Skip to main content
ವಿಡಿಯೋ
1/2
crime

ಬೆಂಗಳೂರು ಮೆಟ್ರೋದಲ್ಲಿ ಯುವಕನೊಬ್ಬನ ಸೊಂಟದಲ್ಲಿ ಗನ್ ..ಪ್ರಯಾಣಿಕರ ಆಕ್ರೋಶ..!ಇಲ್ಲಿದೆ ಮಾಹಿತಿ

By Ram Chethan
ಬೆಂಗಳೂರು ಮೆಟ್ರೋದಲ್ಲಿ ಯುವಕನೊಬ್ಬನ ಸೊಂಟದಲ್ಲಿ ಗನ್ ..ಪ್ರಯಾಣಿಕರ ಆಕ್ರೋಶ..!ಇಲ್ಲಿದೆ ಮಾಹಿತಿ

ಬೆಂಗಳೂರು ಪರ್ಪಲ್ ಲೈನ್ ಮೆಟ್ರೋದಲ್ಲಿ ಯುವಕನೊಬ್ಬ ಸೊಂಟದಲ್ಲಿ ಗನ್ ಇಟ್ಟಿರುವಂತೆ ತೋರಿಸಿ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಘಟನೆ ನಡೆದಿದೆ. ಬಳಿಕ ಅದು ಮಕ್ಕಳ ಆಟದ ಬಂದೂಕು ಎಂದು ತಿಳಿದುಬಂದಿದ್ದು, ಸಾರ್ವಜನಿಕ ಸ್ಥಳದಲ್ಲಿ ಇಂತಹ ಪ್ರಾಂಕ್ ಮಾಡಿದ ಯುವಕನ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಮೆಟ್ರೋದಲ್ಲಿ ಯುವಕರೊಬ್ಬರ ಪ್ರಾಂಕ್ ಘಟನೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಪರ್ಪಲ್ ಲೈನ್ ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿದ್ದ ಯುವಕನು ತನ್ನ ಸೊಂಟದಲ್ಲಿ ಗನ್ ಇಟ್ಟುಕೊಂಡಿರುವಂತೆ ತೋರಿಸಿ ಪ್ರಯಾಣಿಕರನ್ನು ಬೆಚ್ಚಿಬೀಳಿಸುವ ಪ್ರಯತ್ನ ಮಾಡಿದ್ದಾನೆ. ನಂತರ ಅದು ನಿಜವಾದ ಬಂದೂಕು ಅಲ್ಲ, ಮಕ್ಕಳ ಆಟದ ಬಂದೂಕು ಎಂದು ಹೇಳಿ ಪ್ರಾಂಕ್ ಮಾಡಿದ್ದಾಗಿ ತಿಳಿದುಬಂದಿದೆ.Arayna Women's Cotton Printed Floral Straight Kurta with Palazzo Pants and Dupatta

ಮೆಟ್ರೋದಲ್ಲಿ ಶಾಂತವಾಗಿ ಪ್ರಯಾಣಿಸುತ್ತಿದ್ದ ಜನರು ಈ ಘಟನೆ ನೋಡಿ ಕೆಲಕಾಲ ಗಾಬರಿಗೊಂಡರು. ಯುವಕನು ಸಹ ಪ್ರಯಾಣಿಕರ ಪಕ್ಕದಲ್ಲಿ ಕುಳಿತುಕೊಂಡೇ ಸೊಂಟದಲ್ಲಿ ಬಂದೂಕು ಇಟ್ಟಂತೆ ತೋರಿಸಿ ಅವರನ್ನು ಕೆಣಕುತ್ತಿದ್ದನು. ಇದರಿಂದ ಕೆಲವರು ಭಯಗೊಂಡರೆ, ಇನ್ನೂ ಕೆಲವರು ಆತನ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಕೆಲ ಪ್ರಯಾಣಿಕರು ಯುವಕನಿಗೆ ಬುದ್ಧಿ ಹೇಳಿ ಇಂತಹ ಹುಚ್ಚಾಟ ಮಾಡಬಾರದು ಎಂದು ಎಚ್ಚರಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಪ್ರಾಂಕ್ ಮಾಡುವುದರಿಂದ ಜನರಲ್ಲಿ ಭಯ ಮತ್ತು ಗೊಂದಲ ಉಂಟಾಗಬಹುದು ಎಂದು ತಿಳಿಸಿದರು.ಯುದ್ಧ ಭೀತಿ ಪರಿಣಾಮ: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಜೂನ್ 4ಕ್ಕೆ ಮುಂದೂಡಿಕೆ.!ಇಲ್ಲಿದೆ ಮಾಹಿತಿ

ಇದಕ್ಕೂ ಮೊದಲು ದೆಹಲಿ ಮತ್ತು ಕೊಲ್ಕತ್ತಾ ಮೆಟ್ರೋಗಳಲ್ಲಿ ಕೂಡ ಇಂತಹ ಪ್ರಾಂಕ್ ಘಟನೆಗಳು ನಡೆದಿದ್ದವು. ಈಗ ಅದೇ ರೀತಿಯ ಹುಚ್ಚಾಟ ಬೆಂಗಳೂರು ಮೆಟ್ರೋದಲ್ಲೂ ಕಾಣಿಸಿಕೊಂಡಿರುವುದು ಪ್ರಯಾಣಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದ್ದು, ಹಲವರು ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವಂತಹ ಇಂತಹ ಪ್ರಾಂಕ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.