Skip to main content
ವಿಡಿಯೋ
1/2
general

ಪವಿತ್ರ ರಂಜಾನ್ ಉಪವಾಸ ಅಂತ್ಯ: ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಶಾಸಕ ಇಕ್ಬಾಲ್ ಹುಸೇನ್..!

By Sushmitha R
ಪವಿತ್ರ ರಂಜಾನ್ ಉಪವಾಸ ಅಂತ್ಯ: ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಶಾಸಕ ಇಕ್ಬಾಲ್ ಹುಸೇನ್..!

ರಂಜಾನ್ ಹಬ್ಬ ಶಾಂತಿ ಪ್ರಾರ್ಥನೆಯೊಂದಿಗೆ ಉಪವಾಸ ಅಂತ್ಯ, ಇರಾನ್-ಇಸ್ರೇಲ್ ಯುದ್ಧದಿಂದ ಗ್ಯಾಸ್-ಪೆಟ್ರೋಲ್ ಸಂಕಷ್ಟ, ಮೊದಲ ಬಾರಿ ಗೆದ್ದ ಶಾಸಕರಿಗೆ ಮಂತ್ರಿ ಸ್ಥಾನ ಬೇಡಿಕೆ ಇಕ್ಬಾಲ್ ಹುಸೇನ್ರಾಮನಗರ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬವು ಜಗತ್ತಿನಾದ್ಯಂತ ಆಚರಣೆಯಾಗುತ್ತಿದೆ.

ರಂಜಾನ್ ಹಬ್ಬ: ಶಾಂತಿ ಪ್ರಾರ್ಥನೆಯೊಂದಿಗೆ ಉಪವಾಸ ಅಂತ್ಯ, ಇರಾನ್-ಇಸ್ರೇಲ್ ಯುದ್ಧದಿಂದ ಗ್ಯಾಸ್-ಪೆಟ್ರೋಲ್ ಸಂಕಷ್ಟ, ಮೊದಲ ಬಾರಿ ಗೆದ್ದ ಶಾಸಕರಿಗೆ ಮಂತ್ರಿ ಸ್ಥಾನ ಬೇಡಿಕೆ ಇಕ್ಬಾಲ್ ಹುಸೇನ್ರಾಮನಗರ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬವು ಜಗತ್ತಿನಾದ್ಯಂತ ಆಚರಣೆಯಾಗುತ್ತಿದೆ.

ಒಂದು ತಿಂಗಳ ಕಠಿಣ ಉಪವಾಸವನ್ನು ಅಂತ್ಯಗೊಳಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ. ಜಗತ್ತಿನಲ್ಲಿ ಶಾಂತಿ ನೆಲೆಸಲಿ, ಎಲ್ಲಾ ಜನರಿಗೆ ನೆಮ್ಮದಿ ದೊರಕಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಎಂದು ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ಆದರೆ ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಭಾರತದ ಜನಸಾಮಾನ್ಯರ ಮೇಲೆ ತೀವ್ರವಾಗಿ ಬೀರಿದೆ. ಸ್ಟ್ರೈಟ್ ಆಫ್ ಹಾರ್ಮುಜ್‌ನ ಮೂಲಕ ಗ್ಯಾಸ್ ಸರಬರಾಜು ಅಡೆತಡೆಗೊಂಡಿದ್ದು, ವಾಣಿಜ್ಯ ಸಿಲಿಂಡರ್‌ಗಳು ಸಿಗದೇ ಹೋಟೆಲ್‌ಗಳು ಮುಚ್ಚುತ್ತಿವೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೂ ಜನರು ಪರದಾಡುತ್ತಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗುತ್ತಿವೆ. ಇದರಿಂದ ಸಾರಿಗೆ, ಉದ್ಯಮ, ಹೋಟೆಲ್ ಮತ್ತು ಇತರ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಇಕ್ಬಾಲ್ ಹುಸೇನ್ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮೊದಲ ಬಾರಿ ಗೆದ್ದ ಶಾಸಕರ ಡಿನ್ನರ್ ಪಾರ್ಟಿ ವಿಚಾರವೂ ಚರ್ಚೆಗೆ ಬಂದಿದೆ.ZENEME Bracelet Rhodium-Plated White American Diamond Studded Handcrafted Reticulated Cuff Adjustable Bracelet For Women and Girls

ಈಗಾಗಲೇ ಮೂರು-ನಾಲ್ಕು ಬಾರಿ ಗೆದ್ದ ಶಾಸಕರು ಸಭೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮೊದಲ ಬಾರಿ ಮತ್ತು ಎರಡನೇ ಬಾರಿ ಗೆದ್ದ ಶಾಸಕರು ಸಭೆ ನಡೆಸಿದ್ದೇವೆ. ಸುಮಾರು 55 ಮಂದಿ ಶಾಸಕರು ಭಾಗವಹಿಸಿ ಊಟ ಮಾಡುತ್ತಾ ಚರ್ಚೆ ನಡೆಸಿದ್ದೇವೆ.

ನಮ್ಮ ಬೇಡಿಕೆಗಳನ್ನು ಸಿಎಂ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ತಿಳಿಸಿದ್ದೇವೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿ ಗೆದ್ದಾಗಲೇ ಸಚಿವರಾದರು. ಪ್ರಿಯಾಂಕ ಖರ್ಗೆ ಅವರೂ ಮೊದಲ ಬಾರಿಯಲ್ಲೇ ಸಚಿವ ಸ್ಥಾನ ಪಡೆದರು. ಬೆಂಗಳೂಗರಿಗೆ ಯುಗಾದಿ ಗಿಫ್ಟ್: ನೀರಿನ ಬಿಲ್ ಬಡ್ಡಿ ಸಂಪೂರ್ಣ ಮನ್ನಾ; ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಮೊದಲ ಬಾರಿ ಗೆದ್ದ ನಮಗೂ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಈ ಎಲ್ಲಾ ವಿಚಾರಗಳನ್ನು ಚರ್ಚಿಸಲಾಗಿದೆ. ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸುವ ವಿಶ್ವಾಸವಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ರಂಜಾನ್ ಹಬ್ಬದ ಶುಭಾಶಯಗಳೊಂದಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಪ್ರಾರ್ಥಿಸುತ್ತಾ, ಯುದ್ಧದಿಂದ ಉಂಟಾಗುತ್ತಿರುವ ಸಂಕಷ್ಟಗಳನ್ನು ಸರ್ಕಾರ ತ್ವರಿತವಾಗಿ ಪರಿಹರಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.ಮಮತಾ ಬ್ಯಾನರ್ಜಿಯವರ 10 ಮುಖ್ಯ ಚುನಾವಣಾ ಭರವಸೆಗಳು