Skip to main content
ವಿಡಿಯೋ
1/2
cinema

‘ದಿ ಕೇರಳ ಸ್ಟೋರಿ 2’: ಮೊದಲ ದಿನ ಕೇವಲ 75 ಲಕ್ಷ, ವಾರಾಂತ್ಯದಲ್ಲಿ ಕೋಟಿ ಕೋಟಿ ಕಲೆಕ್ಷನ್! ಇಲ್ಲಿದೆ ಸಂಪೂರ್ಣ ಮಾಹಿತಿ

By Ram Chethan
‘ದಿ ಕೇರಳ ಸ್ಟೋರಿ 2’: ಮೊದಲ ದಿನ ಕೇವಲ 75 ಲಕ್ಷ, ವಾರಾಂತ್ಯದಲ್ಲಿ ಕೋಟಿ ಕೋಟಿ ಕಲೆಕ್ಷನ್! ಇಲ್ಲಿದೆ ಸಂಪೂರ್ಣ ಮಾಹಿತಿ

ಲವ್ ಜಿಹಾದ್ ಕಥಾಹಂದರದಿಂದಾಗಿ ಸಾಕಷ್ಟು ವಿವಾದಗಳ ನಡುವೆ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಮೊದಲ ದಿನ ಕೇವಲ 75 ಲಕ್ಷ ಗಳಿಸಿದ ಈ ಚಿತ್ರ, ಶನಿವಾರ ಮತ್ತು ಭಾನುವಾರ ಭರ್ಜರಿ ಕಲೆಕ್ಷನ್ ಮಾಡಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ವಿವಾದಗಳ ನಡುವೆಯೇ ‘ದಿ ಕೇರಳ ಸ್ಟೋರಿ 2’ ಸಿನಿಮಾ ದೇಶದಾದ್ಯಂತ ಬಿಡುಗಡೆಯಾಗಿದೆ. ಲವ್ ಜಿಹಾದ್ ವಿಷಯವನ್ನು ಆಧಾರವಾಗಿಸಿಕೊಂಡಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕೆಲವು ಸಂಘಟನೆಗಳು ಮತ್ತು ವ್ಯಕ್ತಿಗಳು ಈ ಚಿತ್ರದ ವಿರುದ್ಧ ಕೋರ್ಟ್ ಮೊರೆ ಹೋಗಿದ್ದರು. ಕೇರಳ ಹೈಕೋರ್ಟ್ ಮೊದಲಿಗೆ ಚಿತ್ರದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಿತ್ತು. ಆದರೆ ನಂತರ ನಡೆದ ಮರು ವಿಚಾರಣೆಯಲ್ಲಿ ನ್ಯಾಯಾಲಯವು ತಡೆ ತೆಗೆದುಹಾಕಿ ಸಿನಿಮಾ ಬಿಡುಗಡೆಯಿಗೆ ಅನುಮತಿ ನೀಡಿತು.Arayna Women's Cotton Printed Floral Straight Kurta with Palazzo Pants and Dupatta

ಈ ಸಿನಿಮಾ ಶುಕ್ರವಾರ ತೆರೆಗೆ ಬಂದಿದೆ. ಮೊದಲ ದಿನ ಚಿತ್ರವು ಕೇವಲ 75 ಲಕ್ಷ ರೂಪಾಯಿ ಮಾತ್ರ ಗಳಿಕೆ ಮಾಡಿತ್ತು. ಇದರಿಂದ ಸಿನಿಮಾ ಆರಂಭದಲ್ಲಿ ನಿಧಾನವಾಗಿ ಸಾಗುತ್ತಿದೆ ಎಂದು ಅನಿಸಿಕೊಂಡರು. ಆದರೆ ವಾರಾಂತ್ಯದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಶನಿವಾರ ಸಿನಿಮಾ ಸುಮಾರು 4.65 ಕೋಟಿ ರೂಪಾಯಿ ಗಳಿಸಿತು. ಭಾನುವಾರ ಕೂಡ ಸುಮಾರು 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಬೆಳವಣಿಗೆ ತೋರಿಸಿತು.

‘ದಿ ಕೇರಳ ಸ್ಟೋರಿ 2’ ಸಿನಿಮಾದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಓಝಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನ ಮಾಡಿದ್ದು, ವಿಪುಲ್ ಅಮೃತ್‌ಲಾಲ್ ಶಾ ನಿರ್ಮಿಸಿದ್ದಾರೆ. ಚಿತ್ರದ ಕಥೆಯಲ್ಲಿ ಲವ್ ಜಿಹಾದ್ ಕುರಿತ ಘಟನೆಗಳನ್ನು ತೋರಿಸಲಾಗಿದೆ ಎಂದು ಹೇಳಲಾಗುತ್ತಿದೆ.27 ವರ್ಷಗಳ ದಾಂಪತ್ಯಕ್ಕೆ ಫೆಬ್ರವರಿ 27ರಂದು ವಿಚ್ಛೇದನ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ..?

ಈ ಮೊದಲು ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾವೂ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹಿಂದೂ ಯುವತಿಯರನ್ನು ಮತಾಂತರ ಮಾಡಿ ಉಗ್ರ ಸಂಘಟನೆಗಳಿಗೆ ಸೇರಿಸುವ ಕಥೆಯನ್ನು ಆ ಚಿತ್ರದಲ್ಲಿ ತೋರಿಸಲಾಗಿತ್ತು. ಅದೇ ಹಿನ್ನೆಲೆಯಲ್ಲೇ ಈಗ ‘ದಿ ಕೇರಳ ಸ್ಟೋರಿ 2’ ಕೂಡ ಚರ್ಚೆಗೆ ಕಾರಣವಾಗಿದೆ.

ಮೊದಲ ದಿನ ಕಡಿಮೆ ಕಲೆಕ್ಷನ್ ಮಾಡಿದರೂ ವಾರಾಂತ್ಯದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.