ಕಾನೂನು ಹೋರಾಟದ ಬಳಿಕ ‘ದಿ ಕೇರಳ ಸ್ಟೋರಿ 2’ ಚಿತ್ರತಂಡಕ್ಕೆ ಮಹತ್ವದ ರಿಲೀಫ್ ದೊರೆತಿದೆ. ಸಿನಿಮಾದ ಬಿಡುಗಡೆಯನ್ನು ತಡೆಗಟ್ಟಿದ್ದ ಹಿಂದಿನ ಆದೇಶಕ್ಕೆ ಕೇರಳ ಹೈಕೋರ್ಟ್ ಈಗ ತಡೆ ನೀಡಿದ್ದು, ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. ಇದರೊಂದಿಗೆ ಬಿಡುಗಡೆಗೆ ಎದುರಾದ ಅಡೆತಡೆಗಳು ದೂರವಾಗಿದ್ದು, ನಿರ್ಮಾಪಕರು ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.Titan Crest 2.0 Smart Watch for Man & Women, 1.43" AMOLED Display, Silicone Strap, BT Calling, Tailored Activity Tracker, 100+ Sports Modes, Fast Charging, Smart Watches for Women Latest & Men (Teal)
‘ದಿ ಕೇರಳ ಸ್ಟೋರಿ 2’ ಸಿನಿಮಾ ಟ್ರೇಲರ್ ಬಿಡುಗಡೆಯಾದ ನಂತರವೇ ವಿವಾದಕ್ಕೆ ಕಾರಣವಾಗಿತ್ತು. ಲವ್ ಜಿಹಾದ್ ವಿಷಯವನ್ನು ಆಧಾರವಾಗಿಸಿಕೊಂಡ ಕಥಾವಸ್ತು ಇದರಲ್ಲಿ ಇದೆ ಎಂದು ಹೇಳಲಾಗುತ್ತಿದೆ. ಟೀಸರ್ ಮತ್ತು ಟ್ರೇಲರ್‌ನಲ್ಲಿ ಕೆಲವು ದೃಶ್ಯಗಳು ಹಾಗೂ ಸಂಭಾಷಣೆಗಳು ಸಮಾಜದಲ್ಲಿ ಭಿನ್ನಾಭಿಪ್ರಾಯ ಹುಟ್ಟಿಸುವಂತಿವೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ವಿಷಯ ಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣವನ್ನು ವಿಚಾರಿಸಿದ ನ್ಯಾಯಾಲಯವು ಮೊದಲಿಗೆ ಟೀಸರ್ ತೆಗೆದುಹಾಕುವಂತೆ ಸೂಚನೆ ನೀಡಿತ್ತು. ನಂತರ ಸಿನಿಮಾದ ಬಿಡುಗಡೆಯನ್ನೇ ಮುಂದೂಡುವಂತೆ ಆದೇಶ ನೀಡಲಾಗಿತ್ತು. ಆದರೆ ನಿರ್ಮಾಪಕರ ಪರವಾಗಿ ತಕ್ಷಣ ಮೇಲ್ಮನವಿ ಸಲ್ಲಿಸಲಾಯಿತು. ತುರ್ತು ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಎರಡೂ ಕಡೆಯ ವಾದಗಳನ್ನು ಆಲಿಸಿ, ಇದೀಗ ಬಿಡುಗಡೆಗೆ ಅನುಮತಿ ನೀಡಿದೆ.
ಈ ಚಿತ್ರವನ್ನು ವಿಪುಲ್ ಅಮೃತ್‌ಲಾಲ್ ಶಾ ನಿರ್ಮಿಸಿದ್ದಾರೆ. ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಉಲ್ಕಾ ಗುಪ್ತಾ, ಐಶ್ವರ್ಯಾ ಊಜಾ ಮತ್ತು ಅದಿತಿ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.ಇದನ್ನು ಓದಿ:ಮೋದಿಯನ್ನು ಭೇಟಿಯಾದ ವಿಜಯ್–ರಶ್ಮಿಕಾ..ಹೊಸ ಜೋಡಿಗೆ ಪ್ರಧಾನಿ ಏನು ಹೇಳಿದರು? ಇಲ್ಲಿದೆ ಮಾಹಿತಿ
ಈ ಸಿನಿಮಾವನ್ನು ಕುರಿತಾಗಿ ಕೇರಳದಲ್ಲಿ ಇನ್ನೂ ವಿರೋಧದ ಸ್ವರಗಳು ಕೇಳಿಬರುತ್ತಿವೆ. ಆದರೂ ಕೋರ್ಟ್ ಅನುಮತಿ ಸಿಕ್ಕಿರುವುದರಿಂದ ಇದೀಗ ಪ್ರದರ್ಶನಕ್ಕೆ ದಾರಿ ತೆರೆಯಲಾಗಿದೆ. ಇಷ್ಟೊಂದು ಚರ್ಚೆ ಮತ್ತು ವಿವಾದ ಹುಟ್ಟಿಸಿರುವ ಈ ಸಿನಿಮಾದಲ್ಲಿ ಏನಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಸಿನಿಮಾ ಬಿಡುಗಡೆಯಾದ ಬಳಿಕ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಕಾದು ನೋಡಬೇಕಾಗಿದೆ.