Skip to main content
ವಿಡಿಯೋ
webstory

ಚಿನ್ನದ ದರದಲ್ಲಿ 'ಹಾವು-ಏಣಿ' ಆಟ: ಒಂದೇ ದಿನದಲ್ಲಿ ಭರ್ಜರಿ ಇಳಿಕೆ! ಗ್ರಾಹಕರಿಗೆ ಸಮಾಧಾನ ತಂದ ಇಂದಿನ ರೇಟ್

By Bhavana Gowda
ಚಿನ್ನದ ದರದಲ್ಲಿ 'ಹಾವು-ಏಣಿ' ಆಟ: ಒಂದೇ ದಿನದಲ್ಲಿ ಭರ್ಜರಿ ಇಳಿಕೆ! ಗ್ರಾಹಕರಿಗೆ ಸಮಾಧಾನ ತಂದ ಇಂದಿನ ರೇಟ್

ಚಿನ್ನದ ಬೆನ್ನಲ್ಲೇ ಬೆಳ್ಳಿಯ ಬೆಲೆಯೂ ಇಳಿಕೆಯ ಹಾದಿಯಲ್ಲಿದೆ. ಇಂದು ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ ₹225.90 ತಲುಪಿದೆ.

ಬೆಂಗಳೂರು: ಹಳದಿ ಲೋಹದ ಬೆಲೆ ಈಗ ಅಕ್ಷರಶಃ ಹಾವು-ಏಣಿ ಆಟವಾಡುತ್ತಿದೆ. ದಿನಕ್ಕೊಂದು ದರ, ಕ್ಷಣಕ್ಕೊಂದು ಏರಿಳಿತ ಕಾಣುತ್ತಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆ ಇದೀಗ ಇಳಿಕೆಯ ಹಾದಿ ಹಿಡಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಡಾಲರ್ ಸಾಮರ್ಥ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸಗಳು ಕಂಡುಬರುತ್ತಿವೆ.

ನಿನ್ನೆಯಿದ್ದ ಬೆಲೆ ಇವತ್ತಿಲ್ಲ, ಇವತ್ತಿನ ಬೆಲೆ ನಾಳೆ ಇರುತ್ತೆ ಅನ್ನೋ ನಂಬಿಕೆ ಇಲ್ಲದಂತಾಗಿರುವ ಈ ಸಮಯದಲ್ಲಿ, ಇಂದು (ಮಾರ್ಚ್ 24, 2026) ಚಿನ್ನದ ಬೆಲೆ ಗಣನೀಯವಾಗಿ ಕುಸಿದಿರುವುದು ಆಭರಣ ಪ್ರಿಯರಿಗೆ ತುಸು ನಿರಾಳ ತಂದಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (ಮಾರ್ಚ್ 24, 2026):

ಸಿಲಿಕಾನ್ ಸಿಟಿಯಲ್ಲಿ ಇಂದು ಪ್ರತಿ ಗ್ರಾಂ ಚಿನ್ನದ ಬೆಲೆ ಹೀಗಿದೆ:

24 ಕ್ಯಾರೆಟ್ (ಅಪರಂಜಿ ಚಿನ್ನ): ₹13,899 (ಪ್ರತಿ ಗ್ರಾಂ)

22 ಕ್ಯಾರೆಟ್ (ಆಭರಣ ಚಿನ್ನ): ₹12,869 (ಪ್ರತಿ ಗ್ರಾಂ)

18 ಕ್ಯಾರೆಟ್: ₹10,639 (ಪ್ರತಿ ಗ್ರಾಂ)

10 ಗ್ರಾಂ ಚಿನ್ನದ ಇಂದಿನ ಒಟ್ಟು ಬೆಲೆ:

24K: ₹1,38,990

22K: ₹1,28,690

18K: ₹1,06,390

ನಿನ್ನೆಗಿಂತ ಇಂದು ಎಷ್ಟು ಕಮ್ಮಿ? (ಮಾರ್ಚ್ 23 vs ಮಾರ್ಚ್ 24):

ನಿನ್ನೆಗೆ (ಸೋಮವಾರ) ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಮಾರ್ಚ್ 23 ರಂದು 24 ಕ್ಯಾರೆಟ್ ಚಿನ್ನದ ಬೆಲೆ ₹14,750 ಇತ್ತು, ಅದು ಇಂದು ₹13,899ಕ್ಕೆ ಇಳಿಕೆಯಾಗಿದೆ. ಅಂದರೆ ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ ಸುಮಾರು ₹851 ರಷ್ಟು ಇಳಿಕೆ ಕಂಡಂತಾಗಿದೆ.

ಬೆಳ್ಳಿ ಬೆಲೆ ಕೂಡ ಇಳಿಕೆ:

ಚಿನ್ನದ ಬೆನ್ನಲ್ಲೇ ಬೆಳ್ಳಿಯ ಬೆಲೆಯೂ ಇಳಿಕೆಯ ಹಾದಿಯಲ್ಲಿದೆ. ಇಂದು ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ ₹225.90 ತಲುಪಿದೆ.

.