ಯುದ್ಧಗಳು ಅನಿರೀಕ್ಷಿತವಾಗಿರುತ್ತವೆ, ಆದರೆ ಇರಾನ್-ಇಸ್ರೇಲ್-ಅಮೆರಿಕ ಯುದ್ಧದಲ್ಲಿ ಘಟನೆಗಳು ನಡೆಯುತ್ತಿರುವ ವೇಗವು ಜಾಗತಿಕ ಇತಿಹಾಸದಲ್ಲೇ ಹಿಂದೆಂದೂ ಸಂಭವಿಸಿಲ್ಲ.
ಇತ್ತೀಚಿನ ಬೆಳವಣಿಗೆಯೆಂದರೆ, ಟ್ರಂಪ್ ಕದನ ವಿರಾಮಕ್ಕೆ ಕೋರುತ್ತಿದ್ದಾರೆ, ಆದರೆ ಇರಾನ್ ಮಾತ್ರ ಇಸ್ರೇಲ್ ಮತ್ತು ಅಮೆರಿಕ ವಿರುದ್ಧ ಯುದ್ಧ ಮುಂದುವರಿಸಲು ನಿರ್ಧರಿಸಿದೆ. ಇರಾನ್ನಲ್ಲಿ ಮೊಜ್ತಬಾ ಖಮೇನಿ ಅವರು ಸಕ್ರಿಯವಾಗಿಲ್ಲ, ಅವರ ಧ್ವನಿಯೂ ಕೇಳಿಸುತ್ತಿಲ್ಲ. ಹಾಗಾದರೆ ಇರಾನ್ ಅನ್ನು ಮುನ್ನಡೆಸುತ್ತಿರುವುದು ಯಾರು? ಐಆರ್ಜಿಸಿ? ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬರಬೇಕಿದೆ.
ಟ್ರಂಪ್ ಪ್ರಸ್ತಾವಿಸಿರುವ 15 ಷರತ್ತುಗಳು:
ಪ್ರಸ್ತುತ ಟ್ರಂಪ್ ಅವರು ಇರಾನ್ ಮುಂದೆ 15 ಷರತ್ತುಗಳನ್ನು ಇಟ್ಟಿದ್ದು, ಒಂದು ತಿಂಗಳ ಕಾಲ ಕದನ ವಿರಾಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆ ಪ್ರಮುಖ ಅಂಶಗಳು ಇಲ್ಲಿವೆ
ಇರಾನ್ ಅಭಿವೃದ್ಧಿಪಡಿಸಿರುವ ಪರಮಾಣು ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಬೇಕು.
ಭವಿಷ್ಯದಲ್ಲಿ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವುದಿಲ್ಲ ಎಂಬ ದೃಢ ಬದ್ಧತೆ ನೀಡಬೇಕು.
ಇರಾನ್ ಭೂಭಾಗದಲ್ಲಿ ಯುರೇನಿಯಂ ಪುಷ್ಟೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಪುಷ್ಟೀಕರಿಸಿದ ಎಲ್ಲಾ ಪರಮಾಣು ವಸ್ತುಗಳನ್ನು ನಿಗದಿತ ವೇಳಾಪಟ್ಟಿಯಂತೆ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ (IAEA) ಹಸ್ತಾಂತರಿಸಬೇಕು.
ನತಾಂಜ್, ಇಸ್ಫಹಾನ್ ಮತ್ತು ಫೋರ್ಡೋ ಸೌಲಭ್ಯಗಳನ್ನು ಮುಚ್ಚಿ ನಾಶಪಡಿಸಬೇಕು.
ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ (IAEA) ಇರಾನ್‌ನ ಎಲ್ಲಾ ಮಾಹಿತಿಯನ್ನು ಪಡೆಯಲು ಅಡೆತಡೆಯಿಲ್ಲದ ಪ್ರವೇಶ ನೀಡಬೇಕು.
