ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಉಮಲೂಟಿ ಗ್ರಾಮದಲ್ಲಿ ಹಾವು ಕಚ್ಚಿದ ಘಟನೆ ನಡೆದಿದೆ. ಬೇಸಿಗೆಯ ತೀವ್ರ ಬಿಸಿಯನ್ನು ತಾಳಲಾಗದೆ ಗ್ರಾಮದ ವಾರ್ಡ್ ನಂ.1ರಲ್ಲಿ ವಾಸಿಸುತ್ತಿರುವ ಯಲ್ಲಮ್ಮ ಎಂಬ ಮಹಿಳೆ ಮನೆಯ ಮುಂಭಾಗದ ಅಂಗಳದಲ್ಲಿ ಮಲಗಿದ್ದರು. ಇದೇ ವೇಳೆ ಸುಮಾರು 6 ಅಡಿ ಉದ್ದದ ಹಾವು ವೇಗವಾಗಿ ಬಂದು ಅವರ ಕಾಲಿಗೆ ಕಚ್ಚಿದೆ ಎಂದು ತಿಳಿದುಬಂದಿದೆ.Arayna Women's Cotton Printed Floral Straight Kurta with Palazzo Pants and Dupatta
ಕಚ್ಚಿದ ಕ್ಷಣದಲ್ಲಿ ಏನು ಕಚ್ಚಿತು ಎಂಬುದು ಯಲ್ಲಮ್ಮ ಅವರಿಗೆ ಗೊತ್ತಾಗಿರಲಿಲ್ಲ. ಸ್ವಲ್ಪ ಸಮಯದ ನಂತರ ಏನೋ ಪ್ರಾಣಿ ಕಚ್ಚಿದ ಅನುಮಾನ ಬಂದಿದ್ದು, ಮನೆಯ ಬಳಿ ಇದ್ದ ಪೊರಕೆಯಿಂದ ಓಡಿಸಲು ಅವರು ಪ್ರಯತ್ನಿಸಿದ್ದಾರೆ. ಆಗ ಹಾವು ಕಚ್ಚಿರುವುದು ತಿಳಿದುಬಂದಿದೆ. ಈ ವಿಷಯವನ್ನು ಕೂಡಲೇ ಮನೆಯವರಿಗೆ ತಿಳಿಸಿದ ಯಲ್ಲಮ್ಮ ಅವರನ್ನು ಕುಟುಂಬಸ್ಥರು ತಕ್ಷಣವೇ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದು, ಈಗ ಯಲ್ಲಮ್ಮ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಮಾಹಿತಿ ದೊರೆತಿದೆ. ಈ ಘಟನೆ ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೇಸಿಗೆ ಸಮಯದಲ್ಲಿ ಹಾವುಗಳ ಸಂಚಾರ ಹೆಚ್ಚಾಗಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸ್ಥಳೀಯರು ಸಲಹೆ ನೀಡಿದ್ದಾರೆ.ಬಾವಿಗೆ ಬಿದ್ದ ಚಿರತೆ.. ಬಳಿಕ ಏನಾಯ್ತು ಗೊತ್ತಾ..? ಅರಣ್ಯ ಇಲಾಖೆಯ ಸ್ಮಾರ್ಟ್ ಐಡಿಯಾ..!ಇಲ್ಲಿದೆ ಮಾಹಿತಿ