Skip to main content
ವಿಡಿಯೋ
sports

ಕ್ರಿಕೆಟಿಗ ರಿಂಕು ಸಿಂಗ್ ತಂದೆ ನಿಧನ… ಅವರ ಕೊನೆಯ ಆಶೆ ಏನು ಗೊತ್ತಾ? ಇಲ್ಲಿದೆ ಮಾಹಿತಿ

By Ram Chethan
ಕ್ರಿಕೆಟಿಗ ರಿಂಕು ಸಿಂಗ್ ತಂದೆ ನಿಧನ… ಅವರ ಕೊನೆಯ ಆಶೆ ಏನು ಗೊತ್ತಾ? ಇಲ್ಲಿದೆ ಮಾಹಿತಿ

ಟಿ20 ವಿಶ್ವಕಪ್ 2026ರ ನಡುವೆ ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ ನಿಧನರಾಗಿದ್ದು, ಕ್ರಿಕೆಟ್ ಲೋಕವನ್ನು ದುಃಖದಲ್ಲಿ ಮುಳುಗಿಸಿದೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ತಂದೆಯ ಕೊನೆಯ ಆಸೆ ವಿಶ್ವಕಪ್ ಟ್ರೋಫಿ ಗೆಲ್ಲುವುದು ಆಗಿದ್ದು, ಇದೀಗ ಆ ಕನಸನ್ನು ನೆರವೇರಿಸುವ ಜವಾಬ್ದಾರಿ ರಿಂಕು ಸಿಂಗ್ ಮೇಲಿದೆ.

ಟೀಮ್ ಇಂಡಿಯಾದ ಯುವ ಸ್ಟಾರ್ ಫಿನಿಶರ್ ರಿಂಕು ಸಿಂಗ್ ಅವರ ಜೀವನದಲ್ಲಿ ದೊಡ್ಡ ದುಃಖ ಸಂಭವಿಸಿದೆ. ಅವರ ತಂದೆ ಖಾನ್‌ಚಂದ್ ಸಿಂಗ್ ಅವರು ನಿಧನರಾಗಿದ್ದಾರೆ. ಅವರು ಕಳೆದ ಸುಮಾರು ಒಂದೂವರೆ ವರ್ಷಗಳಿಂದ 4ನೇ ಹಂತದ ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಬಹಳ ಹದಗೆಟ್ಟಿದ್ದು, ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta

ಟಿ20 ವಿಶ್ವಕಪ್ 2026ರ ಮಧ್ಯದಲ್ಲಿ ಈ ದುಃಖದ ಸುದ್ದಿ ರಿಂಕು ಸಿಂಗ್ ಅವರಿಗೆ ತಲುಪಿತು. ತಂದೆಯ ಆರೋಗ್ಯ ಗಂಭೀರವಾಗಿದೆ ಎಂಬ ಮಾಹಿತಿ ತಿಳಿದ ತಕ್ಷಣ ಅವರು ತಂಡವನ್ನು ತೊರೆದು ಮನೆಗೆ ಮರಳಿದ್ದರು. ನಂತರ ಚೆನ್ನೈನಲ್ಲಿ ನಡೆದ ಅಭ್ಯಾಸಕ್ಕೂ ಹಾಜರಾಗಲು ಸಾಧ್ಯವಾಗಲಿಲ್ಲ. ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮೊದಲು ಅವರು ಮತ್ತೆ ತಂಡ ಸೇರಿಕೊಂಡಿದ್ದರೂ, ತಂದೆಯ ನಿಧನದ ಸುದ್ದಿ ಕೇಳಿ ಮತ್ತೆ ಕುಟುಂಬದ ಬಳಿಗೆ ತೆರಳಿದ್ದಾರೆ.

ಖಾನ್‌ಚಂದ್ ಸಿಂಗ್ ಅವರಿಗೆ ತಮ್ಮ ಮಗ ವಿಶ್ವಕಪ್ ಟ್ರೋಫಿಯೊಂದಿಗೆ ಮನೆಗೆ ಮರಳಬೇಕು ಎಂಬ ದೊಡ್ಡ ಕನಸು ಇತ್ತು. ಕಳೆದ ತಿಂಗಳು ವಿಶ್ವಕಪ್ ಟ್ರೋಫಿಯನ್ನು ಪ್ರದರ್ಶಿಸಿದಾಗ ಅವರು ರಿಂಕು ಸಿಂಗ್ ಅವರಿಗೆ ವೀಡಿಯೊ ಕರೆ ಮಾಡಿ ಟ್ರೋಫಿಯನ್ನು ತೋರಿಸಿ, “ನಾವು ಇದನ್ನು ಗೆಲ್ಲಬೇಕು” ಎಂದು ಹೇಳಿದ್ದರಂತೆ. ಮಗನ ಸಾಧನೆ ಮೇಲೆ ಅವರಿಗೆ ಅಪಾರ ನಂಬಿಕೆ ಇತ್ತು.ಇದನ್ನು ಓದಿ:ಬಾಗೇಪಲ್ಲಿ ಶಾಸಕ ಎಸ್‌.ಎನ್ ಸುಬ್ಬಾರೆಡ್ಡಿಗೆ ಸುಪ್ರೀಂ ಬಿಗ್ ರಿಲೀಫ್: ಹೈಕೋರ್ಟ್ ಆದೇಶಕ್ಕೆ ತಡೆ

ಈಗ ತಂದೆಯ ಅಗಲಿಕೆಯಿಂದ ರಿಂಕು ಸಿಂಗ್ ದುಃಖದಲ್ಲಿ ಮುಳುಗಿದ್ದಾರೆ. ಆದರೆ ತಂದೆಯ ಕೊನೆಯ ಆಸೆಯನ್ನು ನೆರವೇರಿಸಲು ಅವರು ಇನ್ನಷ್ಟು ಶ್ರಮಿಸಿ ಟಿ20 ವಿಶ್ವಕಪ್ ಗೆಲ್ಲುವ ದೃಢ ನಿಶ್ಚಯ ಮಾಡಿಕೊಂಡಿದ್ದಾರೆ. ಅವರ ಅಭಿಮಾನಿಗಳು ಕೂಡ ಈ ಕಠಿಣ ಸಮಯದಲ್ಲಿ ರಿಂಕು ಸಿಂಗ್ ಅವರಿಗೆ ಧೈರ್ಯ ತುಂಬುತ್ತಿದ್ದಾರೆ.