Skip to main content
ವಿಡಿಯೋ
1/2
politics

ವಾರ್ಡ್ ಕಾರ್ಪೊರೇಟರ್ ಚುನಾವಣೆಗೆ ಸಿದ್ಧತೆ: ಮತದಾರರ ಪಟ್ಟಿ ಹೇಗೆ ಪರಿಶೀಲಿಸುವುದು...?

By Sushmitha R
ವಾರ್ಡ್ ಕಾರ್ಪೊರೇಟರ್ ಚುನಾವಣೆಗೆ ಸಿದ್ಧತೆ: ಮತದಾರರ ಪಟ್ಟಿ ಹೇಗೆ ಪರಿಶೀಲಿಸುವುದು...?

ಹಲವು ವರ್ಷಗಳ ನಂತರ ಬೆಂಗಳೂರಿನಲ್ಲಿ ವಾರ್ಡ್ ಕಾರ್ಪೊರೇಟರ್ ಚುನಾವಣೆ ನಡೆಯಲು ಸಿದ್ಧತೆಗಳು ಆರಂಭವಾಗಿವೆ.

ಹಲವು ವರ್ಷಗಳ ನಂತರ ಬೆಂಗಳೂರಿನಲ್ಲಿ ವಾರ್ಡ್ ಕಾರ್ಪೊರೇಟರ್ ಚುನಾವಣೆ ನಡೆಯಲು ಸಿದ್ಧತೆಗಳು ಆರಂಭವಾಗಿವೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸದಾಗಿ ರಚನೆಯಾದ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಹಾಗೂ ರಾಜ್ಯ ಚುನಾವಣಾ ಆಯೋಗ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸಲು ಸಜ್ಜಾಗಿದೆ.

ಮೊದಲ ಹಂತವಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.ಈ ಪಟ್ಟಿಯಲ್ಲಿ ಒಟ್ಟು 88,91,411 ಮತದಾರರಿದ್ದಾರೆ. ಇದರಲ್ಲಿ 45,69,193 ಪುರುಷರು, 43,20,583 ಮಹಿಳೆಯರು ಮತ್ತು 1,635 ಇತರೆ ಮತದಾರರಿದ್ದಾರೆ. ಪಟ್ಟಿಯನ್ನು ಜಿಬಿಎ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು 2 ಹಂತದಲ್ಲಿ:

ವೆಬ್‌ಸೈಟ್ ತೆರೆದು ಮುಖಪುಟದಲ್ಲಿ ಕಾಣಿಸುವ “Draft Elector Roll” ಬ್ಯಾನರ್ ಮೇಲೆ ಕ್ಲಿಕ್ ಮಾಡಿ.

ಹೊಸ ಪುಟ ತೆರೆಯುತ್ತದೆ. ಮೂರು ಆಯ್ಕೆಗಳು ಲಭ್ಯ

EPIC ಸಂಖ್ಯೆ ಮೂಲಕ ಹುಡುಕುವುದು.

ಹೆಸರಿನ ಮೂಲಕ ಹುಡುಕುವುದು.

ಮತದಾನ ಕೇಂದ್ರವಾರು ಹುಡುಕುವುದು.

ಮತದಾನ ಕೇಂದ್ರ ವಿಧಾನದಲ್ಲಿ ಕಾರ್ಪೊರೇಷನ್, ವಾರ್ಡ್ ಮತ್ತು ಪೋಲಿಂಗ್ ಸ್ಟೇಷನ್ ಆಯ್ಕೆಮಾಡಿ ಪಿಡಿಎಫ್ ಡೌನ್‌ಲೋಡ್ ಮಾಡಿ. ಪುಟಗಳನ್ನು ಸ್ಕ್ರೋಲ್ ಮಾಡಿ ಹೆಸರನ್ನು ಹುಡುಕಬೇಕು.Leriya Fashion Maxi Dress for Women | Western Summer Georgette Stylish A-line Dress for Beach Party Outfits | Western Summer Black One Piece Knee Length Dresses for Woman

ನಿಮ್ಮ ಹೆಸರು ಇಲ್ಲದಿದ್ದರೆ NVSP ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕ ತಕ್ಷಣ ನೋಂದಾಯಿಸಿಕೊಳ್ಳಿ. ಆಕ್ಷೇಪಣೆ ಸಲ್ಲಿಸಲು ಮಾರ್ಚ್ 16ರವರೆಗೆ ಅವಕಾಶವಿದೆ. ಎಲ್ಲಾ ಬೆಂಗಳೂರು ನಾಗರಿಕರು ತಮ್ಮ ಹೆಸರು ಪರಿಶೀಲಿಸಿ, ಚುನಾವಣೆಯಲ್ಲಿ ಭಾಗವಹಿಸಿ. ಇದನ್ನು ಓದಿ: ರಷ್ಯಾ ತೈಲ ವಿಷಯದಲ್ಲಿ ಅಮೆರಿಕದ ನಿಲುವು ಬದಲಾವಣೆ: ಇರಾನ್ ವಿದೇಶಾಂಗ ಸಚಿವ ಅರಘಚಿ ವ್ಯಂಗ್ಯ