Skip to main content
ವಿಡಿಯೋ
politics

ಅಮೆರಿಕಕ್ಕೆ ಇರಾನ್ ಎಚ್ಚರಿಕೆ: "ಕಣ್ಣಿಗೆ ಕಣ್ಣಲ್ಲ, ಕಣ್ಣಿಗೆ ತಲೆ ಉರುಳಿಸುತ್ತೇವೆ" - ಸಂಕಷ್ಟದಲ್ಲಿ ಟ್ರಂಪ್ ಆಡಳಿತ!

By prasanna jodidar
ಅಮೆರಿಕಕ್ಕೆ ಇರಾನ್ ಎಚ್ಚರಿಕೆ: "ಕಣ್ಣಿಗೆ ಕಣ್ಣಲ್ಲ, ಕಣ್ಣಿಗೆ ತಲೆ ಉರುಳಿಸುತ್ತೇವೆ" - ಸಂಕಷ್ಟದಲ್ಲಿ ಟ್ರಂಪ್ ಆಡಳಿತ!

ಇರಾನ್ ಟ್ರಂಪ್‌ಗೆ ತೀವ್ರ ಎಚ್ಚರಿಕೆ: “ಕಣ್ಣಿಗೆ ತಲೆ” ನೀತಿ! ಅಮೆರಿಕ ನೌಕೆಗಳನ್ನು ಪರ್ಷಿಯನ್ ಕೊಲ್ಲಿಯಲ್ಲಿ ಮುಳುಗಿಸುತ್ತೇವೆ!

ತೆಹ್ರಾನ್: ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧವು ದಿನದಿಂದ ದಿನಕ್ಕೆ ಗೊಂದಲಮಯವಾಗುತ್ತಿದ್ದರೂ, ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಈಗ ಕೆಲವು ಸ್ಪಷ್ಟ ಚಿತ್ರಣಗಳು ಹೊರಬರುತ್ತಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಯಾವುದೇ ಪ್ರತಿಪಾದನೆಗಳನ್ನು ಇರಾನ್ ಒಪ್ಪಿಕೊಳ್ಳುತ್ತಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಯುದ್ಧದಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಮಾತ್ರ ತಮ್ಮ ಗುರಿಗಳನ್ನು ಸಾಧಿಸುತ್ತಿರುವಂತೆ ಕಾಣುತ್ತಿದೆ. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes)

ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಅಮೆರಿಕ ಅಧ್ಯಕ್ಷರು ಈಗ ಇತ್ತ ಯುದ್ಧದಿಂದ ಹಿಂದೆ ಸರಿಯಲಾಗದ, ಅತ್ತ ಯುದ್ಧವನ್ನು ಮುಂದುವರಿಸಲಾಗದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಯುದ್ಧದಲ್ಲಿ ಅಮೆರಿಕವು ಅತ್ಯಂತ ಹತಾಶ ಸ್ಥಿತಿಯಲ್ಲಿದೆ. ಟ್ರಂಪ್ ಆಡಳಿತವು ಯುದ್ಧದ ರಣಾಂಗಣದಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಮಾತ್ರವಲ್ಲದೆ, ಸ್ವದೇಶದಲ್ಲೂ ಅವರ ಜನಪ್ರಿಯತೆ ಕುಸಿಯುತ್ತಿದೆ. ಹಿಂದೆ ಟ್ರಂಪ್ ನೀಡಿದ್ದ 15 ಅಂಶಗಳ ಶಾಂತಿ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿತ್ತು, ಆದರೆ ಈಗ ಇರಾನ್ ಅಮೆರಿಕದೊಂದಿಗೆ ಮಾತುಕತೆ ನಡೆಸಲೂ ನಿರಾಕರಿಸುತ್ತಿದೆ.

ಇರಾನ್ ರೆವಲ್ಯೂಷನರಿ ಗಾರ್ಡ್ಸ್ (IRGC) ಮಾಜಿ ಮುಖ್ಯಸ್ಥ ಮೊಹ್ಸೆನ್ ರೆಜಾಯಿ, ಅಲ್ಲಿನ ಸರ್ಕಾರಿ ಸುದ್ದಿ ಸಂಸ್ಥೆ 'ಇರ್ನಾ'ಗೆ (IRNA) ನೀಡಿದ ಸಂದರ್ಶನದಲ್ಲಿ ಟ್ರಂಪ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಅವರು ತಮ್ಮ ಹೇಳಿಕೆಯಲ್ಲಿ ಅತ್ಯಂತ ಸ್ಪಷ್ಟವಾಗಿದ್ದರು.

