ತುಮಕೂರು ಜಿಲ್ಲೆಯ ಶ್ರೀ ಸಿದ್ದಗಂಗಾ ಮಠದಲ್ಲಿ ಏಪ್ರಿಲ್ 1ರಂದು ತ್ರಿವಿಧ ದಾಸೋಹಿ, ಶತಾಯುಷಿ ಶಿವೈಕ್ಯ ಶ್ರೀ ಶಿವಕುಮಾರ ಮಹಾಶಿವಯೋಗಿಗಳ 119ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಮಹೋತ್ಸವ ಅದ್ದೂರಿಯಾಗಿ ಆಚರಣೆಗೊಳ್ಳಲಿದೆ.
ಜನಮಾನಸದಲ್ಲಿ ‘ನಡೆದಾಡುವ ದೇವರು’ ಎಂದೇ ಚಿರಸ್ಥಾಯಿಯಾಗಿ ಉಳಿದಿರುವ ಸ್ವಾಮೀಜಿಯವರ ಈ ಪುಣ್ಯ ಸ್ಮರಣೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಕ್ಷಿಯಾಗಲಿದ್ದಾರೆ. ಈ ಅಭೂತಪೂರ್ವ ಕಾರ್ಯಕ್ರಮವು ಭಕ್ತರಲ್ಲಿ ಅಪಾರ ಉತ್ಸಾಹವನ್ನು ಮೂಡಿಸಿದೆ.
ಪ್ರಾತಃಕಾಲದಲ್ಲಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದೆ. ವಿವಿಧ ಮಠಾಧೀಶರು ಮತ್ತು ಸಾಧುಸಂತರು ಮಂತ್ರಘೋಷದೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ 10:30ಕ್ಕೆ ಮಠಕ್ಕೆ ಆಗಮಿಸಲಿದ್ದಾರೆ.KeeWAY V302C Dual Channel Abs Motorcycles/Bike Red Booking for Ex-Showroom Price
ಮೊದಲು ಸ್ವಾಮೀಜಿಯವರ ಗದ್ದುಗೆಗೆ ಆರತಿ ಪೂಜೆ ಸಲ್ಲಿಸಿ, ಬಳಿಕ ಮಠದ ಸುಮಾರು 10 ಸಾವಿರ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಚುಟುಕಾಗಿ ಸಂಭಾಷಿಸಲಿದ್ದಾರೆ. ನಂತರ ಉದ್ದಾನಶ್ರೀ ವೇದಿಕೆಯಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳ ಭೇಟಿಯ ಹಿನ್ನೆಲೆಯಲ್ಲಿ ಝಡ್ ಪ್ಲಸ್ ಸೆಕ್ಯೂರಿಟಿ ವ್ಯವಸ್ಥೆ ಜಾರಿಯಲ್ಲಿರುತ್ತದೆ.
ಭಕ್ತಾದಿಗಳು ವೇದಿಕೆ ಪ್ರದೇಶಕ್ಕೆ ನೀರಿನ ಬಾಟಲ್ ಅಥವಾ ಕೊಡೆ ತರಬಾರದು ಎಂದು ಸಿದ್ದಲಿಂಗ ಸ್ವಾಮಿಗಳು ಮನವಿ ಮಾಡಿದ್ದಾರೆ. ಇದರ ಜೊತೆಗೆ, ಸ್ವಾಮೀಜಿಯವರು ಲಿಂಗೈಕ್ಯರಾದ ದಿನವನ್ನು ‘ದಾಸೋಹ ದಿನ’ವನ್ನಾಗಿ ಘೋಷಿಸುವಂತೆ ಭಕ್ತರಿಂದ ಬೇಡಿಕೆ ಬಂದಿದೆ. ಈ ಸಂಬಂಧವಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಏಪ್ರಿಲ್ 1ರಂದೇ ಅಧಿಕೃತ ಆದೇಶ ಹೊರಡಿಸುವಂತೆ ಒತ್ತಾಯಿಸಿದ್ದಾರೆ.ಗ್ಯಾಸ್, ವಾಟರ್ ಬಿಲ್ ವಿಚಾರಕ್ಕೆ ಕಿರಿಕಿರಿ; ಬಾಡಿಗೆದಾರರ ಮೇಲೆ ಚಾಕು, ಬ್ಲೇಡ್‌ನಿಂದ ಹಲ್ಲೆ ನಡೆಸಿದ ಮನೆ ಮಾಲೀಕರು!
ವಿದ್ಯಾರ್ಥಿಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಕಾರ್ಯಕ್ರಮವನ್ನು ಚುಟುಕಾಗಿ ನಡೆಸುವ ನಿರ್ಧಾರವನ್ನು ಮಠಾಧಿಕಾರಿಗಳು ತೆಗೆದುಕೊಂಡಿದ್ದಾರೆ. ಆದರೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.
ಸ್ವಾಮೀಜಿಯವರ ದಾಸೋಹ, ಶಿಕ್ಷಣ ಮತ್ತು ಸೇವಾ ಕಾರ್ಯಗಳನ್ನು ಸ್ಮರಿಸುವ ಈ ಪುಣ್ಯ ದಿನವು ಕರ್ನಾಟಕದಲ್ಲಿ ವಿಶೇಷ ಮಹತ್ವ ಪಡೆದಿದೆ. ಈ ಕಾರ್ಯಕ್ರಮವು ಧಾರ್ಮಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಮಹತ್ವವನ್ನು ಹೊಂದಿದೆ. ಇರಾನ್‌ಗೆ ಭಾರೀ ಆಘಾತ: ಸೈನಿಕರ ಶೌರ್ಯವನ್ನು ಕೊಂಡಾಡಿದ ಟ್ರಂಪ್; ಸರ್ವೋಚ್ಛ ನಾಯಕ ಇನ್ನಿಲ್ಲ..!