ಬೆಂಗಳೂರಿನಲ್ಲಿರುವ ಬಂಗಾಳಿ ವಲಸೆ ಕಾರ್ಮಿಕರಿಗೆ ʻಎಸ್‌ಐಆರ್ʼ ನೋಟಿಸ್ ತಲ್ಲಣ ಮೂಡಿಸಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ವಿಶೇಷ ಮತಪಟ್ಟಿ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಭಾಗವಾಗಿ ರಾಜ್ಯಕ್ಕೆ ಮರಳುವಂತೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
ನಗರದಲ್ಲಿ 9,000 ಕ್ಕೂ ಹೆಚ್ಚು ಬಂಗಾಳಿ ವಲಸೆ ಕಾರ್ಮಿಕರಿದ್ದು, ಜನವರಿ 14ರಿಂದೀಚೆಗೆ ವಿವಿಧೆಡೆ ನೋಟಿಸ್ ತಲುಪಿವೆ ಎಂದು ತಿಳಿಸಲಾಗಿದೆ. ಅಂಕಿ-ಅಂಶಗಳ ಪ್ರಕಾರ, ಈ ಕಾರ್ಮಿಕರ ಸಾಮೂಹಿಕ ನಿರ್ಗಮನವಾಗಿರುವ ಬಗ್ಗೆ ಮಾಹಿತಿ ಬಂದಿದೆ ಎನ್ನಲಾಗಿದೆ. ದಾಖಲೆಗಳ ಪರಿಶೀಲನೆಯ ಭಾಗವಾಗಿ, ಚುನಾವಣಾ ಆಯೋಗದ ಈ ಕ್ರಮವು ಪೌರತ್ವದ ಪ್ರಶ್ನೆಯೆತ್ತಿದೆ ಜೊತೆಗೆ ರಾಜಕೀಯ ಚರ್ಚೆಯನ್ನು ಹೆಚ್ಚಿಸಿದೆ. Mivi DuoPods Echo Earbuds [New Launch], 60 Hours Playtime, AI-ENC for HD Calls, 13mm Drivers, IPX 4.0, BT v5.3, Made in India True Wireless Bluetooth Ear Buds
ಪಶ್ಚಿಮ ಬಂಗಾಳದಲ್ಲಿ ಅಂತಿಮ ಮತದಾರರ ಪಟ್ಟಿ ಪ್ರತಿಯನ್ನು ಫೆಬ್ರವರಿ 14, 2026 ರಂದು ಚುನಾವಣಾ ಆಯೋಗವು ಬಿಡುಗಡೆ ಮಾಡಲಿದ್ದು, ಈ ನಿಟ್ಟಿನಲ್ಲಿ, ಅಲ್ಲಿನ ಚುನಾವಣಾ ಒತ್ತಡ ಹಾಗೂ ರಾಜಕೀಯ ಪರಿಣಾಮಗಳನ್ನು ಹಲವು ರೀತಿ ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಕೊಡುಗೆಯ ನಿರೀಕ್ಷೆ ಇದೆ - ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