ರಾಧಿಕಾ ಪಂಡಿತ್ ಅವರ ಜನ್ಮದಿನದ ಸಂಭ್ರಮ ಈ ಬಾರಿ ಸಿನಿ ಅಭಿಮಾನಿಗಳ ಗಮನ ಸೆಳೆದಿದೆ. ಕುಟುಂಬ ಮತ್ತು ಆಪ್ತರ ನಡುವೆ ಸರಳವಾಗಿ ನಡೆದ ಈ ಆಚರಣೆಯಲ್ಲಿ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಭಾಗವಹಿಸಿದ್ದರಿಂದ ವಿಶೇಷ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ನಟ ಯಶ್ ಮತ್ತು ಪ್ರಶಾಂತ್ ನೀಲ್ ಆಪ್ತವಾಗಿ ಮಾತುಕತೆ ನಡೆಸುತ್ತಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಹಳ ದಿನಗಳ ನಂತರ ಯಶ್ ಮತ್ತು ಪ್ರಶಾಂತ್ ನೀಲ್ ಒಂದೇ ಕಡೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.Symbol Premium Men's Stylish Checkered Casual Shirt - Regular Fit | Full Sleeve | Pure Cotton | Smart Casual Wear (Available in Plus Sizes)
‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡಿದ್ದ ಯಶ್–ಪ್ರಶಾಂತ್ ನೀಲ್ ಜೋಡಿ ಮತ್ತೆ ಒಂದಾಗುವ ಸಾಧ್ಯತೆ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ರಾಧಿಕಾ ಪಂಡಿತ್ ಬರ್ತ್‌ಡೇ ಆಚರಣೆಯಲ್ಲಿ ಇಬ್ಬರೂ ಹಾಸುಹೊಕ್ಕು ಮಾತನಾಡುತ್ತಿರುವ ದೃಶ್ಯಗಳು ನೋಡಿದ ನೆಟ್ಟಿಗರು, ಹೊಸ ಸಿನಿಮಾ ಬಗ್ಗೆ ಮಾತುಕತೆ ನಡೆದಿದೆಯೇ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕೆಲವರು ಇದು ‘ಕೆಜಿಎಫ್ 3’ ಕುರಿತ ಚರ್ಚೆಯಾಗಿರಬಹುದು ಎಂದು ಊಹಿಸುತ್ತಿದ್ದಾರೆ.
ಇತ್ತ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ತಮ್ಮ ಹೊಸ ಸಿನಿಮಾ ‘ಡ್ರ್ಯಾಗನ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ನಟ ಎನ್‌ಟಿಆರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇದೆ. ‘ಡ್ರ್ಯಾಗನ್’ ಚಿತ್ರದ ಕೆಲಸ ಮುಗಿದ ಬಳಿಕ ಪ್ರಶಾಂತ್ ನೀಲ್ ‘ಕೆಜಿಎಫ್ 3’ ಚಿತ್ರವನ್ನು ಆರಂಭಿಸಬಹುದು ಎಂಬ ಮಾತುಗಳು ಈಗಾಗಲೇ ಸಿನಿ ವಲಯದಲ್ಲಿ ಕೇಳಿಬರುತ್ತಿವೆ.ಇದನ್ನು ಓದಿ:‘ಆಕಾಶ್’ ಸಿನಿಮಾ ನೋಡಲು ಥಿಯೇಟರ್‌ಗೆ ಬಂದ ನಟಿ ರಮ್ಯ.. ಅಭಿಮಾನಿಗಳಿಂದ ಭರ್ಜರಿ ಸ್ವಾಗತ..!ಇಲ್ಲಿದೆ ಮಾಹಿತಿ
ಇದರ ಮಧ್ಯೆ ಯಶ್ ಕೂಡ ಹಲವು ಹೊಸ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಯಶ್ ಮತ್ತು ಪ್ರಶಾಂತ್ ನೀಲ್ ಮತ್ತೆ ಒಂದಾಗುವ ಸುದ್ದಿ ಕೇಳಿದರೆ ಅಭಿಮಾನಿಗಳು ಖಂಡಿತ ಖುಷಿಪಡುತ್ತಾರೆ. ಆದರೆ ಈ ಎಲ್ಲ ಚರ್ಚೆಗಳ ನಡುವೆಯೂ ಹೊಸ ಸಿನಿಮಾ ಅಥವಾ ‘ಕೆಜಿಎಫ್ 3’ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇನ್ನೂ ಹೊರಬಂದಿಲ್ಲ. ಆದರೂ ಇಬ್ಬರ ಭೇಟಿಯಿಂದ ಸಿನಿ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.