ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಹಲವು ದೇಶಗಳಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆ ದುಬೈಗೆ ಪ್ರವಾಸಕ್ಕಾಗಿ ತೆರಳಿದ್ದ ಖ್ಯಾತ ತಮಿಳು ನಟ ಅಜಿತ್ ಕುಮಾರ್ ಕೆಲ ದಿನಗಳು ಅಲ್ಲಿ ಸಿಲುಕಿಕೊಂಡಿದ್ದರು. ಯುದ್ಧ ಪರಿಸ್ಥಿತಿ ಕಾರಣದಿಂದಾಗಿ ಭಾರತಕ್ಕೆ ಮರಳುವ ವಿಮಾನ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿ ಅವರು ದುಬೈಯಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.Arayna Women's Cotton Printed Floral Straight Kurta with Palazzo Pants and Dupatta
ಆದರೆ ಈಗ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ನಟ ಅಜಿತ್ ಕುಮಾರ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ದುಬೈನಿಂದ ಚೆನ್ನೈಗೆ ಬಂದ ಅವರು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಯಾವುದೇ ವಿಶೇಷ ಗೊಂದಲವಿಲ್ಲದೆ ಅವರು ತಮ್ಮ ಲಗೇಜ್‌ಗಳನ್ನು ತಾವೇ ವಾಹನದಲ್ಲಿ ಇಟ್ಟುಕೊಂಡು ಮನೆ ಕಡೆ ತೆರಳಿದ ದೃಶ್ಯ ಎಲ್ಲರ ಗಮನ ಸೆಳೆಯಿತು.
ನಟ ಅಜಿತ್ ಕುಮಾರ್ ಅವರ ಸರಳತೆ ಮತ್ತೊಮ್ಮೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ದೊಡ್ಡ ಸ್ಟಾರ್ ಆಗಿದ್ದರೂ ಯಾವುದೇ ಆರ್ಭಟವಿಲ್ಲದೆ ಸಾಮಾನ್ಯ ವ್ಯಕ್ತಿಯಂತೆ ವರ್ತಿಸಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಚೆನ್ನೈ ಏರ್‌ಪೋರ್ಟ್‌ನಲ್ಲಿ ತೆಗೆದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.ಇದನ್ನು ಓದಿ:ರೇಣುಕಾಸ್ವಾಮಿ ಪ್ರಕರಣ ಸಿನಿಮಾ ಬರತ್ತಾ ಇದಿಯಾ..? ಏನಿದೆ ‘ಬಾಸ್’ ಸಿನಿಮಾದ ಟೀಸರ್ ಕಥೆ..?
ಈ ವಿಡಿಯೋ ನೋಡಿದ ಅಭಿಮಾನಿಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, “ಅಜಿತ್ ಅವರ ಸರಳತೆ ನಿಜವಾಗಿಯೂ ಪ್ರೇರಣಾದಾಯಕ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನಟ ಸುರಕ್ಷಿತವಾಗಿ ಭಾರತಕ್ಕೆ ಮರಳಿರುವುದಕ್ಕೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.