Skip to main content
ವಿಡಿಯೋ
1/2
cinema

ಮಹಿಳಾ ನಟಿಯರ ಗೌರವ ಕಾಪಾಡಿ: ಸೋಶಿಯಲ್ ಮೀಡಿಯಾ ವಿರುದ್ಧ ರಕ್ಷಿತಾ ಪ್ರೇಮ್ ಕಿಡಿ..!ಇಲ್ಲಿದೆ ಮಾಹಿತಿ

By Ram Chethan
ಮಹಿಳಾ ನಟಿಯರ ಗೌರವ ಕಾಪಾಡಿ: ಸೋಶಿಯಲ್ ಮೀಡಿಯಾ ವಿರುದ್ಧ ರಕ್ಷಿತಾ ಪ್ರೇಮ್ ಕಿಡಿ..!ಇಲ್ಲಿದೆ ಮಾಹಿತಿ

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ನಟಿಯರ ಫೋಟೋ ಮತ್ತು ವಿಡಿಯೋಗಳನ್ನು ಅಸಭ್ಯವಾಗಿ ಜೂಮ್ ಮಾಡಿ ಪೋಸ್ಟ್ ಮಾಡುವವರ ವಿರುದ್ಧ ನಟಿ ರಕ್ಷಿತಾ ಪ್ರೇಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಈ ಕ್ಷೇತ್ರಕ್ಕೆ ಬಂದಿದ್ದು ನಮ್ಮ ಕಲೆಯನ್ನು ತೋರಿಸಲು ಮಾತ್ರ, ದೇಹದ ಪ್ರದರ್ಶನಕ್ಕಾಗಿ ಅಲ್ಲ ಎಂದು ಹೇಳಿ ಇಂತಹ ವರ್ತನೆಗೆ ಇನ್ನು ಮುಂದೆ ಮೌನವಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಚಿತ್ರರಂಗದ ನಟಿ ರಕ್ಷಿತಾ ಪ್ರೇಮ್ ಕೆಲ ಸೋಶಿಯಲ್ ಮೀಡಿಯಾ ಹಾಗೂ ಡಿಜಿಟಲ್ ಮೀಡಿಯಾಗಳ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ಫೋಟೋ ಮತ್ತು ವಿಡಿಯೋಗಳನ್ನು ಅಸಭ್ಯ ರೀತಿಯಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಬಗ್ಗೆ ಅವರು ಬೇಸರ ಹೊರಹಾಕಿದ್ದಾರೆ. ಈ ರೀತಿಯ ವರ್ತನೆ ಮಹಿಳಾ ಕಲಾವಿದರಿಗೆ ನೋವುಂಟುಮಾಡುತ್ತದೆ ಎಂದು ಹೇಳಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರು ಭಾಗವಹಿಸಿದಾಗ, ಕೆಲವರು ಅವರ ಕಲೆಯಿಗಿಂತ ಅವರ ದೇಹವನ್ನು ಅನವಶ್ಯಕವಾಗಿ ಜೂಮ್ ಮಾಡಿ ಚಿತ್ರಿಸುವುದು ಹೆಚ್ಚಾಗಿದೆ ಎಂದು ರಕ್ಷಿತಾ ಹೇಳಿದ್ದಾರೆ. ನಂತರ ಆ ವಿಡಿಯೋಗಳು ಮತ್ತು ಫೋಟೋಗಳನ್ನು ಬೇರೆ ಬೇರೆ ಕೋಣಗಳಲ್ಲಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ಮಹಿಳಾ ಕಲಾವಿದರ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬುದು ಅವರ ಅಭಿಪ್ರಾಯ.

ಚಿತ್ರರಂಗಕ್ಕೆ ನಾವು ಬಂದಿದ್ದು ನಮ್ಮ ಪ್ರತಿಭೆ ಮತ್ತು ಕಲೆಯನ್ನು ತೋರಿಸಲು ಮಾತ್ರ ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ. ನಮ್ಮ ದೇಹವನ್ನು ಪ್ರದರ್ಶನ ಮಾಡುವ ಉದ್ದೇಶದಿಂದ ನಾವು ಈ ಕ್ಷೇತ್ರಕ್ಕೆ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೆಲವರ ಇಂತಹ ವರ್ತನೆಗಳಿಂದ ಎಲ್ಲಾ ಮಹಿಳಾ ನಟಿಯರ ಮೇಲೂ ತಪ್ಪು ಅಭಿಪ್ರಾಯ ಮೂಡುತ್ತಿದೆ ಎಂದು ಅವರು ತಿಳಿಸಿದ್ದಾರೆ.‘ಪೆದ್ದಿ’ ಸಿನಿಮಾದ ‘ಹೋಯ್ ಹೋಯ್ ವೀರ’ ಹಾಡು ರಿಲೀಸ್: ರಾಮ್ ಚರಣ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ..!

ಈ ವಿಷಯದಲ್ಲಿ ನಟಿ ಸಪ್ತಮಿ ಗೌಡ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಸಪ್ತಮಿ ಗೌಡ ಅವರ ಅಭಿಪ್ರಾಯಕ್ಕೆ ರಕ್ಷಿತಾ ಪ್ರೇಮ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ಮಹಿಳೆಯರಾಗಿ ನಾವು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಒಟ್ಟಾಗಿ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ.

ಇನ್ಮುಂದೆ ಈ ರೀತಿಯ ಘಟನೆಗಳನ್ನು ಸಾಮಾನ್ಯವಾಗಿ ತೆಗೆದುಕೊಳ್ಳುವುದಿಲ್ಲ ಎಂದು ರಕ್ಷಿತಾ ಪ್ರೇಮ್ ಎಚ್ಚರಿಕೆ ನೀಡಿದ್ದಾರೆ. ಯಾರು ಆಗಲಿ ವೃತ್ತಿಪರತೆಯನ್ನು ಹಾಗೂ ಶಿಸ್ತನ್ನು ಕಾಪಾಡಬೇಕು ಎಂದು ಅವರು ತಿಳಿಸಿದ್ದಾರೆ. ಮಹಿಳಾ ಕಲಾವಿದರ ಗೌರವಕ್ಕೆ ಧಕ್ಕೆ ಉಂಟುಮಾಡುವವರ ವಿರುದ್ಧ ನಾವು ಧ್ವನಿ ಎತ್ತುತ್ತೇವೆ ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ.