ರಾಜ್ಯ ಸರ್ಕಾರವು ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ಒದಗಿಸಿ, ಮರ್ಯಾದೆ ಹತ್ಯೆಗಳನ್ನು ತಡೆಯಲು ‘ಇವ ನಮ್ಮವ ಇವ ನಮ್ಮವ ಮಸೂದೆ-2026’ ಅನ್ನು ರೂಪಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.
ಮಸೂದೆಯ ಅಂಶಗಳು:
ಮರ್ಯಾದೆ ಹೆಸರಿನಲ್ಲಿ ಹತ್ಯೆ ಅಥವಾ ಸಾವಿಗೆ ಕಾರಣರಾದವರಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ.
ಅಂತರ್ಜಾತಿ ದಂಪತಿಗೆ ತೀವ್ರ ಗಾಯಗೊಳಿಸುವವರಿಗೆ ಕನಿಷ್ಠ 3 ವರ್ಷಗಳ ಜೈಲು ಮತ್ತು ₹1 ಲಕ್ಷದವರೆಗೆ ದಂಡ.
ಜಾತಿ ಕಾರಣಕ್ಕೆ ಮದುವೆಗೆ ಅಡ್ಡಿಪಡಿಸಿ ಅಥವಾ ಬೆದರಿಕೆ ಹಾಕುವವರಿಗೆ 3ರಿಂದ 5 ವರ್ಷಗಳ ಜೈಲು ಮತ್ತು ₹2 ಲಕ್ಷದವರೆಗೆ ದಂಡ. Shining Diva Fashion Valentine Gift Girlfriend Wife Stylish Blue Crystal Silver Platinum Plated Cubic Zirconia Charm Bracelet for Women Girls (vg10958b)
ಮದುವೆಯ ಭರವಸೆ ನೀಡಿ ಲೈಂಗಿಕ ಸಂಪರ್ಕ ನಡೆಸಿ ನಂತರ ಜಾತಿ ಕಾರಣಕ್ಕೆ ನಿರಾಕರಿಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಿ ಶಿಕ್ಷೆ ವಿಧಿಸುವುದು.
ಒತ್ತಡ, ಜಾತಿ ನೆಪದಿಂದ ಮದುವೆ ನಿರಾಕರಿಸಿದರೆ 5 ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ವಿಸ್ತರಣೆ.
ಕಾನೂನುಬಾಹಿರ ಸಭೆಗಳು, ಪಿತೂರಿ, ಸಾಕ್ಷಿ ತಿರುಚುವಿಕೆಗೂ ಶಿಕ್ಷಾರ್ಹ ಅಪರಾಧಗಳು ಮತ್ತು ಜಾಮೀನು ರಹಿತ ಶಿಕ್ಷೆಗಳು.ತಮಿಳುನಾಡು ಚುನಾವಣೆ ಎಫೆಕ್ಟ್: ಗಡಿಯಲ್ಲಿ ದಾಖಲೆ ಇಲ್ಲದ ₹2.34 ಕೋಟಿ ಹಣ ಹೊತ್ತಿದ್ದ ಎಟಿಎಂ ವಾಹನ ಜಪ್ತಿ!
ಮಸೂದೆಯ ಉದ್ದೇಶಗಳು:
ಅಂತರ್ಜಾತಿ ವಿವಾಹಕ್ಕೆ ಸ್ವಾತಂತ್ರ್ಯ ಮತ್ತು ರಕ್ಷಣೆ ಒದಗಿಸುವುದು.
ಪೊಲೀಸರು ದಂಪತಿಗೆ ಸುರಕ್ಷಿತ ವಾಸಸ್ಥಾನ, ರಕ್ಷಣೆ ಒದಗಿಸಬೇಕು.
ವಿಶೇಷ ನ್ಯಾಯಾಲಯಗಳ ಮೂಲಕ ತ್ವರಿತ ವಿಚಾರಣೆ ಮತ್ತು ನ್ಯಾಯ.ಮುಡಾ ಕೇಸ್: ಇಂದು ಹೈಕೋರ್ಟ್ ನಲ್ಲಿ ವಿಚಾರಣೆ..!
ಸಹಾಯವಾಣಿ, ಜಾಗೃತಿ ಕಾರ್ಯಕ್ರಮಗಳು, ಮೇಲ್ವಿಚಾರಣಾ ಸಮಿತಿ ರಚನೆ.
‘ಇವ ನಮ್ಮವ ಇವ ನಮ್ಮವ’ ವೇದಿಕೆಯ ಮೂಲಕ ಅಂತರ್ಜಾತಿ ವಿವಾಹಗಳಿಗೆ ಸಮಾಜದಲ್ಲಿ ಗೌರವ ನೀಡುವುದು.
ಈ ಮಸೂದೆಯಿಂದ ಜಾತಿ ಆಧಾರಿತ ಹಿಂಸೆ, ಮರ್ಯಾದೆ ಹತ್ಯೆಗಳು, ಬಲವಂತದ ತಾರತಮ್ಯಗಳನ್ನು ನಿರ್ಬಂಧಿಸಿ, ಯುವಕ-ಯುವತಿಯರ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯವನ್ನು ರಕ್ಷಿಸುವ ಗುರಿ ಇದೆ.ಕರೂರ್ ತುಳಿತದ ಪ್ರಕರಣ: ಸಿಬಿಐ ವಿಚಾರಣೆಗೆ ಹಾಜರಾದ ಸೆಂಥಿಲ್ ಬಾಲಾಜಿ
ಜಾತಿ ದ್ವೇಷ ತಡೆಗಟ್ಟಿ, ಮಾನವ ಹಕ್ಕುಗಳನ್ನು ಉಳಿಸುವ ದಿಶೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವರು ತಿಳಿಸಿದರು. ಮಸೂದೆಯ ಅಂಗೀಕಾರದ ನಂತರ ರಾಜ್ಯದಲ್ಲಿ ಅಂತರ್ಜಾತಿ ವಿವಾಹಗಳಿಗೆ ಹೊಸ ಆಶಾಕಿರಣ ತೆರೆಯಲಿದೆ ಎಂಬ ನಿರೀಕ್ಷೆಯಿದೆ.