Skip to main content
ವಿಡಿಯೋ
politics

ಅಮೆರಿಕದ ಕರೆನ್ಸಿಯಲ್ಲಿ ಡೊನಾಲ್ಡ್ ಟ್ರಂಪ್ ಸಹಿ: 165 ವರ್ಷಗಳ ಸಂಪ್ರದಾಯಕ್ಕೆ ಅಂತ್ಯ!

By prasanna jodidar
 ಅಮೆರಿಕದ ಕರೆನ್ಸಿಯಲ್ಲಿ ಡೊನಾಲ್ಡ್ ಟ್ರಂಪ್ ಸಹಿ: 165 ವರ್ಷಗಳ ಸಂಪ್ರದಾಯಕ್ಕೆ ಅಂತ್ಯ!

ಡೊನಾಲ್ಡ್ ಟ್ರಂಪ್ ತರಹ ದೊಡ್ಡ ಸ್ವಮೋಹಿ ಮತ್ತೊಬ್ಬರಿರಲು ಸಾಧ್ಯವಿಲ್ಲ. ನೊಬೆಲ್ ಪ್ರಶಸ್ತಿಗಾಗಿ ಅವರ ಹಂಬಲ, ಯುದ್ಧಗಳನ್ನು ನಿಲ್ಲಿಸುವ ಅವರ ಆವೇಶ, ಯುದ್ಧಗಳನ್ನು ಮಾಡುವ ಅವರ ಗೀಳು, ದೇಶವನ್ನು ವಶಪಡಿಸಿಕೊಳ್ಳುವ ಅವರ ಆಕರ್ಷಣೆ ಮತ್ತು ವೆನೆಜುವೆಲಾದ ಅಧ್ಯಕ್ಷರನ್ನು ವಿಮಾನದ ಮೂಲಕ ಕರೆತರುವ ಅವರ ಹುಚ್ಚುತನ - ಇವೆಲ್ಲದರ ಪಟ್ಟಿಗೆ ಈಗ ಹೊಸದಾಗಿ ಸೇರ್ಪಡೆಯಾಗಿರುವುದು ಅಮೆರಿಕದ ಕರೆನ್ಸಿಯ ಮೇಲೆ ಅವರ ಸಹಿ! ಇದು ಹುಚ್ಚುತನದ ಪರಮಾವಧಿ.

ಐತಿಹಾಸಿಕ ಬದಲಾವಣೆ :

ಅಮೆರಿಕದ ಹಣಕಾಸು ಇಲಾಖೆಯು (US Treasury Department) ಗುರುವಾರ, ಮಾರ್ಚ್ 26, 2026 ರಂದು ಒಂದು ಮಹತ್ವದ ಘೋಷಣೆ ಮಾಡಿದೆ. ಇನ್ನು ಮುಂದೆ ಅಮೆರಿಕದ ಕಾಗದದ ಕರೆನ್ಸಿ ನೋಟುಗಳ ಮೇಲೆ ಡೊನಾಲ್ಡ್ ಟ್ರಂಪ್ ಅವರ ಸಹಿ ಕಾಣಿಸಿಕೊಳ್ಳಲಿದೆ.

A.T.U.N. (All Things UBER Nice) Girls Fit & Flare Casual Dress

ಸಂಪ್ರದಾಯಕ್ಕೆ ಬ್ರೇಕ್:

1861 ರಲ್ಲಿ ಅಮೆರಿಕವು ತನ್ನ ಕರೆನ್ಸಿ ನೋಟುಗಳ ಮೇಲೆ 'ಯುನೈಟೆಡ್ ಸ್ಟೇಟ್ಸ್‌ನ ಖಜಾಂಚಿ'ಯ (Treasurer of the United States) ಸಹಿಯನ್ನು ಹಾಕುವ ಸಂಪ್ರದಾಯವನ್ನು ಆರಂಭಿಸಿತ್ತು. ಈ ಬೇಸಿಗೆಯಿಂದ ಆ ಸಂಪ್ರದಾಯ ಕೊನೆಗೊಳ್ಳಲಿದ್ದು, ಅದರ ಬದಲಿಗೆ ಅಧಿಕಾರದಲ್ಲಿರುವ ಅಧ್ಯಕ್ಷರ ಸಹಿ ಇರಲಿದೆ.

ಮೊದಲ ಅಧ್ಯಕ್ಷ;

ಈ ಮೂಲಕ ಅಮೆರಿಕದ ಇತಿಹಾಸದಲ್ಲಿ ಕರೆನ್ಸಿ ನೋಟಿನ ಮೇಲೆ ಸಹಿ ಹಾಕಲಿರುವ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಡೊನಾಲ್ಡ್ ಟ್ರಂಪ್ ಪಾತ್ರರಾಗಲಿದ್ದಾರೆ.

ಮುದ್ರಣದ ವೇಳಾಪಟ್ಟಿ;

ಹೊಸ ಕರೆನ್ಸಿ ನೋಟುಗಳ ಮುದ್ರಣವು ಈ ಜೂನ್‌ನಿಂದ ಆರಂಭವಾಗಲಿದ್ದು, ಮೊದಲು 100 ಡಾಲರ್ ($100) ನೋಟುಗಳ ಮೇಲೆ ಟ್ರಂಪ್ ಸಹಿ ಇರಲಿದೆ. ಮುಂದಿನ ತಿಂಗಳಲ್ಲಿ $1, $5, $10 ಮತ್ತು $50 ಮುಖಬೆಲೆಯ ನೋಟುಗಳು ಹೊರಬರಲಿವೆ.

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಕ್ಕೆ ಇರಾನ್ ಸವಾಲು; ಭಾರತಕ್ಕೆ ಮಾತ್ರ ಮುಕ್ತ ಪ್ರವೇಶ

ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷ;

ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ನೆನಪಿಗಾಗಿ ಈ ಬದಲಾವಣೆಯನ್ನು ತರಲಾಗುತ್ತಿದೆ ಎಂದು ಖಜಾನೆ ಇಲಾಖೆ ಯೋಜಿಸಿದೆ. ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು, "ಇದು ದೇಶದ ಐತಿಹಾಸಿಕ ಸಾಧನೆಗಳನ್ನು ಗುರುತಿಸುವ ಪ್ರಬಲ ಮಾರ್ಗವಾಗಿದೆ" ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಹೊಸ ಕರೆನ್ಸಿಯು ಡೊನಾಲ್ಡ್ ಟ್ರಂಪ್ ಮತ್ತು ಸ್ಕಾಟ್ ಬೆಸೆಂಟ್ ಅವರ ಜಂಟಿ ಸಹಿಯನ್ನು ಹೊಂದಿರುತ್ತದೆ. ಇದು 150 ವರ್ಷಗಳಿಗೂ ಹೆಚ್ಚು ಕಾಲದ ಪರಂಪರೆಯನ್ನು ಕೊನೆಗೊಳಿಸಲಿದೆ. ಇನ್ನು ಮುಂದೆ ಹಳೆಯ ನೋಟುಗಳಲ್ಲಿದ್ದ ಜೆನೆಟ್ ಯೆಲೆನ್ ಮತ್ತು ಲಿನ್ ಮಲೆರ್ಬಾ ಅವರ ಸಹಿಗಳು ಭವಿಷ್ಯದ ನೋಟುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.