Skip to main content
ವಿಡಿಯೋ
1/2
cinema

ನಟ ದರ್ಶನ್ ಪತ್ನಿಗೆ ಆನ್‌ಲೈನ್ ಕಿರುಕುಳ: ಆರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್..!ಇಲ್ಲಿದೆ ಮಾಹಿತಿ

By Ram Chethan
ನಟ ದರ್ಶನ್ ಪತ್ನಿಗೆ ಆನ್‌ಲೈನ್ ಕಿರುಕುಳ: ಆರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್..!ಇಲ್ಲಿದೆ ಮಾಹಿತಿ

ಸಿಸಿಬಿ ಸೈಬರ್ ಕ್ರೈಂ ತಂಡವು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನು ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದ ಬಳಕೆ ಮಾಡಿದ ಆರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ನಕಲಿ ಐಡಿ, ಅಶ್ಲೀಲ ಕಾಮೆಂಟ್‌ಗಳು ಮತ್ತು ಮೊಬೈಲ್ ಫೋನ್‌ ಪರಿಶೀಲನೆ ಪ್ರಮುಖ ವಿಚಾರಗಳಾಗಿವೆ. ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿಗಳ ವಿಚಾರಣೆ ಮುಂದಿನ ತಿಂಗಳು.

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದ ಬಳಕೆ ಮಾಡಿದ ಪ್ರಕರಣದಲ್ಲಿ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಪ್ರಮುಖ ಹಂತವನ್ನು ತಲುಪಿದ್ದಾರೆ. ಈ ಪ್ರಕರಣದಲ್ಲಿ ಆರು ಆರೋಪಿಗಳ ವಿರುದ್ಧ 473 ಪುಟಗಳ ಚಾರ್ಜ್ ಶೀಟ್ 45ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.Arayna Women's Cotton Printed Floral Straight Kurta with Palazzo Pants and Dupatta

ಚಾರ್ಜ್ ಶೀಟ್ ಪ್ರಕಾರ, ಕೆಲವರು ನಟ ಸುದೀಪ್ ಅಭಿಮಾನಿಗಳು ಮತ್ತು ನಕಲಿ ಐಡಿಗಳನ್ನು ನಿರ್ಮಿಸಿ ವಿಜಯಲಕ್ಷ್ಮಿಯ ವಿರುದ್ಧ ಹಿಂಸಾತ್ಮಕ ಕಾಮೆಂಟ್ ಮಾಡಿದ್ದಾರೆ. ಕೆಲವು ಆರೋಪಿಗಳು ನಕಲಿ ಅಕೌಂಟ್ ತೆರೆಯುವುದರ ಮೂಲಕ ಫೋಟೋಗಳನ್ನು ತೀವ್ರ ಅವಮಾನಪೂರ್ವಕವಾಗಿ ಹಾಕಿ, ಅಶ್ಲೀಲ ಮೆಸೇಜ್ ಗಳು ಹಾಕಿದ್ದಾರೆ. ಕೆಲವು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳ ಮೊಬೈಲ್ ಫೋನ್‌ಗಳು ಜಪ್ತಿ ಮಾಡಲಾಗಿದ್ದು, ಎಫ್‌ಎಸ್‌ಎಲ್ ಗೆ ರವಾನಿಸಲಾಗಿದೆ. ಇನ್ನು ಮೊಬೈಲ್ ರಿಟ್ರೀವ್ ವರದಿ ಇನ್ನೂ ಬರಬೇಕಾಗಿದೆ. ಪ್ರಸ್ತುತ 12 ಐಡಿಗಳ ಮಾಹಿತಿ ಸಿಕ್ಕಿಲ್ಲ, ಅದಕ್ಕಾಗಿ ಸಂಬಂಧಿತ ಕಂಪನಿಗಳಿಗೆ ಪತ್ರ ಕಳುಹಿಸಲಾಗಿದೆ. ಐಡಿ ನಿರ್ಮಾಣ ಮಾಡಿದ ಕಂಪನಿಯಿಂದ ಉತ್ತರ ನಿರೀಕ್ಷಿಸಲಾಗಿದೆ.Arayna Women's Cotton Printed Floral Straight Kurta with Palazzo Pants and Dupatta

ಸಿಸಿಬಿ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಿದ್ದು, ಅಗತ್ಯವಿದ್ದರೆ ಹೆಚ್ಚುವರಿ ಚಾರ್ಜ್ ಶೀಟ್ ಕೂಡ ಸಲ್ಲಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಚಾರ್ಜ್ ಶೀಟ್ ಸಲ್ಲಿಸಿದ ಆರು ಆರೋಪಿಗಳು ಈಗ ಹೈಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ಈ ಅರ್ಜಿಯನ್ನು ಮಾರ್ಚ್ 24ರಂದು ವಿಚಾರಣೆ ಮಾಡಲು ಮುಂದೂಡಿದೆ.

65 ದಿನಗಳಾದರೂ, ಸಾಮಾಜಿಕ ಜಾಲತಾಣದಲ್ಲಿ ಮಾಡಿದ ತಪ್ಪಿನ ಕಾರಣದಿಂದ ಜೈಲಿನಲ್ಲಿ ಉಳಿದಿರುವ ಆರು ಆರೋಪಿಗಳು ಈ ಪ್ರಕರಣದ ಪ್ರಮುಖ ಭಾಗವಾಗಿದ್ದಾರೆ.