Skip to main content
ವಿಡಿಯೋ
general

ದ.ಕ - ಮೊದಲ ʻಬೋಟ್‌ ಆಂಬ್ಯುಲೆನ್ಸ್‌ʼಗೆ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್‌ ಅವರಿಂದ ಚಾಲನೆ

By Shravanthi R
ದ.ಕ - ಮೊದಲ ʻಬೋಟ್‌ ಆಂಬ್ಯುಲೆನ್ಸ್‌ʼಗೆ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್‌ ಅವರಿಂದ ಚಾಲನೆ

ಮೀನುಗಾರರೇ ನಿರ್ಮಿಸಿದ ಮೊದಲ ಬೋಟ್‌ ಆಂಬ್ಯುಲೆನ್ಸ್‌ಗೆ ಸೋಮವಾರ ಚಾಲನೆ ಸಿಕ್ಕಿದೆ. ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್‌ ಅವರಿಂದ ಉಳ್ಳಾಲ ವಲಯದ ನಾಡದೋಣಿ ಮತ್ತು ಗಿಲ್‌ನೆಟ್‌ ಮೀನುಗಾರರ ಸಂಘದ ವತಿಯಿಂದ ನಿರ್ಮಿಸಲಾದ ಪ್ರಥಮ ಬೋಟ್‌ ಆಬ್ಯುಲೆನ್ಸ್‌ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಮೀನುಗಾರರೇ ನಿರ್ಮಿಸಿದ ಮೊದಲ ಬೋಟ್‌ ಆಂಬ್ಯುಲೆನ್ಸ್‌ಗೆ ಸೋಮವಾರ ಚಾಲನೆ ಸಿಕ್ಕಿದೆ. ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್‌ ಅವರಿಂದ ಉಳ್ಳಾಲ ವಲಯದ ನಾಡದೋಣಿ ಮತ್ತು ಗಿಲ್‌ನೆಟ್‌ ಮೀನುಗಾರರ ಸಂಘದ ವತಿಯಿಂದ ನಿರ್ಮಿಸಲಾದ ಪ್ರಥಮ ಬೋಟ್‌ ಆಬ್ಯುಲೆನ್ಸ್‌ ಲೋಕಾರ್ಪಣೆ ಕಾರ್ಯಕ್ರಮ ನಡೆದಿದೆ. 

ಮೀನುಗಾರರೇ ಯೋಜನೆ ರೂಪಿಸಿ ಕಾರ್ಯಗತಗೊಳಿಸಿರುವ ಹಾಗೂ ಮೀನುಗಾರರ ಜೀವರಕ್ಷಣೆಗಾಗಿ ಇದರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಗಣರಾಜ್ಯೋತ್ಸವದ ಅಂಗವಾಗಿ ನದಿ ಮಧ್ಯದಲ್ಲೇ ಧ್ವಜಾರೋಹಣ ನೆರವೇರಿಸಿದರು. ಬೋಟ್‌ ಆಂಬ್ಯುಲೆನ್ಸ್‌ ಆರೋಗ್ಯ ಸಮಸ್ಯೆ ಹಾಗೂ ಅವಘಡ ಸಂಭವಿಸಿದಲ್ಲಿ, ಸೇವೆ ಒದಗಿಸಲಿದೆ ಎನ್ನಲಾಗಿದೆ. Amazon Basics Hard Shell EVA Headphone Carrying Case for Universal Oversized Over-Ear Headset, Shockproof, Water Repellent, Anti-Pressure Portable Protective Pouch/Storage Bag, Black

ಇದರಲ್ಲಿ 30 ಜನರು ಪ್ರಯಾಣಿಸುವಷ್ಟು ಅವಕಾಶವಿದ್ದು, ಇದಕ್ಕಾಗಿ ಚಾಲಕರ ಸಹಿತ 15 ಮಂದಿ ನುರಿತ ತಂಡ ಸಜ್ಜಾಗಿದೆ. ಅಗತ್ಯ ತುರ್ತು ಉಪಕರಣಗಳು, ಆರೋಗ್ಯ ಸೇವಾ ಸಿಬ್ಬಂದಿಯೂ ಇರಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ, ವಿಧಾನಪರಿಷತ್‌ ಸದಸ್ಯ ಬಿ.ಎಂ ಫಾರೂಕ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದನ್ನೂ ಓದಿ: ಬಜೆಟ್ 2026: ಮಧ್ಯಮ ವರ್ಗದವರಿಗೆ ಈ ಬಾರಿ ಲಾಟರಿ ಹೊಡೆಯುತ್ತಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!