Skip to main content
ವಿಡಿಯೋ
1/2
general

ಪಿಐಬಿ ವತಿಯಿಂದ ವಿಶೇಷ ಪ್ರವಾಸ: ಈಶಾನ್ಯದ ಏಳು ರಾಜ್ಯಗಳ ಬೆಸೆವ ಕೊಂಡಿ ಅಸ್ಸಾಂ ರೈಫಲ್ಸ್ ಕೇಂದ್ರಕ್ಕೆ ಭೇಟಿ..!

By Sushmitha R
ಪಿಐಬಿ ವತಿಯಿಂದ ವಿಶೇಷ ಪ್ರವಾಸ: ಈಶಾನ್ಯದ ಏಳು ರಾಜ್ಯಗಳ ಬೆಸೆವ ಕೊಂಡಿ ಅಸ್ಸಾಂ ರೈಫಲ್ಸ್ ಕೇಂದ್ರಕ್ಕೆ ಭೇಟಿ..!

ಭಾರತದ ಈಶಾನ್ಯ ರಾಜ್ಯಗಳ ಭದ್ರತೆಯ ಬೆನ್ನೆಲುಬಾಗಿರುವ ಅಸ್ಸಾಂ ರೈಫಲ್ಸ್, ಕೇವಲ ಒಂದು ಅರೆಸೇನಾ ಪಡೆಯಲ್ಲ ಅದು ಆ ಭಾಗದ ಜನರ ಪಾಲಿನ 'ಈಶಾನ್ಯದ ರಕ್ಷಕ' .

ಭಾರತದ ಈಶಾನ್ಯ ರಾಜ್ಯಗಳ ಭದ್ರತೆಯ ಬೆನ್ನೆಲುಬಾಗಿರುವ ಅಸ್ಸಾಂ ರೈಫಲ್ಸ್, ಕೇವಲ ಒಂದು ಅರೆಸೇನಾ ಪಡೆಯಲ್ಲ ಅದು ಆ ಭಾಗದ ಜನರ ಪಾಲಿನ 'ಈಶಾನ್ಯದ ರಕ್ಷಕ' . 1835ರಲ್ಲಿ 'ಕಚಾರ್ ಲೇವಿ' ಎಂಬ ಹೆಸರಿನಲ್ಲಿ ಕೇವಲ 750 ಸಿಬ್ಬಂದಿಯೊಂದಿಗೆ ಆರಂಭವಾಗಿದೆ.

ಈ ಪಡೆಯು, ಇಂದು ಸುಮಾರು 66,000 ಸಿಬ್ಬಂದಿಯನ್ನು ಹೊಂದಿರುವ ಬಲಿಷ್ಠ ಪಡೆಯಾಗಿ ಬೆಳೆದಿದೆ. ಇತ್ತೀಚೆಗೆ ಬೆಂಗಳೂರಿನ ವಾರ್ತಾ ಶಾಖೆಯು ಮೇಘಾಲಯಕ್ಕೆ ಆಯೋಜಿಸಿದ್ದ ಮಾಧ್ಯಮ ಪ್ರವಾಸದಲ್ಲಿ ಕರ್ನಾಟಕದ ತಂಡಕ್ಕೆ ಈ ಪಡೆಯ ವೀರಗಾಥೆಯ ಪರಿಚಯವಾಯಿತು.YouBella Jewellery Sets for Women Crystal Studded Necklace Jewellery set Bracelet with Earrings For Girls/Women

ಯುದ್ಧದ ಹಾದಿ:

ಅಸ್ಸಾಂ ರೈಫಲ್ಸ್ ತನ್ನ ಸುದೀರ್ಘ ಇತಿಹಾಸದಲ್ಲಿ ವಿಶ್ವದ ಪ್ರಮುಖ ಯುದ್ಧಗಳಲ್ಲಿ ಪಾಲ್ಗೊಂಡಿದೆ. ಮೊದಲನೇ ಮತ್ತು ಎರಡನೇ ಮಹಾಯುದ್ಧಗಳಲ್ಲಿ ತನ್ನ ಶೌರ್ಯ ಮೆರೆದ ಈ ಪಡೆಯು, ಸ್ವಾತಂತ್ರ್ಯಾ ನಂತರ 1962ರ ಚೀನಾ ಯುದ್ಧ, 1965 ಮತ್ತು 1971ರ ಪಾಕಿಸ್ತಾನದ ವಿರುದ್ಧದ ಯುದ್ಧಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದೆ.

ಬ್ರಿಗೇಡಿಯರ್ ಸಂದೀಪ್ ಚಟರ್ಜಿ ಅವರ ಪ್ರಕಾರ, ಈ ಪಡೆಯು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಇದರ ಕಾರ್ಯಾಚರಣೆಯ ನಿಯಂತ್ರಣವನ್ನು ಭಾರತೀಯ ಸೇನೆ ಹೊಂದಿದೆ.ಇದನ್ನು ಓದಿ: 5 ರಾಜ್ಯಗಳ ಚುನಾವಣೆ ಸಮೀಪಿಸುತ್ತಿರುವಾಗಲೇ ಸಮರ; ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ..!

ಗಡಿ ರಕ್ಷಣೆ ಮತ್ತು ಮಾನವೀಯ ಸೇವೆ:

ಇಂಡೋ-ಮಯನ್ಮಾರ್ ಗಡಿಯ ಕಾವಲುಗಾರನಾಗಿರುವ ಅಸ್ಸಾಂ ರೈಫಲ್ಸ್, ಆಂತರಿಕ ದಂಗೆಗಳನ್ನು ದಮನ ಮಾಡುವ ಜೊತೆಗೆ ಕಳ್ಳಸಾಗಾಣಿಕೆಯಂತಹ ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

2015ರಿಂದ ಮಹಿಳಾ ಸಿಬ್ಬಂದಿಗಳನ್ನೂ ಒಳಗೊಂಡಿರುವ ಈ ಪಡೆಯು, ಗಡಿ ಭಾಗದಲ್ಲಿ ಪಾರದರ್ಶಕ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಕೇವಲ ಬಂದೂಕು ಹಿಡಿಯುವುದಕ್ಕಷ್ಟೇ ಸೀಮಿತವಾಗದೆ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯ, ಆರೋಗ್ಯ ಶಿಬಿರಗಳು ಮತ್ತು ಮೂಲಸೌಕರ್ಯಾಭಿವೃದ್ಧಿಯ ಮೂಲಕ ಬುಡಕಟ್ಟು ಸಮುದಾಯಗಳ ವಿಶ್ವಾಸವನ್ನೂ ಗಳಿಸಿದೆ.ಇದನ್ನು ಓದಿ: ತಮಿಳುನಾಡು ಚುನಾವಣೆ: ಎಐಎಡಿಎಂಕೆಯಿಂದ 3 ಗ್ಯಾಸ್ ಸಿಲಿಂಡರ್, ವೃದ್ಧಾಪ್ಯ ವೇತನ ಹೆಚ್ಚಳದ ಭರವಸೆ