Skip to main content
ವಿಡಿಯೋ
webstory

ವಿಮಾನ ದುರಂತಗಳ ಕಪ್ಪು ಛಾಯೆ - ನೇತಾಜಿ ಸುಭಾಷ್‌ ಚಂದ್ರ ಭೋಸ್‌ to ಅಜಿತ್‌ ಪವಾರ್‌ ನಿಧನದವರೆಗೆ

By Shravanthi R
ವಿಮಾನ ದುರಂತಗಳ ಕಪ್ಪು ಛಾಯೆ - ನೇತಾಜಿ ಸುಭಾಷ್‌ ಚಂದ್ರ ಭೋಸ್‌ to ಅಜಿತ್‌ ಪವಾರ್‌ ನಿಧನದವರೆಗೆ

ಇಂದು ಬೆಳಗ್ಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕರಾಗಿರುವ ಅಜಿತ್‌ ಪವಾರ್‌ ಅವರು ಸೇರಿದಂತೆ ಐವರು, ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಮೃತರಾಗಿದ್ದಾರೆ. ಇದು ಭಾರತೀಯ ರಾಜಕಾರಣಿಗಳು ವಾಯುಯಾನ ಅಪಘಾತಗಳಲ್ಲಿ ನಿಧನರಾದ ಮತ್ತೊಂದು ಕರಾಳ ಘಟನೆ ಇತಿಹಾಸಕ್ಕೆ ಸೇರ್ಪಡೆಯಾಗಿದೆ.

ಇತ್ತೀಚೆಗೆ, ವಿಮಾನ ದುರಂತವೆನ್ನುವುದು ಜನಜೀವಗಳ ಬಲಿಪಶುವಾಗಿ ಪರಿಣಮಿಸಿದೆ. ಇಂದು ಬೆಳಗ್ಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕರಾಗಿರುವ ಅಜಿತ್‌ ಪವಾರ್‌ ಅವರು ಸೇರಿದಂತೆ ಐವರು, ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಮೃತರಾಗಿದ್ದಾರೆ. ಇದು ಭಾರತೀಯ ರಾಜಕಾರಣಿಗಳು ವಾಯುಯಾನ ಅಪಘಾತಗಳಲ್ಲಿ ನಿಧನರಾದ ಮತ್ತೊಂದು ಕರಾಳ ಘಟನೆ ಇತಿಹಾಸಕ್ಕೆ ಸೇರ್ಪಡೆಯಾಗಿದೆ. 

ದೇಶವನ್ನು ದಿಗ್ಭ್ರಮೆಗೊಳಿಸಿರುವ ಹೆಲಿಕಾಪ್ಟರ್‌ ಹಾಗೂ ವಿಮಾನ ಅಪಾಘಾತಗಳು ಭಾರತದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಭೋಸ್‌ ಅವರನ್ನು ಸೇರಿದಂತೆ ಪ್ರಮುಖ ಭಾರತದ ರಾಜಕಾರಣಿಗಳನ್ನು ಬಲಿತೆಗೆದುಕೊಂಡಿದೆ. ಇದುವೆ ಭಾರತದ ರಾಜಕಾರಣದ ಇತಿಹಾಸದಲ್ಲಿ ಕರಾಳ ನೆನಪುಗಳನ್ನು ಮರುಕಳಿಸಿದೆ. boAt Nirvana Zenith Pro(2025),50dB Hybrid Adaptive ANC,Spatial Audio, Hi-Res Audio LDAC,6Mics AI-ENx,80 Hrs Battery,Bluetooth,TWS Ear Buds Wireless Earphones with mic,NoiseCancellation(Platinum Gold)

  • 1945ರಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ - ತೈವಾನ್‌ನಲ್ಲಿ ವಿಮಾನ ಅಪಘಾತ. 

  • ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್‌ ಗಾಂಧಿ(1980) - ನವದೆಹಲಿಯಲ್ಲಿನ ಲಘುವಿಮಾನ ಪತನ.

  • ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಾಧವ್‌ ರಾವ್‌ ಸಿಂಧಿಯಾ(2001) - ಉತ್ತರಪ್ರದೇಶದ ವಿಮಾನ ದುರಂತ.

  • ಮಾಜಿ ಲೋಕಸಭಾ ಸ್ಪೀಕರ್‌ ಜಿ.ಎಂ.ಸಿ ಬಾಲಯೋಗಿ (2002) - ಆಂಧ್ರಪ್ರದೇಶದ ಕೈಕಲೂರು ಬಳಿ ಹೆಲಿಕಾಪ್ಟರ್‌ ಅಪಘಾತದಲ್ಲಿ ನಿಧನ.

  • ವೈ.ಎಸ್‌ ರಾಜಶೇಖರ ರೆಡ್ಡಿ(2009) - ಆಂಧ್ರದ ಮುಖ್ಯಮಂತ್ರಿಯಾಗಿದ್ದ ಅವರು ಕರ್ನೂಲು ಬಳಿಯ ನಲ್ಲಮಲ್ಲ ಅರಣ್ಯಪ್ರದೇಶದಲ್ಲಿ ಹೆಲಿಕಾಪ್ಟರ್‌ ದುರಂತದಲ್ಲಿ ನಿಧನ. 

  • ದೋರ್ಜಿ ಖಂಡು(2011) - ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವರು ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದರು.

  • ಭಾರತದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು ಜನರಲ್‌ ಬಿಪಿನ್‌ ರಾವತ್‌(2021) - ತಮಿಳುನಾಡಿನ ಕೂನೂರ್‌ ಬಳಿ ಸಂಭವಿಸಿದ ಅಪಘಾತದಲ್ಲಿ ನಿಧನರಾದರು.  

  • ಕಳೆದ ವರ್ಷ 2025 ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಸಿದ ಹೃದಯವಿದ್ರಾವಕ ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣಗಳ ವೈಮಾನಿಕ ಪತನದಲ್ಲಿ ಗುಜರಾತ್‌ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ವಿಜಯ್‌ ರೂಪಾನಿ ಅವರು ಮೃತಪಟ್ಟರು.

ಹೀಗೆ ದೇಶದ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು ಹೆಲಿಕಾಪ್ಟರ್‌ ಹಾಗೂ ವಿಮಾನ ಅವಘಡಗಳಲ್ಲಿ ಸಾವಿಗೀಡಾಗಿದ್ದಾರೆ. ಇಂದು ಈ ರೀತಿಯ ಅಸಂಭವಗಳಿಗೆ, ದುರಂತಗಳಿಗೆ ಕಾರಣವೇನು - ಸುರಕ್ಷಾ ಶಿಷ್ಟಾಚಾರಗಳನ್ನು ಮರೆತಿರುವುದೇ ಅಥವಾ ಅಜಾಗರೂಕತೆಯ ಫಲಿತಾಂಶವೇ ಎಂದು ಗಂಭೀರ ಚರ್ಚೆಗೀಡು ಮಾಡಿದೆ. ಇದನ್ನೂ ಓದಿ: ಬಾರಾಮತಿಯಲ್ಲಿ ಭೀಕರ ವಿಮಾನ ದುರಂತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿಧನ