Skip to main content
ವಿಡಿಯೋ
crime

ಬೆಚ್ಚಿಬೀಳಿಸುತ್ತೆ ಖದೀಮರ ಈ ಸ್ಕೆಚ್: 524 ಗ್ಯಾಸ್ ಸಿಲಿಂಡರ್ ತುಂಬಿದ್ದ ಟ್ರಕ್ ಕಿಡ್ನ್ಯಾಪ್!

By Bhavana Gowda
ಬೆಚ್ಚಿಬೀಳಿಸುತ್ತೆ ಖದೀಮರ ಈ ಸ್ಕೆಚ್:  524 ಗ್ಯಾಸ್ ಸಿಲಿಂಡರ್ ತುಂಬಿದ್ದ ಟ್ರಕ್ ಕಿಡ್ನ್ಯಾಪ್!

ಒಂದೆಡೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಎಲ್‌ಪಿಜಿ (LPG) ಅಭಾವದ ಭೀತಿ ಎದುರಾಗಿದೆ.

ಝಾನ್ಸಿ: ಒಂದೆಡೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಎಲ್‌ಪಿಜಿ (LPG) ಅಭಾವದ ಭೀತಿ ಎದುರಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಿಡಿಗೇಡಿಗಳು ಈಗ ಸಿಲಿಂಡರ್‌ಗಳನ್ನೇ ಗುರಿಯಾಗಿಸಿಕೊಂಡು ದರೋಡೆಗೆ ಇಳಿದಿದ್ದಾರೆ. ಉತ್ತರಪ್ರದೇಶದಲ್ಲಿ ಸಿನಿಮೀಯ ಮಾದರಿಯಲ್ಲಿ 18 ಲಕ್ಷ ರೂಪಾಯಿ ಮೌಲ್ಯದ ಗ್ಯಾಸ್ ಸಿಲಿಂಡರ್‌ಗಳನ್ನು ಅಪಹರಿಸಿರುವ ಘಟನೆ ವರದಿಯಾಗಿದೆ.

ಘಟನೆಯ ವಿವರ

ಝಾನ್ಸಿಯ ಬಿಪಿಸಿಎಲ್ (BPCL) ಸ್ಥಾವರದಿಂದ ಕಾನ್ಪುರಕ್ಕೆ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಹೊತ್ತ ಟ್ರಕ್ ಹೊರಟಿತ್ತು. ಈ ಟ್ರಕ್‌ನಲ್ಲಿ ಒಟ್ಟು 524 ಭರ್ತಿಯಾದ ಸಿಲಿಂಡರ್‌ಗಳಿದ್ದವು. ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಟ್ರಕ್ ಕಾನ್ಪುರ ತಲುಪುವ ಮೊದಲೇ ಹದ್ದಿನ ಕಣ್ಣಿಟ್ಟಿದ್ದ ಖದೀಮರ ತಂಡ ಟ್ರಕ್ ಅನ್ನು ಅಡ್ಡಗಟ್ಟಿದೆ.

ಹೈಟೆಕ್ ಕಳ್ಳತನ: ಜಿಪಿಎಸ್ ನಾಶ!

ಪೊಲೀಸರು ಅಥವಾ ಮಾಲೀಕರು ಟ್ರಕ್ ಎಲ್ಲಿದೆ ಎಂದು ಪತ್ತೆ ಹಚ್ಚಬಾರದೆಂಬ ಕಾರಣಕ್ಕೆ ಕಳ್ಳರು ಅತ್ಯಂತ ಚಾಲಾಕಿತನ ಪ್ರದರ್ಶಿಸಿದ್ದಾರೆ. ಮೊದಲು ಟ್ರಕ್‌ನಲ್ಲಿದ್ದ ಜಿಪಿಎಸ್ (GPS) ವ್ಯವಸ್ಥೆಯನ್ನು ಪೂರ್ಣವಾಗಿ ನಾಶಪಡಿಸಿದ್ದಾರೆ. ನಂತರ ಚಾಲಕನನ್ನು ಬೆದರಿಸಿ ಅಥವಾ ವಾಹನವನ್ನು ನಿಯಂತ್ರಣಕ್ಕೆ ಪಡೆದು, 524 ಸಿಲಿಂಡರ್ ಸಮೇತ ಟ್ರಕ್ ಅನ್ನು ಅಪಹರಿಸಿ ಪರಾರಿಯಾಗಿದ್ದಾರೆ.

ಪೊಲೀಸ್ ತನಿಖೆ ಚುರುಕು

ಟ್ರಕ್ ಮಾಲೀಕ ನೀರಜ್ ಅಗರ್ವಾಲ್ ಅವರು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾರುಕಟ್ಟೆಯಲ್ಲಿ ಗ್ಯಾಸ್ ಅಭಾವವಿರುವ ಸಂದರ್ಭದಲ್ಲೇ ಇಷ್ಟು ದೊಡ್ಡ ಮಟ್ಟದ ಸಿಲಿಂಡರ್ ಕಳ್ಳತನವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.