ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ಆಡಳಿತಾರೂಢ ಡಿಎಂಕೆ (DMK) ಮತ್ತು ಬಿಜೆಪಿ ನಡುವಿನ ವಾಗ್ಯುದ್ಧ ತಾರಕಕ್ಕೇರಿದೆ. ಇಂದು ತಿರುಚಿರಾಪಳ್ಳಿಯಲ್ಲಿ ನಡೆದ ಬೃಹತ್ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಉತ್ತರ ಪ್ರದೇಶ ಮತ್ತು ಮಣಿಪುರದ ಮಾದರಿಯಲ್ಲಿ ತಮಿಳುನಾಡಿನಲ್ಲೂ ಹಿಂಸಾಚಾರ ಹಾಗೂ ಗಲಭೆಗಳನ್ನು ಸೃಷ್ಟಿಸಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ನೇರ ಆರೋಪ ಮಾಡಿದರು.
ಬಿಜೆಪಿ ವಿರುದ್ಧ ಕಿಡಿ:
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕಿಸಿದ ಸ್ಟಾಲಿನ್, ಉತ್ತರ ಪ್ರದೇಶದಲ್ಲಿ ಗುಂಪು ಹಿಂಸಾಚಾರಗಳು ಮಿತಿಮೀರಿವೆ ಮತ್ತು ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಇನ್ನೂ ಆರಿಲ್ಲ.
ಇಂತಹದ್ದೇ ಜಾತಿ ಗಲಭೆ ಮತ್ತು ಕೋಮು ಸಂಘರ್ಷವನ್ನು ಶಾಂತಿಯುತ ತಮಿಳುನಾಡಿನಲ್ಲಿ ಹರಡಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ನಮ್ಮ ಸರ್ಕಾರ ಮತ್ತು ಡಿಎಂಕೆ ಕಾರ್ಯಕರ್ತರು ಅಂತಹ ಶಕ್ತಿಗಳನ್ನು ಹತ್ತಿಕ್ಕುವ ಮೂಲಕ ರಾಜ್ಯದ ಶಾಂತಿಯನ್ನು ಕಾಪಾಡಿದ್ದಾರೆ ಎಂದು ಗುಡುಗಿದರು.Shining Diva Fashion Latest Stylish Rose Gold Tulip Design Earrings Necklace Jewellery Set For Women (10103s)
ಡಿಎಂಕೆಯ ಜನಪ್ರಿಯ ಭರವಸೆಗಳು:
ಮಹಿಳೆಯರಿಗೆ ಆರ್ಥಿಕ ನೆರವು: ರಾಜ್ಯದ ಮಹಿಳೆಯರಿಗೆ 8,000 ಮೊತ್ತದ ವಿಶೇಷ ಕೂಪನ್ ನೀಡಲಾಗುವುದು. ಈ ಕೂಪನ್ ಬಳಸಿ ತಮಗೆ ಇಷ್ಟಬಂದ ಅಂಗಡಿಗಳಲ್ಲಿ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಬಹುದು.
ಮಾಸಿಕ ಧನಸಹಾಯ ಏರಿಕೆ: ಪ್ರಸ್ತುತ ಮಹಿಳೆಯರಿಗೆ ನೀಡಲಾಗುತ್ತಿರುವ 1,000 ಮಾಸಿಕ ನೆರವನ್ನು 2,000ಕ್ಕೆ ದುಪ್ಪಟ್ಟುಗೊಳಿಸಲಾಗುವುದು.ಬಾಬಾ ಬೈದ್ಯನಾಥ ದೇಗುಲದ ಹುಂಡಿಯಲ್ಲಿ ಪಾಕಿಸ್ತಾನಿ ಕರೆನ್ಸಿ ಪತ್ತೆ: ಆಡಳಿತ ಮಂಡಳಿ ಮತ್ತು ಭಕ್ತರಲ್ಲಿ ಅಚ್ಚರಿ...!
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ: ಉನ್ನತ ಶಿಕ್ಷಣ ಪಡೆಯುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ಈಗ ನೀಡುತ್ತಿರುವ 1,000 ಮಾಸಿಕ ಸಹಾಯಧನವನ್ನು 1,500ಕ್ಕೆ ಏರಿಕೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ತಮಿಳುನಾಡಿನಲ್ಲಿ ಸದ್ಯ ಜಾರಿಯಲ್ಲಿರುವ ಕಲ್ಯಾಣ ಯೋಜನೆಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸವನ್ನು ಸ್ಟಾಲಿನ್ ವ್ಯಕ್ತಪಡಿಸಿದರು. ಬಿಜೆಪಿಯ ವಿಭಜಕ ರಾಜಕಾರಣಕ್ಕೆ ತಮಿಳುನಾಡಿನ ಮಣ್ಣಿನಲ್ಲಿ ಜಾಗವಿಲ್ಲ ಎಂಬ ಸಂದೇಶವನ್ನು ಈ ರ‍್ಯಾಲಿಯ ಮೂಲಕ ರವಾನಿಸಿದರು.ಸಿಸಿ ಕ್ಯಾಮರಾದಲ್ಲಿ ಸೆರೆ: ಕಲಬುರಗಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ..!