Skip to main content
ವಿಡಿಯೋ
general

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆ - ಇವಿಎಂ ಬಳಕೆಗೆ ಎಸ್‌ಇಸಿಗೆ ನಾಗರೀಕ ಗುಂಪುಗಳ ಆಗ್ರಹ!?

By Shravanthi R
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆ - ಇವಿಎಂ ಬಳಕೆಗೆ ಎಸ್‌ಇಸಿಗೆ ನಾಗರೀಕ ಗುಂಪುಗಳ ಆಗ್ರಹ!?

ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ, ಚುನಾವಣಾ ಪ್ರಕ್ರಿಯೆಗೆ ಬ್ಯಾಲೆಟ್‌ ಪೇಪರ್‌ ಸೂಕ್ತವೇ ಅಥವಾ ವಿದ್ಯುನ್ಮಾನ ಮತಯಂತ್ರ ಸೂಕ್ತವೇ ಎನ್ನುವ ಬಗ್ಗೆ ಪರ-ವಿರೋಧಗಳು ಕೇಳಿಬಂದಿತ್ತು. ಈ ನಡುವೆ, ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ(B.PAC) ನೇತೃತ್ವದಲ್ಲಿ, ನಾಗರೀಕರ ಹಾಗೂ ತಜ್ಞರ ಗುಂಪು ನಿಯೋಗವು ಆಯೋಗಕ್ಕೆ ಮನವಿಯನ್ನು ಸಲ್ಲಿಸಿದೆ ಎನ್ನಲಾಗಿದೆ.

ಬಹುಕಾಲದ ನಂತರ ನಡೆಯಲಿರುವ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ದತೆಗಳು ಬಿರುಸಾಗಿದೆ. ಈ ಬಾರಿಯ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಮತಪತ್ರ ಬಳಸುವುದಾಗಿ ನಿರ್ಧರಿಸಿದೆ. ಇದಕ್ಕೆ ರಾಜಕೀಯ ಹಾಗೂ ನಾಗರೀಕ ವಲಯದಲ್ಲೂ ಭಾರಿ ಚರ್ಚೆಗಳು ಕೇಳಿಬಂದಿದೆ. 

ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ, ಚುನಾವಣಾ ಪ್ರಕ್ರಿಯೆಗೆ ಬ್ಯಾಲೆಟ್‌ ಪೇಪರ್‌ ಸೂಕ್ತವೇ ಅಥವಾ ವಿದ್ಯುನ್ಮಾನ ಮತಯಂತ್ರ ಸೂಕ್ತವೇ ಎನ್ನುವ ಬಗ್ಗೆ ಪರ-ವಿರೋಧಗಳು ಕೇಳಿಬಂದಿತ್ತು. ಈ ನಡುವೆ, ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ(B.PAC) ನೇತೃತ್ವದಲ್ಲಿ, ನಾಗರೀಕರ ಹಾಗೂ ತಜ್ಞರ ಗುಂಪು ನಿಯೋಗವು ಆಯೋಗಕ್ಕೆ ಭೇಟಿಕೊಟ್ಟು ಮನವಿಯನ್ನು ಸಲ್ಲಿಸಿದೆ ಎಂದು ತಿಳಿಸಲಾಗಿದೆ. boAt Rockerz 650 Pro (2025 Launch),Touch/Swipe Controls,Dolby Audio,80Hrs Battery,2Mics Enx,Fast Charge,App Support,Dual Pair,Bluetooth Over Ear Headphones,Wireless Headphone with Mic (Starry Night)

ಬೆಂಗಳೂರು ನಗರವು, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕೇಂದ್ರವೆಂದು ಗುರುತಿಸಿಕೊಳ್ಳುತ್ತಿದೆ., ಮತ್ತೆ ಮತಪತ್ರಗಳಿಗೆ ಮೊರೆ ಹೋಗುವುದು "ಹಿಮ್ಮುಖ ಹೆಜ್ಜೆ" (Regressive Step)ಯಾಗುವುದು ಎಂದು ಆತಂಕ ಕೇಳಿಬರುತ್ತಿದ್ದು, ಪಾರದರ್ಶಕತೆ, ಶೀಘ್ರ ಫಲಿತಾಂಶ ಮತ್ತು ಮತಗಳ ಅಸಿಂಧುಗೊಳ್ಳುವಿಕೆಯನ್ನು ತಡೆಯಲು ಇವಿಎಂಗಳೇ ಸೂಕ್ತ ಎಂದು ಅವರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ರಾಜ್ಯ ಚುನಾವಣಾ ಆಯೋಗದ ಪ್ರತಿಕ್ರಿಯೆ ಹೇಗಿರಲಿದೆ ಮತ್ತು ಏನಾಗಲಿದೆ ಎಂದು ಕಾಯ್ದಿರಿಸಲಾಗಿದೆ. ರಾಜಕೀಯ ಸಂಘರ್ಷವೂ ಹೆಚ್ಚಿದ್ದು, ಪಕ್ಷ-ಪಕ್ಷಗಳ ಆಕ್ಷೇಪಗಳು ಕೇಳಿಬಂದಿದೆ ಎನ್ನಲಾಗಿದೆ. ಮತ್ತೊಂದೆಡೆ, ಜೂನ್‌ 30 ಕ್ಕೆ ಚುನಾವಣೆ ಅಂತ್ಯಗೊಳಿಸುವಂತೆ ಹೇಳಿ ಸುಪ್ರೀಂಕೋರ್ಟ್‌ ತಿಳಿಸಿರುವುದು ಚುನಾವಣಾ ನಿರೀಕ್ಷೆಗಳನ್ನು ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಬಜೆಟ್ 2026: ಯಾರ ನಿರೀಕ್ಷೆ ಏನು..?