ನವದೆಹಲಿಯ ಕರ್ತವ್ಯ ಪಥದಲ್ಲಿ ಕಣ್ಣಿಗೆ ಹಬ್ಬದಂತೆ ಭಾಸವಾಗಲಿರುವ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಹಲವು ವಿಶೇಷತೆಗಳಿವೆ. ಪರೇಡ್ ಪ್ರತೀ ವರ್ಷದ ಆಕರ್ಷಣೆ. ಕಲಾವಿದರ ಪಾಂಡಿತ್ಯ, ವಿವಿಧ ಸ್ತಬ್ದಚಿತ್ರಗಳ ಅನಾವರಣವು ಒಂದು ವೈವಿಧ್ಯತೆಯ ಸೊಗಸು.
ಈ ವರ್ಷದ ಗಣರಾಜ್ಯೋತ್ಸವ ಆಚರಣೆಗೆ “ವಂದೇ ಮಾತರಂ ಗೀತೆಯ 150 ವರ್ಷಗಳು” ಹಾಗೂ “ಸಮೃದ್ದಿಯ ಮಂತ್ರ, ಆತ್ಮನಿರ್ಭರ ಭಾರತ” ಎಂಬ ಥೀಮ್ ಆಯ್ಕೆ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಗೀತೆಯು, ದೇಶಭಕ್ತಿಯನ್ನು ಉದ್ದೀಪಿಸುತ್ತಾ ಬಂದಿತು. ಈ ಬಾರಿಯ ಪಥಸಂಚಲನದಲ್ಲಿ, ಆಪರೇಷನ್ ಸಿಂಧೂರ್ ರಚನೆಯನ್ನು ವಾಯುಪಡೆ ಪ್ರದರ್ಶಿಸಲಿದೆ. ಭಾರತದ ಸಾಂಸ್ಕೃತಿಕ ಹಾಗೂ ಸೇನಾಶಕ್ತಿಯು ಗಮನಸೆಳೆಯುವ ಚಿತ್ರಪ್ರದರ್ಶನ, ಭಾರತೀಯ ಸೇನಾ ಸಾಮರ್ಥ್ಯ, ರಾಜ್ಯ ಸಂಸ್ಕೃತಿಗಳ ಕಲಾಪ್ರದರ್ಶನ ಹಾಗೂ ಗೀತೆಯ ಅಂತಃಸತ್ವವನ್ನು ತೆರೆದಿಡಲಿದೆ.
ಈ ಬಾರಿಯ ಗಣರಾಜ್ಯೋತ್ಸವದ ಅತಿಥಿಗಳಾಗಿ ಯುರೋಪಿಯನ್ ಕೌನ್ಸಿಲ್ ಅಧುಕ್ಷ ಆಂಟೋನಿಯಾ ಕೋಸ್ಟಾ ಹಾಗೂ ಯೂರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್‌ಡೆರ್ ಲೆಯೆನ್ ಭಾಗಿಯಾಗಲಿದ್ದಾರೆ. ಬಿಗಿ ಭದ್ರತೆಯೊಂದಿಗೆ ಸುಮಾರು 10:30 ರ ಸಮಯಕ್ಕೆ ಪರೇಡ್ ಆರಂಭವಾಗಲಿದ್ದು, ಸೇನಾಬಲವು ರಾಷ್ಟ್ರನಮನಕ್ಕೆ ಸಜ್ಜಾಗಿದೆ. Sonos Move 2 | Wireless Portable Speaker with WiFi, Bluetooth, Amazon Alexa, 24-Hour Battery Life, Wireless Charging Base - Olive
ಸೇನಾ ಮೆರಗು -
ಭಾರತೀಯ ಸೇನೆಯು, ಕೇವಲ ಸಮವಸ್ತ್ರ ಸಜ್ಜಿತ ಸೇನಾಪಡೆಗಳಲ್ಲದೇ ಉತ್ಸಾಹ ಹಾಗೂ ಹೆಮ್ಮೆಯ ಸಾಹಸ ಪ್ರದರ್ಶನ, ತರಬೇತು ತುಕಡಿ ಪ್ರತಿಭೆಯನ್ನು, ವಾದ್ಯಗಳನ್ನು ನುಡಿಸುತ್ತಾ ಶಿಸ್ತುಬದ್ದ ಸದ್ದು-ಹೆಜ್ಜೆಯು ಸಮತೋಲಿತ ಸಮಾನತೆ, ಸಾರ್ವಭೌಮತ್ವಕ್ಕೆ ಸಾಟಿಯಾಗಲಿದೆ. ಈ ಬಾರಿಯ ಗಣತಂತ್ರದ ಸಂಭ್ರಮವನ್ನು ದೇಶದ ಗಣ್ಯರು ಸೇರಿದಂತೆ ಪ್ರೇಕ್ಷಕರು ಕಣ್ತುಂಬಿಕೊಳ್ಳಲಿದ್ದಾರೆ. ಇದನ್ನೂ ಓದಿ: ಲಾಲ್‌ಬಾಗ್ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ: ಭಾನುವಾರ ದಾಖಲೆ ಬರೆದ ಪ್ರವಾಸಿಗರು, ಒಂದೇ ದಿನ 1.14 ಲಕ್ಷ ಮಂದಿ ಭೇಟಿ!