ವಿಜಯನಗರ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಲೆ ಪಾತಾಳಕ್ಕೆ ಕುಸಿದಿದೆ. ಕೆಂಪು ಸುಂದರಿ ಎಂದೇ ಪ್ರಸಿದ್ಧವಾದ ಟೊಮ್ಯಾಟೋಗೆ ಇದೀಗ ಬೆಲೆಯೇ ಇಲ್ಲದಂತಾಗಿದೆ. ಕಳೆದ ಒಂದು ವಾರದಿಂದ ದಿಢೀರ್ ಕುಸಿತ ಕಂಡಿರುವ ಬೆಲೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೊಸಪೇಟೆ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಟೊಮ್ಯಾಟೋ ಬೆಳೆಯುವ ರೈತರು ಭಾರೀ ನಿರಾಶೆಗೊಂಡಿದ್ದಾರೆ. ಮೊದಲು 1000 ರಿಂದ 1200 ರೂಪಾಯಿಗೆ ಮಾರಾಟವಾಗುತ್ತಿದ್ದ ಒಂದು ಬಾಕ್ಸ್ ಟೊಮ್ಯಾಟೋ ಇದೀಗ ಕೇವಲ 100 ರಿಂದ 80 ರೂಪಾಯಿಗಳಿಗೆ ಕುಸಿದಿದೆ. ಕೆಲವು ಮಾರುಕಟ್ಟೆಗಳಲ್ಲಿ 20 ರೂಪಾಯಿಗೆ 2 ಕೆಜಿ ಅಥವಾ 4 ಕೆಜಿ ಟೊಮ್ಯಾಟೋ ಮಾರಾಟವಾಗುತ್ತಿದೆ.
ಇದರಿಂದ ರೈತರಿಗೆ ಉತ್ಪಾದನಾ ವೆಚ್ಚವೂ ವಾಪಸ್ ಸಿಗುತ್ತಿಲ್ಲ. ಟೊಮ್ಯಾಟೋ ಬೆಳೆಗೆ ಗೊಬ್ಬರ, ಬೀಜ, ಕೂಲಿ, ನೀರಾವರಿ, ಸಾಗಾಣಿಕೆ ಸೇರಿದಂತೆ ದೊಡ್ಡ ಮೊತ್ತದ ಹೂಡಿಕೆ ಮಾಡುವ ರೈತರು ಈಗ ಸಾಲದ ಹೊರೆಯಡಿಯಲ್ಲಿ ನರಳುತ್ತಿದ್ದಾರೆ.
ಪ್ರತಿದಿನ ಮಾರುಕಟ್ಟೆಗೆ ಟೊಮ್ಯಾಟೋ ತರುವ ರೈತರ ಪರಿಸ್ಥಿತಿ ದಯನೀಯವಾಗಿದೆ. ಬೆಲೆ ಕುಸಿತದಿಂದಾಗಿ ಕೆಲವರು ಬೆಳೆಯನ್ನು ಕಟಾವು ಮಾಡದೇ ಬಿಟ್ಟಿದ್ದಾರೆ ಅಥವಾ ರಸ್ತೆಗೆ ಸುರಿದು ಪ್ರತಿಭಟನೆ ನಡೆಸುತ್ತಿದ್ದಾರೆ.Shining Diva Fashion Royal Blue Crystal CZ Silver Plated Stylish Bracelet Gifts for Girls Women(9576b)
ಕರ್ನಾಟಕದ ಇತರ ಭಾಗಗಳಲ್ಲೂ ಇದೇ ಸ್ಥಿತಿ ಕಂಡುಬರುತ್ತಿದೆ. ಅಧಿಕ ಉತ್ಪಾದನೆ, ಅಂತರರಾಜ್ಯ ಬೇಡಿಕೆ ಕಡಿಮೆಯಾಗಿರುವುದು, ಮಾರುಕಟ್ಟೆಯಲ್ಲಿ ದಲ್ಲಾಳಿಗಳ ದೌರ್ಜನ್ಯ ಮುಖ್ಯ ಕಾರಣಗಳಾಗಿವೆ.
ಗ್ರಾಹಕರಿಗೆ ಟೊಮ್ಯಾಟೋ ಸಸ್ತಾಗಿ ಸಿಗುತ್ತಿದ್ದರೂ, ಬೆಳೆಗಾರರಿಗೆ ಇದು ದೊಡ್ಡ ಆಘಾತವಾಗಿದೆ. ರೈತರು ಸರ್ಕಾರದಿಂದ ತಕ್ಷಣ ಬೆಂಬಲ ಬೆಲೆ ಘೋಷಣೆ, ನಷ್ಟ ಪರಿಹಾರ ಮತ್ತು ಮಾರುಕಟ್ಟೆಯಲ್ಲಿ ನ್ಯಾಯಯುತ ದರ ನೀಡುವಂತೆ ಆಗ್ರಹಿಸುತ್ತಿದ್ದಾರೆ.ಬೆಂಡೆಕಾಯಿ ನೀರು: ಆರೋಗ್ಯಕ್ಕೆ ಒಂದು ಸರಳ ಔಷಧ..!
ಇಲ್ಲದಿದ್ದರೆ ಟೊಮ್ಯಾಟೋ ಬೆಳೆಯುವುದನ್ನೇ ಬಿಡುವ ಪರಿಸ್ಥಿತಿ ಉಂಟಾಗಬಹುದು. ವಿಜಯನಗರದ ರೈತರ ಈ ಸಂಕಷ್ಟವನ್ನು ಗಮನಿಸಿ ತ್ವರಿತ ಕ್ರಮ ಕೈಗೊಳ್ಳಬೇಕಿದೆ.ಕ್ಯಾಲ್ಸಿಯಂ ಕೊರತೆಯೇ? ಚಪ್ಪರದ ಅವರೆಕಾಯಿಯನ್ನು ತಪ್ಪದೆ ತಿನ್ನಿರಿ ? ಇಲ್ಲಿದೆ ಮಾಹಿತಿ ನೋಡಿ..!