ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿತ್ತು. ಸಿನಿಮಾ ಟಿಕೆಟ್ ಖರೀದಿಸಿದ ಪ್ರೇಕ್ಷಕರು ಈಗಾಗಲೇ ಗ್ರಾಹಕರಾಗಿರುವುದರಿಂದ ಅವರಿಗೆ ಪಾರ್ಕಿಂಗ್ ಸೌಲಭ್ಯವನ್ನು ಉಚಿತವಾಗಿ ನೀಡಬೇಕು ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದರು. ಈಗ ಈ ವಿಷಯದ ಬಗ್ಗೆ ತೆಲಂಗಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್ ಆದೇಶದ ಪ್ರಕಾರ, ಸಿನಿಮಾ ನೋಡಲು ಬರುವ ಪ್ರೇಕ್ಷಕರಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳು ಕಡ್ಡಾಯವಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಬಾರದು ಎಂದು ತಿಳಿಸಿದೆ. ಈ ತೀರ್ಪು ಮೂಲಕ ಹಿಂದಿನ ಕೆಲವು ನಿಯಮಗಳನ್ನು ರದ್ದುಪಡಿಸಿ, ಪ್ರೇಕ್ಷಕರಿಗೆ ಅನುಕೂಲವಾಗುವಂತೆ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ.Arayna Women's Cotton Printed Floral Straight Kurta with Palazzo Pants and Dupatta
ಇದಕ್ಕೂ ಮೊದಲು ತೆಲಂಗಾಣ ಸರ್ಕಾರ ಸಿನಿಮಾ ನೋಡಲು ಬರುವವರಿಂದ ಪಾರ್ಕಿಂಗ್ ಶುಲ್ಕ ಪಡೆಯಬಾರದು ಎಂದು ಆದೇಶಿಸಿತ್ತು. ಆದರೆ ಕೋವಿಡ್ ನಂತರ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದು, ಅವರಿಗೆ ಕೆಲವು ಮಟ್ಟದ ವಿನಾಯಿತಿ ನೀಡಲಾಗಿತ್ತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಪಾರ್ಕಿಂಗ್ ಶುಲ್ಕ ವಿನಾಯಿತಿ ಮುಂದುವರಿದಿತ್ತು.
ಇತ್ತೀಚೆಗೆ ಈ ವಿಷಯದ ಬಗ್ಗೆ ಸಲ್ಲಿಸಲಾದ ಅರ್ಜಿಯನ್ನು ವಿಚಾರಿಸಿದ ತೆಲಂಗಾಣ ಹೈಕೋರ್ಟ್, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡರಲ್ಲೂ ಸಿನಿಮಾ ನೋಡಲು ಬರುವವರಿಂದ ಕಡ್ಡಾಯವಾಗಿ ಪಾರ್ಕಿಂಗ್ ಶುಲ್ಕ ಪಡೆಯಲು ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ತೀರ್ಪು ಸಿನಿಮಾ ಪ್ರೇಕ್ಷಕರಿಗೆ ದೊಡ್ಡ ನೆರವಾಗಲಿದೆ.ಇದನ್ನು ಓದಿ:ಮದುವೆ ಖಷಿಯಲ್ಲಿ ಇರುವ ರಶ್ಮಿಕಾ ಮಂದಣ್ಣಗೆ ‘ಗದ್ದರ್ ತೆಲಂಗಾಣ ರಾಜ್ಯ ಪ್ರಶಸ್ತಿ..! ಇಲ್ಲಿದೆ ಮಾಹಿತಿ
ಆದರೆ ಈ ನಿಯಮ ಸದ್ಯಕ್ಕೆ ಕರ್ನಾಟಕದಲ್ಲಿ ಜಾರಿಯಲ್ಲಿಲ್ಲ. ಇಲ್ಲಿ ಸಿನಿಮಾ ನೋಡಲು ಹೋದವರು ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್‌ನಲ್ಲಿ ಪಾರ್ಕಿಂಗ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಿಶೇಷವಾಗಿ ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಗಂಟೆಗೆ 80 ರಿಂದ 100 ರೂಪಾಯಿ ತನಕ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಒಂದು ಸಿನಿಮಾ ಮುಗಿಯುವಷ್ಟರಲ್ಲಿ ಸುಮಾರು 200 ರಿಂದ 300 ರೂಪಾಯಿ ಪಾರ್ಕಿಂಗ್ ಶುಲ್ಕ ಆಗುತ್ತದೆ.
ಆದ್ದರಿಂದ ತೆಲಂಗಾಣದಂತೆ ಕರ್ನಾಟಕದಲ್ಲೂ ಈ ರೀತಿಯ ನಿಯಮ ಜಾರಿಗೆ ಬರಬೇಕು ಎಂದು ಅನೇಕ ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ನಿರ್ಧಾರ ಜಾರಿಯಾದರೆ ಸಿನಿಮಾ ನೋಡಲು ಹೋಗುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.