರು ಒಂದೆಡೆ ಸೇರಿ ಚರ್ಚಿಸುವ ದೊಡ್ಡ ವೇದಿಕೆ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ. 55 ವರ್ಷಗಳ ಹಿಂದೆ ಸ್ವಿಡ್ಜರ್ಲ್ಯಾಂಡ್ನ ಜಿನೀವಾದಲ್ಲಿ ಆರಂಭವಾದ ವಿಶ್ವ ಆರ್ಥಿಕ ವೇದಿಕೆಯು ಪ್ರತೀ ವರ್ಷ ನಡೆಯುವುದು.