ಮಧ್ಯಪ್ರಾಚ್ಯದಲ್ಲಿ ನಡೆಸುತ್ತಿರುವ 'ಪ್ರಾಕ್ಸಿ' (Proxy) ಯುದ್ಧ ತಂತ್ರಗಳನ್ನು ಇರಾನ್ ಕೊನೆಗೊಳಿಸಬೇಕು.
ಪ್ರಾಕ್ಸಿ ಗುಂಪುಗಳಿಗೆ ಹಣಕಾಸು ನೆರವು ಮತ್ತು ಶಸ್ತ್ರಾಸ್ತ್ರ ಪೂರೈಕೆಯನ್ನು ಸ್ಥಗಿತಗೊಳಿಸಬೇಕು.
ಹಾರ್ಮುಜ್ ಜಲಸಂಧಿಯು ಮುಕ್ತ ಸಮುದ್ರಯಾನಕ್ಕೆ ಸದಾ ತೆರೆದಿರುತ್ತದೆ ಎಂದು ಭರವಸೆ ನೀಡಬೇಕು.
ಮುಂದಿನ ಹಂತದಲ್ಲಿ ಇರಾನ್‌ನ ಕ್ಷಿಪಣಿ ಕಾರ್ಯಕ್ರಮದ ವ್ಯಾಪ್ತಿ ಮತ್ತು ಸಂಗ್ರಹಣೆಯ ಮೇಲೆ ನಿರ್ಬಂಧ ಹೇರುವ ಬಗ್ಗೆ ಚರ್ಚಿಸಬೇಕು.
ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಕೇವಲ ಆತ್ಮರಕ್ಷಣೆಯ ಉದ್ದೇಶಗಳಿಗೆ ಮಾತ್ರ ಸೀಮಿತಗೊಳಿಸಬೇಕು.
ಇರಾನ್ ಮೇಲೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು (Sanctions) ತೆಗೆದುಹಾಕಲಾಗುವುದು.
ಬುಶೆರ್ನಲ್ಲಿ ವಿದ್ಯುತ್ ಉತ್ಪಾದನೆಗಾಗಿ ನಾಗರಿಕ ಪರಮಾಣು ಇಂಧನ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ಬೆಂಬಲ ನೀಡಲಾಗುವುದು.
ನಿರ್ಬಂಧಗಳನ್ನು ತಾನಾಗಿಯೇ ಮರುಹೇರುವ "ಸ್ನ್ಯಾಪ್ಬ್ಯಾಕ್" (Snapback) ನಿಯಮವನ್ನು ರದ್ದುಗೊಳಿಸಲಾಗುವುದು.
ಒಪ್ಪಂದಕ್ಕೆ ಇರಾನ್ ಸಂಪೂರ್ಣವಾಗಿ ಬದ್ಧವಾಗಿರಬೇಕು.
ಬಂಗಾಳದಲ್ಲಿ ಆಯೋಗದ ಅಸ್ತ್ರ: ಅಧಿಕಾರಿಗಳ ವರ್ಗಾವಣೆ ಮತ್ತು 4 ಕಟ್ಟುನಿಟ್ಟಿನ ಸೂತ್ರಗಳು – ದೀದಿಗೆ ಶುರುವಾಯಿತೇ ಆತಂಕ?
ಇರಾನ್ ಈ ಪ್ರಸ್ತಾವನೆಗೆ ತಿರುಗೇಟು ನೀಡುವ ಸಾಧ್ಯತೆಯಿದೆ. ಇಸ್ರೇಲ್ ಕೂಡ ಇಂದು ಅಧಿಕೃತ ಹೇಳಿಕೆ ನೀಡುವ ನಿರೀಕ್ಷೆಯಿದೆ. ಸದ್ಯಕ್ಕೆ ಅಮೆರಿಕ ಕದನ ವಿರಾಮಕ್ಕೆ ಒತ್ತಾಯಿಸುತ್ತಿದ್ದು, ಇಡೀ ವಿಶ್ವವು ಇರಾನ್‌ನ ಪ್ರತಿಕ್ರಿಯೆಗಾಗಿ ಕುತೂಹಲದಿಂದ ಕಾಯುತ್ತಿದೆ.