ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 78ನೇ ಪುಣ್ಯಸ್ಮರಣೆ. ಈ ದಿನದಂದು ‘ಹುತಾತ್ಮರ ದಿನʼವನ್ನು ಆಚರಿಸಲಾಗುತ್ತದೆ. ಈ ಮೂಲಕ ಗಾಂಧಿ ತತ್ವವಾದ ಅಹಿಂಸೆ ಹಾಗೂ ಶಾಂತಿ ಸಂದೇಶವನ್ನು ಸ್ಮರಿಸಿಕೊಳ್ಳಲಾಗುತ್ತದೆ.
ಇಂದು ಗಾಂಧೀಜಿ ಪುಣ್ಯತಿಥಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಗಣ್ಯರು ಗೌರವ ನಮನವನ್ನು ಸಲ್ಲಿಸಿದ್ದಾರೆ. ದೆಹಲಿಯ ರಾಜ್‌ಘಾಟ್‌ನಲ್ಲಿನ ಮಹಾತ್ಮಗಾಂಧಿ ಅವರ ಸ್ಮಾರಕಕ್ಕೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಸೇರಿದಂತೆ ಅನೇಕರು ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ವಿತರಣೆ ಹಾಗೂ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಗಾಂಧೀ ಸ್ಮರಣೆ ಹಾಗೂ ಹುತಾತ್ಮರ ದಿನದ ಅಂಗವಾಗಿ ಗೌರವಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. GOBOULT Mustang Thunder Bluetooth Headphones with Upto 70H Playtime, BoomX Technology, Brightness LEDs, 40mm Driver, Zen ENC Mic, BTv 5.4, Type-C Fast Charging, Over Ear Wireless Headphone with Mic
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, “ಗಾಂಧೀಜಿಯವರು ಭಾರತೀಯರ ಆತ್ಮದಲ್ಲಿ ಅಮರರಾಗಿರುವುದರಿಂದ ಅವರ ಚಿಂತನೆಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ, ಅವರಿಗೆ ನನ್ನ ವಿನಮ್ರ ಗೌರವಗಳು" ಎಂದು ತಿಳಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅದೇ ರೀತಿ, ಕೇಂದ್ರ ಸಚಿವರಾದ ಹೆಚ್.ಡಿ ಕುಮಾರ್‌ಸ್ವಾಮಿ ಅವರು, “ರಾಷ್ಟ್ರಪಿತ ಪೂಜ್ಯ ಬಾಪು ಅವರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸಿ ನಮಿಸುತ್ತೇನೆ. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸತ್ಯ, ಶಾಂತಿ, ಅಹಿಂಸೆಯ ಆಯಾಮ ಕೊಟ್ಟು ಚಳವಳಿಯನ್ನು ಮುನ್ನಡಿಸಿ ಯಶಸ್ಸು ಸಾಧಿಸಿದ ಮಹಾತ್ಮ ಗಾಂಧೀಜಿ ಅವರಿಗೆ, ಅವರ ಪುಣ್ಯಸ್ಮರಣೆ ಈ ದಿನದಂದು ನಮನಗಳನ್ನು ಸಮರ್ಪಿಸುತ್ತೇನೆ.” ಎಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗ್ರಾಮ ಪಂಚಾಯಿತಿ ಚುನಾವಣೆಗೆ ವೇಗ - ಜಿಲ್ಲಾಧಿಕಾರಿಗಳಿಗೆ ಪೂರ್ವಸಿದ್ದತಾ ವರದಿ ಸಲ್ಲಿಸಲು ಸೂಚನೆ