Skip to main content
ವಿಡಿಯೋ
crime

‘ಬಾಸ್’ ಟೀಸರ್‌ ವಿರುದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕಿಡಿ..! ಚಿತ್ರತಂಡಕ್ಕೆ ನೋಟಿಸ್‌..! ಇಲ್ಲಿದೆ ಸಂಪೂರ್ಣ ಮಾಹಿತಿ

By Ram Chethan
‘ಬಾಸ್’ ಟೀಸರ್‌ ವಿರುದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕಿಡಿ..! ಚಿತ್ರತಂಡಕ್ಕೆ ನೋಟಿಸ್‌..! ಇಲ್ಲಿದೆ ಸಂಪೂರ್ಣ ಮಾಹಿತಿ

ಮೊನ್ನೆಯಷ್ಟೇ ಬಿಡುಗಡೆಯಾದ ‘ಬಾಸ್’ ಚಿತ್ರದ ಟೀಸರ್ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಟೀಸರ್‌ನಲ್ಲಿ ಬಳಸಿದ ಕೆಲವು ಪಾತ್ರಗಳು ನಟ ದರ್ಶನ್ ಅವರ ವೈಯಕ್ತಿಕ ಜೀವನವನ್ನು ಹೋಲುತ್ತಿವೆ ಎಂಬ ಆರೋಪದ ಹಿನ್ನೆಲೆ, ವಿಜಯಲಕ್ಷ್ಮಿ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ನೀಡಿದ್ದು, ಟೀಸರ್ ಡಿಲೀಟ್ ಮಾಡುವಂತೆ ಆಗ್ರಹಿಸಿದ್ದಾರೆ.

ಮೊನ್ನೆಯಷ್ಟೇ ಬಿಡುಗಡೆಯಾದ ‘ಬಾಸ್’ ಚಿತ್ರದ ಟೀಸರ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಟೀಸರ್‌ನಲ್ಲಿ ತೋರಿಸಿರುವ ಕೆಲವು ದೃಶ್ಯಗಳು ಮತ್ತು ಪಾತ್ರಗಳು ನಟ ದರ್ಶನ್ ಅವರ ವೈಯಕ್ತಿಕ ಜೀವನವನ್ನು ಹೋಲುತ್ತಿವೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.Peter England Men's Slim Tapered Jeans | Denim | Casual Wear | Modern Fit

ಟೀಸರ್‌ನಲ್ಲಿ ಶಿವಸ್ವಾಮಿ ಮತ್ತು ಶೀಲಾಗೌಡ ಎಂಬ ಹೆಸರುಗಳನ್ನು ಬಳಸಿರುವುದು ಗಮನ ಸೆಳೆದಿದೆ. ಜೊತೆಗೆ ಲಕ್ಷ್ಮೀ ಎಂಬ ಪಾತ್ರವನ್ನೂ ಕಥೆಯಲ್ಲಿ ಸೇರಿಸಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಈ ಹೆಸರುಗಳು ಮತ್ತು ಪಾತ್ರಗಳ ಹಿನ್ನೆಲೆ ದರ್ಶನ್ ಅವರ ಕುಟುಂಬದ ಘಟನೆಗಳನ್ನು ನೆನಪಿಸುವಂತೆ ಇದೆ ಎಂದು ಕೆಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿಷಯದ ಬಗ್ಗೆ ವಿಜಯಲಕ್ಷ್ಮಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅವರು ‘ಬಾಸ್’ ಚಿತ್ರದ ಟೀಸರ್ ಅನ್ನು ತಕ್ಷಣವೇ ಡಿಲೀಟ್ ಮಾಡಬೇಕು ಎಂದು ಹೇಳಿ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇದಷ್ಟೇ ಅಲ್ಲದೆ ಈ ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ಸೆನ್ಸಾರ್ ಮಂಡಳಿಗೂ ಕೂಡ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಹೊರಬಂದಿದೆ.ಇದನ್ನು ಓದಿ:ಯಾರ ಯಾರ ಮುಡಿಗೆ ಸಿಕ್ತು ಆಸ್ಕರ್ 2026 ಪ್ರಶಸ್ತಿ..?ಇಲ್ಲಿದೆ ಸಂಪೂರ್ಣ ವಿಜೇತರ ಲಿಸ್ಟ್ ..!

ಇದರ ಜೊತೆಗೆ ‘ಬಾಸ್’ ಚಿತ್ರದ ನಿರ್ದೇಶಕ ಲವ್ ಅವರಿಗೆ ಕೂಡ ದರ್ಶನ್ ಕಡೆಯವರಿಂದ ಕಾನೂನು ನೋಟಿಸ್ ಜಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ನಂತರ ಚಿತ್ರತಂಡದಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಇದೀಗ ‘ಬಾಸ್’ ಚಿತ್ರದ ಟೀಸರ್ ಸುತ್ತ ಮೂಡಿರುವ ಈ ವಿವಾದ ಸಿನಿಮಾವನ್ನು ಮತ್ತಷ್ಟು ಚರ್ಚೆಗೆ ತರಿಸಿದೆ.