Skip to main content
ವಿಡಿಯೋ
general

ಏಪ್ರಿಲ್‌- ಮೇ ನಲ್ಲಿ ಕರ್ನಾಟಕ ಚುನಾವಣೆ - ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗದ ಸೂಚನೆ

By Shravanthi R
ಏಪ್ರಿಲ್‌- ಮೇ ನಲ್ಲಿ ಕರ್ನಾಟಕ ಚುನಾವಣೆ - ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗದ ಸೂಚನೆ

ಕಳೆದ ಕೆಲ ವರ್ಷಗಳಿಂದ ವಿಳಂಬವಾಗಿದ್ದ ವಿವಿಧ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗದ ಕೆಲಸಗಳು ಬಿರುಸಾಗಿದೆ. ಮುಂಬರುವ ಏಪ್ರಿಲ್‌ - ಮೇ ತಿಂಗಳ ಮಧ್ಯಭಾಗದಲ್ಲಿ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಯಲಿದೆ ಎಂದು ತಿಳಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ವಿಳಂಬವಾಗಿದ್ದ ವಿವಿಧ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗದ ಕೆಲಸಗಳು ಬಿರುಸಾಗಿದೆ. ಮುಂಬರುವ ಏಪ್ರಿಲ್‌ - ಮೇ ತಿಂಗಳ ಮಧ್ಯಭಾಗದಲ್ಲಿ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಯಲಿದೆ ಎಂದು ತಿಳಿಸಲಾಗಿದೆ. ಈ ಹಿನ್ನಲೆಯಲ್ಲಿ, ಚುನಾವಣೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಆಯೋಗವು ಆಯಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚಿಸಿದೆ. 

ಬಹುನಿರೀಕ್ಷಿತ ಜಿಬಿಎ ಚುನಾವಣೆ (5 ಪಾಲಿಕೆ - 369 ವಾರ್ಡ್‌ಗಳು) ಸೇರಿದಂತೆ, ಗ್ರಾಮ ಪಂಚಾಯತಿ(6,000 ಗ್ರಾಮಗಳು) ಜಿಲ್ಲಾ ಪಂಚಾಯಿತಿ (31 ಜಿಲ್ಲೆ - 1,130 ಕ್ಷೇತ್ರಗಳು) ತಾಲೂಕು ಪಂಚಾಯಿತಿ( 239 ತಾಲೂಕು - 3,671 ಕ್ಷೇತ್ರಗಳು), ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ (ನಗರ ಸ್ಥಳೀಯ ಸಂಸ್ಥೆಗಳು 185 ಕ್ಷೇತ್ರಗಳು) 2 ಕ್ಷೇತ್ರಗಳಲ್ಲಿ ಉಪಚುನಾವಣೆ, ಮಹಾನಗರ ಪಾಲಿಕೆ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಏಕಕಾಲಕ್ಕೆ ಒಂದೇ ಹಂತದಲ್ಲಿ ನಡೆಯಲಿವೆ ಎಂದು ತಿಳಿಸಲಾಗಿದೆ. BIBA Women Liva Straight Printed Kurta

ಇನ್ನೊಂದೆಡೆ, ಮತದಾನ ಪ್ರಕ್ರಿಯೆಯು ಬ್ಯಾಲೆಟ್‌ ಪೇಪರ್‌ ನಡೆಯಿರುವುದು ವಿಶೇಷ ಗಮನ ಸೆಳೆದಿದೆ. ಹಲವು ಗೊಂದಲಗಳ ನಡುವಲ್ಲಿ, ಆಡಳಿತ ಹಾಗೂ ಪ್ರತಿಪಕ್ಷಗಳಿಗೆ ಚುನಾವಣಾ ಅಗ್ನಿಪರೀಕ್ಷೆ ಎದುರಾಗಲಿದೆ. ಇದನ್ನೂ ಓದಿ: ಗ್ರಾಮ ಪಂಚಾಯಿತಿ ಸಮರಕ್ಕೆ ಮುಹೂರ್ತ ಫಿಕ್ಸ್: ಮಾರ್ಚ್ ಅಂತ್ಯದೊಳಗೆ ಪಂಚಾಯಿತಿ ಚುನಾವಣೆ ಸಂಚಲನ..!