Skip to main content
ವಿಡಿಯೋ
1/2
crime

ಮೈಸೂರಿನಲ್ಲಿ ತೃತೀಯ ಲಿಂಗಿಗಳ ಮೇಲೆ ತಲ್ವಾರ್ ದಾಳಿ: 200 ರೂಪಾಯಿ ಹಣದ ವಿಚಾರಕ್ಕೆ ಕಿರಾತಕರ ಹುಚ್ಚಾಟ..!

By Sushmitha R
ಮೈಸೂರಿನಲ್ಲಿ ತೃತೀಯ ಲಿಂಗಿಗಳ ಮೇಲೆ ತಲ್ವಾರ್ ದಾಳಿ: 200 ರೂಪಾಯಿ ಹಣದ ವಿಚಾರಕ್ಕೆ ಕಿರಾತಕರ ಹುಚ್ಚಾಟ..!

ಮೈಸೂರಿನ ಅಮೃತ ಬಡಾವಣೆಯ ನಿವಾಸಿಗಳಾದ ಸಲೀಮ್ ಪಾಷಾ (30) ಮತ್ತು ಆನಮ್ (21) ಎಂಬ ತೃತೀಯ ಲಿಂಗಿಗಳ ಮೇಲೆ ಈ ಹಲ್ಲೆ ನಡೆದಿದೆ.

ಮೈಸೂರಿನ ಅಮೃತ ಬಡಾವಣೆಯ ನಿವಾಸಿಗಳಾದ ಸಲೀಮ್ ಪಾಷಾ (30) ಮತ್ತು ಆನಮ್ (21) ಎಂಬ ತೃತೀಯ ಲಿಂಗಿಗಳ ಮೇಲೆ ಈ ಹಲ್ಲೆ ನಡೆದಿದೆ. ಆರೋಪಿಗಳಾದ ಸಯ್ಯದ್ ಫರ್ದಿನ್ ಮತ್ತು ತಾಬ್ರೇಸ್ ಎಂಬುವವರು ಈ ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದಾರೆ. ಘಟನೆಯು ರಾತ್ರಿ ಸುಮಾರು 9:30ರ ಸಮಯದಲ್ಲಿ ನಡೆದಿದೆ ಎನ್ನಲಾಗಿದೆ.

ಆರೋಪಿ ತಾಬ್ರೇಸ್ ಅಲಿಯಾಸ್ ಗುಡಿ ಎಂಬಾತ ಆನಮ್ ಅವರ ಕಾರಿನಲ್ಲಿದ್ದ 200 ಹಣವನ್ನು ಕದಿಯಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಇದನ್ನು ಗಮನಿಸಿದ ಆನಮ್ ಮತ್ತು ಸಲೀಮ್ ಪಾಷಾ ಅವರು ತಾಬ್ರೇಸ್‌ನನ್ನು ತಡೆದು ಪ್ರಶ್ನಿಸಿದ್ದಾರೆ. YouBella Jewellery Stylish Gold Plated Floral Necklace Jewellery Set with Earrings for Women and Girls

ಕೇವಲ ಹಣದ ವಿಚಾರಕ್ಕೆ ಶುರುವಾದ ಈ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ತನ್ನ ಬಳಿಯಿದ್ದ ತಲ್ವಾರ್‌ನಿಂದ ಆರೋಪಿಗಳು ತೃತೀಯ ಲಿಂಗಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ತಲ್ವಾರ್ ದಾಳಿಯಿಂದಾಗಿ ಸಲೀಮ್ ಮತ್ತು ಆನಮ್ ಅವರಿಗೆ ತೀವ್ರ ರಕ್ತಗಾಯಗಳಾಗಿದ್ದು, ಹಲ್ಲೆ ನಡೆಸಿದ ತಕ್ಷಣ ಆರೋಪಿಗಳಾದ ಸಯ್ಯದ್ ಫರ್ದಿನ್ ಮತ್ತು ತಾಬ್ರೇಸ್ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.ನಾಳೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ! ಕರೆಂಟ್, ನೀರು ಮತ್ತು ಟೋಲ್ ದರ ದುಬಾರಿ

ಈ ಘಟನೆಗೆ ಸಂಬಂಧಿಸಿದಂತೆ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರ ಬಳಸಿ ಹಲ್ಲೆ ನಡೆಸಿರುವುದು ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ.6 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆ ಡಿಸಿ..!