ಗೋಣಿಬೀಡು ಸಮೀಪದ ಕಾಫಿ ತೋಟಗಳ ಪ್ರದೇಶದಲ್ಲಿ ಕಾಡಾನೆ ‘ಭೀಮ’ ಕಳೆದ ನಾಲ್ಕು ದಿನಗಳಿಂದ ಬೀಡುಬಿಟ್ಟಿರುವುದು ಸ್ಥಳೀಯರಲ್ಲಿ ಭಯ ಮತ್ತು ಆತಂಕವನ್ನು ಉಂಟುಮಾಡಿದೆ. ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಬಂದ ಸುಮಾರು 30 ಕಾಡಾನೆಗಳ ಹಿಂಡು ಈ ಭಾಗದಲ್ಲಿ ತಂಗಿದ್ದು, ಆ ಹಿಂಡಿನಿಂದ ಬೇರ್ಪಟ್ಟಿರುವ ಭೀಮ ಒಂಟಿಯಾಗಿ ಜನವಸತಿ ಪ್ರದೇಶಗಳತ್ತ ಹಾಗೂ ಕಾಫಿ ತೋಟಗಳೊಳಗೆ ಸಂಚರಿಸುತ್ತಿದೆ ಎಂದು ತಿಳಿದುಬಂದಿದೆ. ಇದರಿಂದ ರೈತರು ಮತ್ತು ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ರಾತ್ರಿ ವೇಳೆ ಮಾತ್ರವಲ್ಲದೆ ಬೆಳಗ್ಗಿನ ಸಮಯದಲ್ಲಿಯೂ ಆನೆ ಕಾಣಿಸಿಕೊಂಡಿರುವ ಮಾಹಿತಿ ಇದೆ.Titan Crest 2.0 Smart Watch for Man & Women, 1.43" AMOLED Display, Silicone Strap, BT Calling, Tailored Activity Tracker, 100+ Sports Modes, Fast Charging, Smart Watches for Women Latest & Men (Teal)
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಭದ್ರತಾ ಕ್ರಮವಾಗಿ ಸ್ಥಳೀಯರು ಕೆಲ ದಿನಗಳ ಕಾಲ ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಬಾರದು ಎಂದು ಸೂಚನೆ ನೀಡಲಾಗಿದೆ. ಜೊತೆಗೆ, ಒಂಟಿಯಾಗಿ ಹೊರಗೆ ಹೋಗಬಾರದು, ರಾತ್ರಿ ಸಮಯದಲ್ಲಿ ಮನೆಗಳಿಂದ ಹೊರಬರಬಾರದು ಮತ್ತು ಯಾವುದೇ ಅನುಮಾನಾಸ್ಪದ ಚಲನವಲನ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಗ್ರಾಮಸ್ಥರು ಎಚ್ಚರಿಕೆಯಿಂದ ಇರಲು ಮತ್ತು ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳು ವಿನಂತಿಸಿದ್ದಾರೆ.