ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ‘ಧುರಂಧರ್ 2’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇಂದು (ಮಾರ್ಚ್ 7) ಬೆಳಿಗ್ಗೆ 11.11ಕ್ಕೆ ಟ್ರೇಲರ್ ಬಿಡುಗಡೆಗೊಂಡಿದ್ದು, ಚಿತ್ರದ ಕಥೆ ಮತ್ತು ಆಕ್ಷನ್ ಶೈಲಿ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟ ಕಲ್ಪನೆ ಸಿಕ್ಕಿದೆ. ಮೊದಲ ಭಾಗ ಸೂಪರ್ ಹಿಟ್ ಆದ ಬಳಿಕ ಈ ಸೀಕ್ವೆಲ್ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.Arayna Women's Cotton Printed Floral Straight Kurta with Palazzo Pants and Dupatta
ಮೊದಲ ಭಾಗದಲ್ಲಿ ರೆಹ್ಮಾನ್ ಡಕಾಯಿತ್ ಹತ್ಯೆಯೊಂದಿಗೆ ಕಥೆ ಮುಕ್ತಾಯವಾಗಿತ್ತು. ಆ ಹತ್ಯೆಯನ್ನು ರೆಹಮಾನ್ ಅಲಿ ಮಜಾರಿ ಎಂಬ ಪಾತ್ರದಲ್ಲಿ ರಣವೀರ್ ಸಿಂಗ್ ನಿರ್ವಹಿಸಿದ್ದರು. ಈಗ ‘ಧುರಂಧರ್ 2’ ಸಿನಿಮಾ ಅದೇ ಘಟನೆ ಬಳಿಕದ ಕಥೆಯಿಂದ ಆರಂಭವಾಗುತ್ತದೆ. ಹಮ್ಜಾ ಎಂಬ ಪಾತ್ರ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಸೇಡಿನ ಯಾತ್ರೆಗೆ ಇಳಿಯುತ್ತಾನೆ. ಆದ್ದರಿಂದ ಈ ಚಿತ್ರದಲ್ಲಿ ಪ್ರತೀಕಾರದ ಕಥೆ ಪ್ರಮುಖವಾಗಿರುವುದು ಟ್ರೇಲರ್‌ನಲ್ಲಿ ಕಾಣಿಸುತ್ತದೆ.
ಈ ಚಿತ್ರವನ್ನು ನಿರ್ದೇಶಕ ಆದಿತ್ಯ ಧಾರ್ ನಿರ್ಮಿಸಿದ್ದಾರೆ. ಮೊದಲ ಸಿನಿಮಾ ಭಾರೀ ಯಶಸ್ಸು ಕಂಡು ದೊಡ್ಡ ಮಟ್ಟದ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಅದೇ ಕಾರಣಕ್ಕೆ ಎರಡನೇ ಭಾಗವೂ ಹೆಚ್ಚಿನ ಯಶಸ್ಸು ಪಡೆಯಲಿದೆ ಎಂಬ ನಿರೀಕ್ಷೆ ಇದೆ.
ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಮೊದಲ ಭಾಗ ಕೇವಲ ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದರೆ, ಈ ಬಾರಿ ಸಿನಿಮಾ ಹಿಂದಿ ಜೊತೆಗೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಟ್ರೇಲರ್ ಸದ್ಯಕ್ಕೆ ಹಿಂದಿಯಲ್ಲಿ ಮಾತ್ರ ಬಿಡುಗಡೆಗೊಂಡಿದೆ.ಇದನ್ನು ಓದಿ:ಡಾಗ್ ಸತೀಶ್ ಸ್ನೇಹ ಮಾಡಿದರೆ ಹುಷಾರು : ಬಿಗ್ ಬಾಸ್ ಸ್ಪರ್ಧಿ ರಜತ್ ಬೆದರಿಕೆ..! FIR ದಾಖಲು – ಇಲ್ಲಿದೆ ಮಾಹಿತಿ
ಮೊದಲ ಭಾಗದಲ್ಲಿ ರಣವೀರ್ ಸಿಂಗ್ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಸ್ಪೈ ಆಗಿ ಕಾರ್ಯನಿರ್ವಹಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಂದಹಾರ್ ಹೈಜಾಕ್ ಮತ್ತು ಮುಂಬೈ ದಾಳಿ ಘಟನೆಗಳನ್ನು ಆಧರಿಸಿ ಸಿನಿಮಾ ತಯಾರಿಸಲಾಗಿತ್ತು. ಇದೇ ರೀತಿಯ ಭರ್ಜರಿ ಆಕ್ಷನ್ ಮತ್ತು ತೀವ್ರ ಕಥಾಹಂದರ ಈ ಬಾರಿ ಕೂಡ ಇರಲಿದೆ ಎಂಬುದನ್ನು ಟ್ರೇಲರ್ ಸೂಚಿಸಿದೆ.