ಬೆಂಗಳೂರು: ನಾಡಿನಾದ್ಯಂತ ಮಾರ್ಚ್ 19ರಂದು ಆಚರಿಸಲಾಗುವ ಹೊಸ ವರ್ಷದ ಮೊದಲ ಹಬ್ಬ 'ಯುಗಾದಿ'ಯ ಸಡಗರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನಿಂದಲೇ ಕಳೆಗಟ್ಟಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿಗಳನ್ನು ಕೊಳ್ಳಲು ಜನಸಾಗರವೇ ಹರಿದುಬರುತ್ತಿದ್ದು, ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿದೆ.
ಮಾರುಕಟ್ಟೆಗಳಲ್ಲಿ ಜನಜಂಗುಳಿ:
ಬೆಂಗಳೂರಿನ ಹೃದಯಭಾಗವಾದ ಕೆ.ಆರ್. ಮಾರುಕಟ್ಟೆ ಬುಧವಾರ ಬೆಳ್ಳಂಬೆಳಿಗ್ಗೆಯಿಂದಲೇ ಗ್ರಾಹಕರಿಂದ ತುಂಬಿ ತುಳುಕುತ್ತಿದೆ. ಕೇವಲ ಕೆ.ಆರ್. ಮಾರ್ಕೆಟ್ ಮಾತ್ರವಲ್ಲದೆ, ಮಲ್ಲೇಶ್ವರಂ, ಗಾಂಧಿ ಬಜಾರ್, ಯಶವಂತಪುರ ಮತ್ತು ಬಸವನಗುಡಿಯಂತಹ ಮಾರುಕಟ್ಟೆಗಳಲ್ಲೂ ಯುಗಾದಿಯ ಖರೀದಿ ಭರಾಟೆ ಜೋರಾಗಿದೆ. ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ಪೂಜಾ ಸಾಮಗ್ರಿ ಹಾಗೂ ಸಿಹಿ ತಿನಿಸುಗಳ ತಯಾರಿಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.
ಗಗನಕ್ಕೇರಿದ ಹೂವು-ಹಣ್ಣುಗಳ ದರ:
ಬೇಡಿಕೆ ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ದರ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ. ಅದರಲ್ಲೂ ಹೂವುಗಳ ದರ ಗಣನೀಯವಾಗಿ ಏರಿಕೆಯಾಗಿದೆ. ಹಬ್ಬದ ಪ್ರಮುಖ ಆಕರ್ಷಣೆಯಾದ ಮಲ್ಲಿಗೆ ಹೂವು ಪ್ರತಿ ಕೆಜಿಗೆ 1,000 ರೂಪಾಯಿ ತನಕ ಮಾರಾಟವಾಗುತ್ತಿರುವುದು ಗ್ರಾಹಕರಿಗೆ ಶಾಕ್ ನೀಡಿದೆ.GoSriKi Women's Rayon Viscose Ethnic Co-Ord Set | Kurta Pant Set | Kurta Palazzo Set | Stylish Cotton Suit Set for Women
ಹೂವುಗಳ ದರ ವಿವರ (ಕೆಜಿಗೆ ರೂ.ಗಳಲ್ಲಿ):
ಮಲ್ಲಿಗೆ: ₹1,000
ಮಲ್ಲಿಗೆ ಹಾರ: ₹100 (ಒಂದು ಹಾರಕ್ಕೆ)
ಸೇವಂತಿಗೆ: ₹200 - ₹250
ಗುಲಾಬಿ: ₹250
ಚೆಂಡು ಹೂ: ₹40 - ₹50
ಬೇವು/ಮಾವಿನ ಸೊಪ್ಪು: ₹20 - ₹25 ಪ್ರತಿ ಕಟ್ಟಿಗೆ
ಹಣ್ಣುಗಳ ದರ ವಿವರ (ಕೆಜಿಗೆ ರೂ.ಗಳಲ್ಲಿ):
ದಾಳಿಂಬೆ: ₹220
ದ್ರಾಕ್ಷಿ: ₹120
ಖರಬೂಜ: ₹100
ಬೇಲದ ಹಣ್ಣು: ₹50
ಬೇವು-ಬೆಲ್ಲದ ಸಿದ್ಧತೆ:
ಯುಗಾದಿಯ ವಿಶೇಷವಾದ 'ಬೇವು-ಬೆಲ್ಲ' ಸಿದ್ಧಪಡಿಸಲು ಬೇಕಾದ ಮಾವಿನ ಸೊಪ್ಪು ಮತ್ತು ಬೇವಿನ ಸೊಪ್ಪಿನ ಮಾರಾಟ ಕೂಡ ನಗರದ ಮೂಲೆ ಮೂಲೆಗಳಲ್ಲಿ ಜೋರಾಗಿ ನಡೆಯುತ್ತಿದೆ.ಶನಿವಾರ ಆಂಜನೇಯನ ಆರಾಧನೆ: ಶನಿ ದೋಷ ಮುಕ್ತಿ ಮತ್ತು ಯಶಸ್ಸಿನ ಗುಟ್ಟು ಇಲ್ಲಿದೆ!
ಬೆಲೆ ಏರಿಕೆಯ ನಡುವೆಯೂ ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಬೆಂಗಳೂರಿಗರು ಉತ್ಸಾಹದಿಂದ ಸಿದ್ಧತೆ ನಡೆಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಿರುವ ಕಾರಣ ಸಂಚಾರ ದಟ್ಟಣೆಯೂ ಉಂಟಾಗುತ್ತಿದ್ದು, ಪೊಲೀಸರು ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.ಸೋಮವಾರ: ಶಿವನ ಆಶೀರ್ವಾದ ಪಡೆಯಲು ಇಲ್ಲಿವೆ 5 ವಿಶೇಷ ಮಾರ್ಗಗಳು!