"ಇರಾನ್ ಇನ್ನು ಮುಂದೆ 'ಕಣ್ಣಿಗೆ ಕಣ್ಣು' ಎಂಬ ನೀತಿಯನ್ನು ಅನುಸರಿಸುವುದಿಲ್ಲ. ನಾವು ಇನ್ನು ಮುಂದೆ 'ಕಣ್ಣಿಗೆ ತಲೆ'  ಎಂಬ ನೀತಿಗೆ ಬದ್ಧರಾಗಿದ್ದೇವೆ. ಅಮೆರಿಕ ಏನಾದರೂ ನಮ್ಮ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದರೆ, ನಾವು ಅವರ ನೌಕೆಗಳನ್ನು ನಿಷ್ಕ್ರಿಯಗೊಳಿಸುತ್ತೇವೆ. ಅಮೆರಿಕವು ಇರಾನ್ ಇಸ್ಲಾಮಿಕ್ ಗಣರಾಜ್ಯದ ಮೇಲೆ ದಾಳಿ ಮಾಡಿದರೆ, ನಮ್ಮ ಪ್ರತಿಕ್ರಿಯೆಯು ಕೇವಲ ಪ್ರತೀಕಾರವಾಗಿರುವುದಿಲ್ಲ, ಬದಲಾಗಿ ನಾವು ಅಮೆರಿಕವನ್ನು ಪರ್ಷಿಯನ್ ಕೊಲ್ಲಿಯಲ್ಲಿ ಮುಳುಗಿಸುತ್ತೇವೆ."

ಇರಾನ್ ಎಕ್ಸ್ಪೀಡಿಯನ್ಸಿ ಡಿಸ್ಸರ್ನ್ಮೆಂಟ್ ಕೌನ್ಸಿಲ್ ಸದಸ್ಯರೂ ಆಗಿರುವ ಮೊಹ್ಸೆನ್ ರೆಜಾಯಿ, ಇರಾನ್ ಬೇಡಿಕೆಗಳನ್ನು ಸ್ಪಷ್ಟಪಡಿಸಿದ್ದಾರೆ. ಅಮೆರಿಕದಿಂದ ಉಂಟಾದ ನಷ್ಟಕ್ಕೆ ಸಂಪೂರ್ಣ ಪರಿಹಾರ, ಇರಾನ್ ಮೇಲಿನ ಎಲ್ಲಾ ನಿರ್ಬಂಧಗಳ ತೆರವು ಮತ್ತು ಇರಾನ್ ಆಂತರಿಕ ವಿಷಯಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಭರವಸೆಯನ್ನು ಇರಾನ್ ಬಯಸುತ್ತಿದೆ. ವಿಜಯ್ vs ಡಿಎಂಕೆ: ತಮಿಳುನಾಡಿನಲ್ಲಿ ಚುನಾವಣಾ ಸಮರ ತೀವ್ರ!

ಉಭಯ ರಾಷ್ಟ್ರಗಳ ನಡುವೆ ಯಾವುದೇ ಮಾತುಕತೆ ಅಥವಾ ಸಂಧಾನ ಪ್ರಕ್ರಿಯೆ ನಡೆಯುತ್ತಿಲ್ಲ ಮತ್ತು ಅಮೆರಿಕ ವಿಷಯದಲ್ಲಿ ಸುಳ್ಳು ಹೇಳುತ್ತಿದೆ ಎಂದು ಅವರು ಅಧಿಕೃತವಾಗಿ ಘೋಷಿಸಿದ್ದಾರೆ. "ಬಂಗಾಳ ಚುನಾವಣೆ 2026: ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರದ ಕಾರ್ಮೋಡ – ಮಮತಾ ಬ್ಯಾನರ್ಜಿ ಅಸ್ತಿತ್ವಕ್ಕೆ ಸವಾಲು."

ಏಪ್ರಿಲ್ 6 ವೇಗವಾಗಿ ಹತ್ತಿರವಾಗುತ್ತಿದೆ, ಟ್ರಂಪ್ ಅವರು ಮತ್ತೆ ವಿಷಯದಲ್ಲಿ ಹೇಗೆ ಯು-ಟರ್ನ್  ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇರಾನ್ ಹೇಳಿಕೆಗಳಿಂದ ಅಮೆರಿಕ ಸದ್ಯಕ್ಕೆ ಹಿನ್ನಡೆಯಲ್ಲಿದೆ ಎಂಬುದು ಸ್ಪಷ್ಟವಾಗುತ್ತಿದೆ.