ಉಪ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪಕ್ಷಗಳ ಪ್ರಚಾರವೂ ಭರದಿಂದ ಸಾಗಿದೆ. ಆದರೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಅಸಮಾಧಾನವೇ ಈಗ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ.
ಸಮುದಾಯಕ್ಕೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಕೆಲ ನಾಯಕರನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಖುದ್ದು ಅಖಾಡಕ್ಕಿಳಿದು ಸಮಾಧಾನಪಡಿಸಿದ್ದರೂ, ಕೆಲ ಮುಖಂಡರ ಆಕ್ರೋಶದ ಕಿಚ್ಚು ಇನ್ನೂ ಆರಿಲ್ಲ.
ಹೀಗಾಗಿ ಮುಸ್ಲಿಂ ಮುಖಂಡರ ಮನೆಗಳಿಗೆ ಕಾಂಗ್ರೆಸ್ ನಾಯಕರ ಮಾರ್ಚ್ ಫಾಸ್ಟ್ ನಡೆಯುತ್ತಿದೆ. ಉಪ ಚುನಾವಣೆಯ ಪ್ರಚಾರದ ಭರಾಟೆಯ ನಡುವೆಯೂ ಅಲ್ಪಸಂಖ್ಯಾತರ ಮುಖಂಡರನ್ನು ಸಮಾಧಾನ ಪಡಿಸುವ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.Generic Oneness Plane Glossy Metal Bangles Set for Women and Girls - (Pack of 48 Bangles) _Available in Many Colours
ಇದೇ ಕಾರಣಕ್ಕೆ ದಾವಣಗೆರೆಗೆ ಪ್ರಚಾರಕ್ಕೆ ಬಂದ ನಾಯಕರೆಲ್ಲ ಅಲ್ಪಸಂಖ್ಯಾತರ ಮನೆಗೆ ತೆರಳಿ ಮಾತುಕತೆ ನಡೆಸುತ್ತಿದ್ದಾರೆ. ಒಂದೊಮ್ಮೆ ಮುಸ್ಲಿಂ ಸಮುದಾಯ ನಮಗೆ ಕೈಕೊಟ್ಟರೆ ಎಂಬ ಆತಂಕ ನಾಯಕರಿಗೆ ಶುರುವಾಗಿದೆ. ಸಚಿವ ಜಮೀರ್ ಅಹಮದ್ ಖಾನ್ ಕೂಡ ಇತ್ತ ಮುಖ ಮಾಡದಿರುವುದು ಟೆನ್ಷನ್ ಹೆಚ್ಚಿಸಿದೆ.
ಕ್ಷೇತ್ರಕ್ಕೆ ಜಮೀರ್ ಪ್ರಚಾರಕ್ಕೆ ಬರಬೇಕೆಂಬ ಬೇಡಿಕೆ ಹೆಚ್ಚಿದ್ದರೂ, ಸಚಿವರು ಕೇರಳಕ್ಕೆ ಹೋಗಿ ಕುಳಿತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಿಸುವ ಬಗ್ಗೆ ಜಮೀರ್ ಶಪಥ ಮಾಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ ಕಾರಣ ಅವರು ಬೇಸರಗೊಂಡಿದ್ದಾರಾ ಎಂಬ ಅನುಮಾನವೂ ಮೂಡಿದೆ. "ಭಯೋತ್ಪಾದನೆಯ ಪೋಷಕನೇ ಈಗ ಬಲಿಪಶು? ಪಾಕಿಸ್ತಾನದ ಉರುಳಿಗೆ ಸಿಲುಕಿದ ಅಸಿಮ್ ಮುನೀರ್ ಮತ್ತು ಮಿಲಿಟರಿ ಶಕ್ತಿ!"
ಇದೇ ಕಾರಣಕ್ಕೆ ಅವರು ದಾವಣಗೆರೆಯತ್ತ ಮುಖ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಮತಬೇಟೆ ನಡೆಸಲಿದ್ದಾರೆ. ಅಹಿಂದಾ ಮತಗಳೇ ಅಧಿಕವಾಗಿರುವ ಗ್ರಾಮೀಣ ಪ್ರದೇಶಗಳ ಮೇಲೆ ಸಿಎಂ ಕಣ್ಣಿಟ್ಟಿದ್ದು, ನಾಗನೂರು, ಶಿರಮಗೊಂಡನಹಳ್ಳಿ, ಆರನೇ ಮೈಲು ಕಲ್ಲು, ಹೊಸ ಬೆಳವನುರು, ತುರ್ಚಘಟ್ಟ, ಹೊಸ ನಾಯಕನಹಳ್ಳಿ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ಮಧ್ಯಾಹ್ನ ಹದಡಿ ಗ್ರಾಮದಲ್ಲಿನ ಸಾರ್ವಜನಿಕ ಸಭೆಯಲ್ಲಿಯೂ ಅವರು ಭಾಗಿಯಾಗಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಪರ ಮತಯಾಚನೆ ಮಾಡಲಿದ್ದಾರೆ. ಈ ಅಸಮಾಧಾನವು ಕಾಂಗ್ರೆಸ್‌ನ ಮತಬ್ಯಾಂಕ್‌ಗೆ ತೀವ್ರ ಪರಿಣಾಮ ಬೀರಬಹುದು ಎಂಬ ಆತಂಕ ಪಕ್ಷದಲ್ಲಿ ಕಾಡುತ್ತಿದೆ. ಮುಸ್ಲಿಂ ಮತಗಳ ಧ್ರುವೀಕರಣ ತಪ್ಪಿಸಲು ಪಕ್ಷ ತೀವ್ರ ಪ್ರಯತ್ನ ನಡೆಸುತ್ತಿದೆ."ಬಂಗಾಳ ಚುನಾವಣೆ 2026: ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರದ ಕಾರ್ಮೋಡ – ಮಮತಾ ಬ್ಯಾನರ್ಜಿ ಅಸ್ತಿತ್ವಕ್ಕೆ ಸವಾಲು."