ತಮ್ಮ ಆವೇಶಭರಿತ ಮಾತುಗಳು ಮತ್ತು ಕಾಂಗ್ರೆಸ್ ವಿರುದ್ಧದ ತೀಕ್ಷ್ಣ ವಾಗ್ದಾಳಿಗಳಿಗೆ ಹೆಸರಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಈ ಬಾರಿ ಬಿಜೆಡಿ ನಾಯಕ ಬಿಜು ಪಟ್ನಾಯಕ್ ಅವರ ಮೇಲೆ ದಾಳಿ ಮಾಡುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ದುಬೆ, ದಂತಕಥೆ ಬಿಜು ಪಟ್ನಾಯಕ್ ಅವರಿಗೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಜೊತೆ ನಂಟಿತ್ತು ಎಂದು ಹೇಳುವ ಮೂಲಕ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ. 1962ರ ಸಮಯದಲ್ಲಿ ಬಿಜು ಪಟ್ನಾಯಕ್ ಅವರು ಸಿಐಎ ಮತ್ತು ಅಂದಿನ ಪ್ರಧಾನಿ ನೆಹರು ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅವರು ಸಂಸತ್ತಿನ ವೇದಿಕೆಯಲ್ಲಿ ಆರೋಪಿಸಿದರು. A.T.U.N. (All Things UBER Nice) Girls Fit & Flare Casual Dress
ನೆಹರು ಅವರು ಭಾರತ-ಚೀನಾ ಯುದ್ಧವನ್ನು ಅಮೆರಿಕದ ಹಣದ ಸಹಾಯದಿಂದಲೇ ಹೋರಾಡಿದ್ದರು ಮತ್ತು ಬಿಜು ಪಟ್ನಾಯಕ್ ಅವರು ರಕ್ಷಣಾ ವಿಷಯಗಳ ಕುರಿತು ಸಿಐಎ ಜೊತೆ ಚರ್ಚಿಸಲು ಮಧ್ಯವರ್ತಿಯಾಗಿದ್ದರು ಎಂದು ದುಬೆ ವಿವರಿಸಿದರು. ಇದಕ್ಕೆ ಸಾಕ್ಷಿಯಾಗಿ ನೆಹರು ಅವರು ಬರೆದಿದ್ದಾರೆನ್ನಲಾದ ಎರಡು ಪತ್ರಗಳನ್ನು ಅವರು ಉಲ್ಲೇಖಿಸಿದ್ದು, ಪಟ್ನಾಯಕ್ ಅವರನ್ನು ಸಿಐಎ ಮತ್ತು ಪೆಂಟಗನ್ ಸಂಬಂಧಿತ ಎರಡು ಕೆಲಸಗಳಿಗಾಗಿ ವಾಷಿಂಗ್ಟನ್‌ಗೆ ಕಳುಹಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.
ಒಡಿಶಾದ ಚರ್ಬಾಟಿಯಾ ವಾಯುನೆಲೆಯನ್ನುಅಮೆರಿಕಕ್ಕಾಗಿ ನಿರ್ಮಿಸಲಾಗಿದೆ ಎಂದು ಹೇಳುವ ಮೂಲಕ ದುಬೆ ಬಿಜೆಡಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಮೆರಿಕದ ಸಿಐಎ ತನ್ನ 'ಯು-2' (U-2) ಗೂಢಚಾರಿ ವಿಮಾನಗಳಿಗಾಗಿ ಭಾರತದಲ್ಲಿ ನೆಲೆಯನ್ನು ಬಯಸಿತ್ತು ಮತ್ತು ಬಿಜು ಪಟ್ನಾಯಕ್ ಅದನ್ನು ಅವರಿಗೆ ನೀಡಿದ್ದರು ಎಂದು ಅವರು ಆರೋಪಿಸಿದರು.
ಮಾರ್ಚ್ 30, 2026 ರಂದು, ಬಿಜೆಡಿ ಸದಸ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸಲು ಸಂಸತ್ತಿನಿಂದ ಹೊರನಡೆದರು. ನವೀನ್ ಪಟ್ನಾಯಕ್ ಅವರು ದುಬೆ ಅವರ ಹೇಳಿಕೆಯನ್ನು "ಅತಿರೇಕ ಮತ್ತು ಸುಳ್ಳು" ಎಂದು ಕಿಡಿಕಾರಿದ್ದಲ್ಲದೆ, "ದುಬೆ ಅವರಿಗೆ ಮಾನಸಿಕ ವೈದ್ಯರ ಚಿಕಿತ್ಸೆಯ ಅಗತ್ಯವಿದೆ" ಎಂದು ಲೇವಡಿ ಮಾಡಿದರು. ಭಾರತ-ಚೀನಾ ಸಂಬಂಧ: ಏಷ್ಯಾದ ಇಬ್ಬರು ದಿಗ್ಗಜರು ಒಂದೇ ಹಾದಿಯಲ್ಲಿದ್ದಾರೆಯೇ..?
ದಾಖಲಿತ ಇತಿಹಾಸದ ಪ್ರಕಾರ, ಬಿಜು ಪಟ್ನಾಯಕ್ ಅವರು ಒಬ್ಬ ಶ್ರೇಷ್ಠ ಪೈಲಟ್ ಮತ್ತು ನೆಹರು ಅವರ ರಕ್ಷಣಾ ಸಲಹೆಗಾರರಾಗಿದ್ದರು.
ಶೀತಲ ಸಮರದ ಕಾಲದಲ್ಲಿ ಅವರು ಅಮೆರಿಕದ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದು ನಿಜ. 1963ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ, ಮಿಲಿಟರಿ ನೆರವು ಕೋರಲು ನೆಹರು ಅವರು ಬಿಜು ಪಟ್ನಾಯಕ್ ಅವರನ್ನು ಅಮೆರಿಕಕ್ಕೆ ಕಳುಹಿಸಿದ್ದರು ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಗಳಿವೆ. ಬಂಗಾಳದಲ್ಲಿ 'ಭಯ' ವರ್ಸಸ್ 'ವಿಶ್ವಾಸ' - ಅಮಿತ್ ಶಾ ರಣಕಹಳೆ..!
ಚರ್ಬಾಟಿಯಾ ವಾಯುನೆಲೆಯಲ್ಲಿ 'ಏವಿಯೇಷನ್ ರಿಸರ್ಚ್ ಸೆಂಟರ್' (ARC) ನಿರ್ಮಿಸುವಲ್ಲಿ ಪಟ್ನಾಯಕ್ ಪ್ರಮುಖ ಪಾತ್ರ ವಹಿಸಿದ್ದರು. ಇದನ್ನು ಇಬ್ಬರು ರಾಷ್ಟ್ರಗಳ ನಡುವಿನ 'ಆಯಕಟ್ಟಿನ ಸಹಕಾರ' ಎಂದು ಪರಿಗಣಿಸಬಹುದೇ ಹೊರತು, ಅವರನ್ನು 'ಏಜೆಂಟ್' ಎಂದು ಕರೆಯುವುದು ಸರಿಯಲ್ಲ ಎಂಬುದು ಇತಿಹಾಸಕಾರರ ಅಭಿಪ್ರಾಯ.