ಈ ಬಾರಿಯ ಐತಿಹಾಸಿಕ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುತ್ತಿದ್ದಾರೆ. ಈ ನಡುವಲ್ಲಿ ಆಕರ್ಷಿತ ಯೋಜನೆಗಳನ್ನು ಪರಿಚಯಿಸಿದ್ದಾರೆ.
ತಮ್ಮ ಭಾಷಣದಲ್ಲಿ ಮೂರು ಕರ್ತವ್ಯಗಳನ್ನು ತಿಳಿಸಿದರು -
ಆರ್ಥಿಕತ ಬೆಳವಣಿಗೆಯನ್ನು ವೇಗಗೊಳಿಸುವುದು
ಜನರ ಆಕಾಂಕ್ಷೆಗಳನ್ನು ಪೂರೈಸುವುದು
ಎಲ್ಲರಿಗೂ ಸಂಪನ್ಮೂಲಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು
ಮುಂದಿನ ಐದು ವರ್ಷಗಳಲ್ಲಿ ಬಯೋಫಾರ್ಮಗೆ 10,000 ಕೋಟಿ ರೂ. ಹೂಡಿಕೆ
ಖಾದಿ ಕೈಮಗ್ಗ ವಲಯಕ್ಕೆ ಮಹಾತ್ಮ ಗಾಂಧಿ ಸ್ವರಾಜ್ ಯೋಜನೆ
ಬಾಹ್ಯಾಕಾಶದಲ್ಲಿ ಸ್ವಾವಲಂಬನೆಗಾಗಿ ನ್ಯಾಷನಲ್ ಫೈಬರ್ ಯೋಜನೆ
ʻಕಾರ್ಪೋರೇಟ್ ಮಿತ್ರʼರಿಗೆ ತರಬೇತಿ ನೀಡಲು ಮಾಡ್ಯುಲರ್ ಯೋಜನೆಗಳು
ಮುಂದಿನ ಐದು ವರ್ಷಗಳಲ್ಲಿ ಜಲಮಾರ್ಗಗಳ ಅಭಿವೃದ್ದಿಗಾಗಿ 20,000 ಕೋಟಿ
15,000 ಶಾಲೆಗಳು, 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಸ್ಥಾಪನೆ
ಶಿಕ್ಷಣದಿಂದ ಉದ್ಯೋಗ ಹಾಗೂ ಉದ್ಯಮ ಸ್ಥಾಯಿ ಸಮಿತಿಯ ಸ್ಥಾಪನೆ
ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಕುರಿತ ಉನ್ನತ ಮಟ್ಟದ ಸಮಿತಿ ಸ್ಥಾಪನೆ
ಬೇಟಿ ಬಚಾವೋ, ಬೇಟಿ ಪಢಾವೋ' ವಿಸ್ತರಣೆ - ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ 'ಹೆಣ್ಣು ಮಕ್ಕಳ ಹಾಸ್ಟೆಲ್'
ಬೆಂಗಳೂರು ಸೇರಿ ಪ್ರಮುಖ ನಗರಗಳ ಬೆಸೆಯುವ ಹೈಸ್ಪೀಡ್ ರೈಲು ಕಾರಿಡಾರ್